ರಾಗ ಕರೂಕೆ ಸ್ಟಡಿಯೊ ವತಿಯಿಂದ ಸ್ವಾತಂತ್ರ್ಯ ದಿನೋತ್ಸವದಿನದಂದು ನುಡಿನಮನ ಕಾರ್ಯಕ್ರಮ
ಮಾನವಿ, ಆ೧೩: ಸ್ವಾತಂತ್ರ್ಯ ದಿನೋತ್ಸವದ ಅಂಗವಾಗಿ ಪರಿಸರ ಪ್ರೇಮಿ, ಯುವಕರ ಕಣ್ಮಣಿಯಾಗಿದ್ದ ದಿವಂಗತ ರಾಜಾ ವಸಂತ್ ನಾಯಕ ಇವರ ಸ್ಮರಣಾರ್ಥಕವಾಗಿ ಮಾನವಿ ನಗರದ ಸಂಗೀತ ಕಾರ್ಯಕ್ರಮ.
ಪಟ್ಟಣದ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿಯನ್ನು ನಡೆಸಿ ಮಾತನಾಡಿದ ಸಂಗೀತ ಪ್ರಿಯರಾದ ಸುಭಾನ್ ಬೇಗ್ ಅವರು ಮಾನವಿ ತಾಲೂಕಿನ ಸಂಗೀತ ಪ್ರೀಯರಿಂದ ತಾಲೂಕ ಪಂಚಾಯತ್ ಮಾಜಿ ಅಧ್ಯಕ್ಷರು ಡಿ.ರಾಜಾ ವಸಂತ್ ನಾಯಕ್ ಅವರಿಗೆ
ರಾಗ ಕರೂಕೆ ಸ್ಟಡಿಯೊ ವತಿಯಿಂದ ಸ್ವಾತಂತ್ರ್ಯ ದಿನೋತ್ಸವದಿನದಂದು ನುಡಿ ನಮನ ಕಾರ್ಯಕ್ರಮ
ಆಯೋಜನೆ ಮಾಡಲಾಗಿದೆ.
ಪಟ್ಟಣದ ಎ. ಪಿ ಎಂ. ಸಿ ಕಾರ್ಯಾಲಯದ ಹತ್ತಿರ ಸಂಜೆ ೫ ಗಂಟೆಗೆ ಕಾರ್ಯಕ್ರಮ ಜರುಗುವದು ಹಾಗೂ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹಾನಿಯರಿಗೆ ಪ್ರೀತಿಯ ಸನ್ಮಾನ ಮಾಡಲಾಗುವದು ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಶೇಕ್ ಮೈನುದ್ದಿನ್ ಸೇರಿದಂತೆ ಮಾನವಿ ತಾಲೂಕಿನ ಸಂಗೀತ ಪ್ರಿಯರು ಉಪಸ್ಥಿತರಿದ್ದರು.