ಪತ್ರಿಕಾ ದಿನಾಚರಣೆ
ಲಕ್ಷ್ಮೇಶ್ವರ,ಆ.13: ಪಟ್ಟಣದ ಪತ್ರಿಕಾ ಕಾರ್ಯಾಲಯದಲ್ಲಿ ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆಯನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿ ಮಾತನಾಡಿದ ಸಿಪಿಐ ನಾಗರಾಜ ಮಾಡಳ್ಳಿ ಅವರು ಪತ್ರಕರ್ತರು ಸಮಾಜಮುಖಿ ಮತ್ತು ಸಮಾಜದ ಅಭಿವೃದ್ಧಿಗಾಗಿ ನಿರಂತರ ಶ್ರಮಿಸುತ್ತಾರೆ ಓರೆ ಕೋರೆಗಳನ್ನು ಅಂಕುಡೊಂಕುಗಳನ್ನು ತಿದ್ದಿ ಜಾಗೃತ್ಯಗೊಳಿಸುವ ಕೆಲಸವನ್ನು ಪತ್ರಕರ್ತರು ಮಾಡುತ್ತಾರೆ ಸಮಾಜ ಪತ್ರಕರ್ತರಿಗೆ ಸಹಾಯ ಸಹಕಾರ ನೀಡಿ ಅವರನ್ನು ಅತ್ಯಂತ ಗೌರವದಿಂದ ಕಾಣಬೇಕು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಕೀಲರ ಸಂಘದ ಅಧ್ಯಕ್ಷರಾದ ಬಸವರಾಜ ಬಾಳೇಶ್ವರ ಮಠ ಅವರು ಪತ್ರಕರ್ತರಿಗೆ ರಕ್ಷಣೆ ಮತ್ತು ಅವರ ಕುಟುಂಬಕ್ಕೆ ಸೌಲಭ್ಯಗಳನ್ನು ಒದಗಿಸಬೇಕು ಸದಾ ಕನ್ನಡದ ರಕ್ಷಣೆಗಾಗಿ ಏಳಿಗೆಗಾಗಿ ಶ್ರಮಿಸುವ ಪತ್ರಕರ್ತರಿಗೆ ಕನಿಷ್ಠ ಸೌಲಭ್ಯವನ್ನು ಸರ್ಕಾರಗಳು ನೀಡಬೇಕು ಎಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಕಾಯಕ ರತ್ನ ಪ್ರಶಸ್ತಿ ಪುರಸ್ಕೃತರಾದ ಪೂರ್ಣಜಿ ಕರಾಟೆ ಕರ್ನಾಟಕ ಸರ್ಕಾರದ ಶ್ರೇಷ್ಠ ವೈದ್ಯ ಪ್ರಶಸ್ತಿ ವಿಜೇತ ಶ್ರೀಕಾಂತ ಕಾಟೇ ವಾಲೆ ಮಾಧ್ಯಮ ಪ್ರಶಸ್ತಿ ಪುರಸ್ಕೃತ ಮಹಾಲಿಂಗ ಪೂಜಾರ ಸಾಮಾಜಿಕ ಕಾರ್ಯಕರ್ತ ವೀರಣ್ಣ ಪವಾಡದ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ನಿವೃತ್ತ ಸುರೇಶ ಕುಂಬಾರ್ ಅವರನ್ನು ಸನ್ಮಾನಿಸಲಾಯಿತು ಪೂರ್ಣಜಿ ಕರಾಟೆ ಡಾಕ್ಟರ್ ಶ್ರೀಕಾಂತ್ ಕಾಟೇವಾಲೆ ಮತ್ತು ಸುರೇಶ ಕುಂಬಾರ ಚಂಬಣ್ಣಾ ಬಾಳಿಕಾಯಿ ಕಸಾಪ ಅಧ್ಯಕ್ಷ ಈಶ್ವರ್ ಮೆಡ್ಲೇರಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ್ ಕಳಸಾಪುರ ವಹಿಸಿದ್ದರು ಕಾರ್ಯಕ್ರಮದಲ್ಲಿ ಪದ್ಮರಾಜ ಪಾಟೀಲ್ ಗಂಗಾಧರ ಮೆಣಸಿನಕಾಯಿ ಶರಣು ಗೋಡಿ, ನಾಗೇಶ್ ಅಮರಾಪುರ್, ಪ್ರವೀಣ್ ಬಾಳಿಕಾಯಿ ಎನ್ ಆರ್ ಸಾತ್ ಪೂತೆ ಬಿ ಎಂ ಕುಂಬಾರ್ ಬಿ ಆರ್ ಮಜ್ಜಿಗುಡ್ಡ ಅಂಬರೀಶ ತೆಂಬದಮನಿ ಇಳಿಗೆರ ಸೇರಿದಂತೆ ಅನೇಕರು ಭಾಗವಹಿಸಿದ್ದರು. ನಾಗರಾಜ ಹಣಗಿ ಸ್ವಾಗತಿಸಿದರೆ ರಮೇಶ ನಾಡಿಗೇರ ಪ್ರಾಸ್ತಾವಿಕ ಮಾತನಾಡಿ ಕೊನೆಯಲ್ಲಿ ದಿಗಂಬರ ಪೂಜಾರ ವಂದಿಸಿದರು.