ಮನುಷ್ಯನ ಬೆಳವಣಿಗೆ ಗ್ರಂಥಾಲಯಗಳಿಂದ ಮಾತ್ರ ಸಾಧ್ಯ
ಚನ್ನಮ್ಮನ ಕಿತ್ತೂರು,ಆ.13: ಮಾನವೀಯ ಮೌಲ್ಯಗಳನ್ನು ಬೆಳಸಬೇಕೆಂದರೆ, ವ್ಯಕ್ತಿತ್ವವನ್ನು ಬದಲಿಸಿ ಮನುಷ್ಯನ ಸರ್ವತೋಮುಖ ಬೆಳವಣಿಗೆ ಆಗಬೇಕಾದರೆ ಗ್ರಂಥಗಳಿಂದ ಮಾತ್ರ ಸಾಧ್ಯ. ಎಂದು ಕಂಪ್ಯೂಟರ್ ವಿಭಾಗದ ಮುಖ್ಯಸ್ಥ ಪ್ರೊ. ಪಿ.ಬಿ.ಹೊನ್ನಪ್ಪನವರ ಹೇಳಿದರು.
ಸ್ಥಳೀಯ ಕಿನಾವಿವ ಸಂಘದ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಗ್ರಂಥಾಲಯ ಪಿತಾಮಹ ಡಾ. ಎಸ್. ಆರ್. ರಂಗನಾಥನ್ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯತಿಥಿಗಳಾಗಿ ಭಾವಚಿತ್ರಕ್ಕೆ ಪುಷ್ಪನಮನ ಮಾಡಿ ಅವರು ಮಾತನಾಡಿದರು
ಪುಸ್ತಕದ ಮೌಲ್ಯ ಮತ್ತು ಸಾರ್ಥಕತೆ ಪಡೆಯಬೇಕಾದರೆ ಉತ್ತಮ ಗ್ರಂಥಾಲಯಗಳು ಅವಶ್ಯವಾಗಿವೆ ಗ್ರಂಥಾಲಯಗಳು ಎಂದರೆ ಜ್ಞಾನ ಸಾಗರ, ಪುರಾಣ, ಇತಿಹಾಸ ಕಾಲದಿಂದಲೂ ಇಂದಿನ ಡಿಜಿಟಲ್ ಯುಗದವರೆಗೂ ಅನೇಕ ಪಂಡಿತರು, ಸಂಶೋಧಕರು, ಅನುಭಾವಿಗಳು ತಮ್ಮ ಶ್ರಮ, ಸಮಯ ಜ್ಞಾನ ಉಪಯೋಗಿಸಿ ಮುಂದಿನ ಪೀಳಿಗೆಗೆ ಗ್ರಂಥಗಳನ್ನು ರಚಿಸಿದ್ದಾರೆ, ಇಂತಹ ಜ್ಞಾನ ಗ್ರಂಥಗಳನ್ನು ಸಂಗ್ರಹಿಸಿಟ್ಟ ಜ್ಞಾನದೇಗುಲವೇ ಗ್ರಂಥಾಲಯ. ಗ್ರಂಥಾಲಯಕ್ಕೆ ಜ್ಞಾನದ ಕಣಜ ಎಂದು ಕರೆಯಲಾಗುತ್ತದೆ. ಈ ಗ್ರಂಥಗಳ ಸಂರಕ್ಷಿಸಿ ಅವುಗಳು ಸೂಕ್ತರೀತಿಯಲ್ಲಿ ಓದುಗರಿಗೆ ದೊರೆಯುವಂತೆ ಮಾಡಬೇಕು. ಭಾರತದ ಗ್ರಂಥಾಲಯ ವಿಜ್ಞಾನದ ಪಿತಾಮಹರಾದ ರಂಗನಾಥ ಅವರು ನೀಡಿದ ಕೊಡುಗೆ ಇಂದಿಗೂ ದಾರಿದೀಪವಾಗಿದೆ. ಗ್ರಂಥಾಲಯಗಳನ್ನು ಸಾರ್ವಜನಿಕರು ಉಪಯೋಗಿಸಿಕೊಂಡು ಹೆಚ್ಚಿನ ಜ್ಞಾನ ಪಡೆಯಬೇಕೆಂದರು.
ಅತಿಥಿಗಳಾಗಿ ಆಗಮಿಸಿ ಮಾತನಾಡಿ ಖಾನಾಪೂರ ಸ.ಪ್ರ.ದ ಮಹಾವಿದ್ಯಾಲಯದ ಕಂಪ್ಯೂಟರ್ ಉಪನ್ಯಾಸಕರಾದ ವಿಠ್ಠಲ ಸೊನಪ್ಪನವರ, ಇಂದಿನ ಯುವಪೀಳಿಗೆಗೆ ಓದುವ ಹವ್ಯಾಸ ಕಡಿಮೆಯಾಗಿದ್ದು ಇದರಿಂದ ಬುದ್ಧಿಶಕ್ತಿ ಕ್ಷಿಣಿಸಿತ್ತಿದೆ ವಿದ್ಯಾರ್ಥಿಗಳು ಓದುವ ಹವ್ಯಾಸವನ್ನು ರೂಢಿಸಿಕೊಂಡು ಗ್ರಂಥಗಳ ಓದಿ ಗ್ರಂಥಾಲಯದ ಸದ್ಬಳಕೆಯನ್ನು ಮಾಡಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ಪ್ರಾಚಾರ್ಯ ಡಾ. ಜಿ. ಕೆ. ಭೂಮನಗೌಡರ ವಹಿಸಿದ್ದರು. ಗ್ರಂಥಪಾಲಕರಾದ ಸತೀಶ ಸಹಾಪೂರಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ವೇಳೆ ಪ್ರೊ. ಆರ್. ಬಿ. ಹವಿನಾಳೆ, ಡಾ. ಪ್ರೋ. ಕೆ. ಆರ್. ಮೆಳವಂಕಿ, ಪ್ರೊ. ಆನಂದ ಕರೆಪ್ಪನವರ, ಪ್ರದಸ ನಿಜಲಿಂಗಪ್ಪ ಹೊಸಮನಿ ಇತರರು ವೇದಿಕಯಲ್ಲಿದ್ದರು.
ಅನಿಷಾ ಕಮ್ಮಾರ ಪ್ರಾರ್ಥನಾ ಗೀತೆಯನ್ನು ಹಾಡಿದರು, ರೇಖಾ ಗಾಣಿಗೇರ ವಂದಿಸಿದರು, ಸವಿತಾ ಮರಿತಮ್ಮನವರ ನಿರೂಪಿಸಿದರು.