ಪಿಡಿಒ ಟಿ.ಹನುಮಂತಪ್ಪ ವರ್ಗಾವಣೆಗೆ ಆಗ್ರಹ
ರಾಯಚೂರು, ಆ.೧೩- ತಾಲೂಕಿನ ಪೂರತಿಪ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಟಿ.ಹನುಮಂತಪ್ಪ ಅವರು ಯಾವುದೇ ಅಭಿವೃದ್ಧಿ ಕಾಮಗಾರಿ ಕೈಗೊಳ್ಳದೇ ಮತ್ತು ಸಾರ್ವಜನಿಕವಾಗಿ ಚುನಾಯಿತ ಸದಸ್ಯರಿಗೆ ಸ್ಪಂದಿಸದ ಇವರನ್ನು ಈ ಕೂಡಲೇ ವರ್ಗಾವಣೆ ಮಾಡುವಂತೆ ಆಗ್ರಹಿಸಿ ಗ್ರಾಮ ಪಂಚಾಯತ್ ಅಧ್ಯಕ್ಷ ಮತ್ತು ಸದಸ್ಯರು ಇಒಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ತಾಲೂಕಿನ ಪೂರತಿಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಟಿ. ಹನುಮಂತಪ್ಪ ಇವರು ಪಂಚಾಯಿತಿಯಲ್ಲಿ ಅವ್ಯವಹಾರ ಮತ್ತು ಅಧಿಕಾರಿ ದರ್ಪ ತೋರುತ್ತಿದ್ದಾರೆ ಎಂದು ದೂರಿದರು. ಚುನಾಯಿತ ಸದಸ್ಯರಲ್ಲಿ ತಾರತಮ್ಯ ವೆಸಗುತ್ತಿದ್ದಾರೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ತಮಗೆ ಕಮಿಷನ್ ಹಣ ನೀಡಿದವರಿಗೆ ಕೆಲಸ ನೀಡುವುದು ಮತ್ತು ಹಣ ನೀಡದವರಿಗೆ ಕೆಲಸ ನೀಡದೇ ಪ್ರತಿದಿನ ಕಛೇರಿಗೆ ಅಲೆದಾಡುವಂತೆ ಮಾಡುತ್ತಿದ್ದಾರೆ ಎಂದು ದೂರಿದರು. ಕೇಳಿದರೆ ಇಲ್ಲ ಸಲ್ಲದ ಸಾಬೂಬು ಹೇಳಿ ಸಂಪೂರ್ಣ ಕರ್ತವ್ಯದ ಬೇಜವಾಬ್ದಾರಿತನ ತೋರುತ್ತಿದ್ದಾರೆ. ಸಾರ್ವಜನಿಕರಿಂದ ಚುನಾಯಿತರಾದ ಗ್ರಾ.ಪಂ.ಸದಸ್ಯರಿಗೆ ಪೋನ್ ಸಂಪರ್ಕಕ್ಕೂ ಸಿಗದೇ ಮತ್ತು ಕಾಮಗಾರಿಗಳು ನೀಡದೇ ಎನ್.ಎಂ.ಆರ್‌ಗಳು ಜಿರೋ ಮಾಡಿ ಸಂಪೂರ್ಣ ನಿರ್ಲಕ್ಷ್ಯದೋರಣೆ ಅನುಸರಿಸುತ್ತಿದ್ದಾರೆ. ರಾಜಕೀಯ ದರ್ಪ ಅನುಸರಿಸುತ್ತಿದ್ದಾರೆ. ಪಂಚಾಯಿತಿಯಲ್ಲಿ ಅಭಿವೃದ್ಧಿಗಳು ಕುಂಠಿತಗೊಂಡು ಸಾರ್ವಜನಿಕರಿಂದ ಸದಸ್ಯರು ತೀವ್ರ ಮುಖಭಂಗಕ್ಕೆ ಒಳಗಾಗುತ್ತಿದ್ದಾರೆ. ಎನ್.ಎಂ.ಆರ್. ಸೇವ್ ಮಾಡಲು ಕೇಳಿದರೆ ಪಿಡಿಓ ಹೆಸರು ಹೇಳುತ್ತಿದ್ದಾರೆ ಮತ್ತು ಪಿಡಿಓ ಅವರನ್ನು ಕೇಳಿದರೆ ಇಂಜನೀಯರ್ ರವರ ಹೆಸರು ಹೇಳುತ್ತಿದ್ದಾರೆ. ಹೀಗೆ ಇಬ್ಬರು ಸೇರಿ ನಮ್ಮನ್ನು ಸಂಪೂರ್ಣವಾಗಿ ನಿರ್ಲಕ್ಷ್ಯದೋರಣೆ ಅನುಸರಿಸುತ್ತಿರುವ ಪಿಡಿಒ ಜೆಇ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.
ಈ ವಿಷಯವನ್ನು ಗಂಭೀರವಾಗಿ ಪಿಡಿಒ ಟಿ.ಹನುಮಂತಪ್ಪ ಇವರನ್ನು ಕೂಡಲೇ ವರ್ಗಾವಣೆ ಮಾಡಿ ನಮಗೆ ನಿಷ್ಠಾವಂತ ಮತ್ತು ಪ್ರಮಾಣೀಕವಾಗಿ ಕೆಲಸ ನಿರ್ವಹಿಸುವವರನ್ನು ನಿಯೋಜಿಸಬೇಕೆಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಇದ್ದರೂ.