ನನ್ನ ಮಗಳ ಸಾವಿಗೆ ಕಾರಣರಾದವರನ್ನ ಬಂಧಿಸಲಿ
(ಸಂಜೆವಾಣಿ ವಾರ್ತೆ)
ರಾಯಚೂರು, ಆ.೧೩ – ನನ್ನ ಮಗಳಾದ ರೇಣುಕ ಇವರನ್ನು ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ನೀಡಿ ಸಾವಿಗೆ ಕಾರಣರಾದವರನ್ನು ೨ ದಿನದೊಳಗೆ ಬಂಧಿಸಬೇಕು ಇಲ್ಲವಾದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂದೆ ಧರಣಿ ಕೊಡುತ್ತೇನೆ ಎಂದು ಮೃತಳ ತಂದೆ ಶಿವರಾಜ ಎಚ್ಚರಿಸಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ನನ್ನ ಮಗಳನ್ನು ನವೆಂಬರ್ ೨೫ ೨೦೨೧ ರಂದು ದೇವದುರ್ಗ ತಾಲೂಕಿನ ಶಾಮರಾವ್ ಕಾಕಡೆ ಇವರ ಮಗನಾದ ದಾಮೋದರನಿಗೆ ನೀಡಿ ವಿವಾಹ ಮಾಡಲಾಗಿತ್ತು. ಕುಟುಂಬದಲ್ಲಿ ಕಲಹ ಉಂಟಾಗಿ ನನ್ನ ಮಗಳಿಗೆ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದರು.
ನನ್ನ ಮಗಳ ಹುಟ್ಟುಹಬ್ಬದ ದಿನದಂದು ಗಂಡನ ಕುಟುಂಬಸ್ಥರು ಊಟದಲ್ಲಿ ಮಾತ್ರೆಗಳನ್ನು ಹಾಕಿ ಕೊಲೆಮಾಡಿದ್ದಾರೆ. ಇವರು ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದರು ಇದುವರೆಗೂ ಇವರನ್ನು ಪೊಲೀಸರು ಬಂಧಿಸಿಲ್ಲ ಎರಡು ದಿನದೊಳಗೆ ಇವರನ್ನು ಬಂಧಿಸದಿದ್ದಾರೆ ಧರಣಿಯನ್ನು ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಚಂದ್ರಶೇಖರ್ ಜಾಲಹಳ್ಳಿ ಸೇರಿದಂತೆ ಇತರರು ಇದ್ದರು.