ಸಿಂಧನೂರು ರೈಲ್ವೆಗೆ ಮೊದಲ ಬಲಿ ಹಾವು ಕಚ್ಚಿ ರೈತ ಸಾವು
ಸಿಂಧನೂರು,ಅ.೧೩:
ವರ್ವ ವ್ಯಕ್ತಿಗೆ ರೈಲು ಡಿಕ್ಕಿಯಾಗಿ ಸಾವನ್ನಪ್ಪಿದರೆ ನೀರು ಕಟ್ಟಲು ಹೋದ ರೈತನಿಗೆ ಹಾವು ಕಚ್ಚಿ ಸಾವನ್ನಪ್ಪಿದ ಘಟನೆ ತಾಲೂಕಿನಲ್ಲಿ ಜರುಗಿದೆ ನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ನಂತರ ಕುಟುಂಬಸ್ಥರಿಗೆ ಪೋಲಿಸರು ಶವಗಳನ್ನು ಹಸ್ತಾಂತರ ಮಾಡಿದರು.
ತಾಲ್ಲೂಕಿನ ಬೀಮರಾಜ ಕ್ಯಾಂಪನ ಬಾನುಚಂದ್ರ ತಂದೆ ಸುಬ್ಬರಾವ್ ೩೦ ರೈಲ್ವೆ ಹಳಿಗೆ ಬಿದ್ದು ಸಾವನ್ನಪ್ಪಿದರೆ ಜಮೀನಿನಲ್ಲಿ ನೀರು ಕಟ್ಟುವಾಗ ಹಾವು ಕಡಿದ ಅಮರಾಪುರ ಗ್ರಾಮದ ಸಣ್ಣ ಶರಣಪ್ಪ ತಂದೆ ಮಲ್ಲಪ್ಪ ೪೮ ಮರಣ ಹೊಂದಿದ್ದಾನೆ.
ಹುಬ್ಬಳ್ಳಿಯಿಂದ ಸಿಂಧನೂರಿಗೆ ರಾತ್ರಿ ೧೦.೩೦ಕ್ಕೆ ಬರುವ ರೈಲ್ವೆಗೆ ಬೀಮರಾಜ ಕ್ಯಾಂಪನ ಬಾನುಚಂದ್ರ ರೈಲ್ವೆ ಹಳಿ ಹತ್ತಿರ ಹೋಗುವಾಗ ರೈಲ್ವೆ ಡಿಕ್ಕಿಯಾಗಿ ಕಾಲು ಕಟ ಯಾಗಿ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ ಇಂದು ಮುಂಜಾನೆ ಮೃತ ಬಾನುಚಂದ್ರನ ಕುಟುಂಬಸ್ಥರು ಜಮೀನಿಗೆ ನೀರು ಕಟ್ಟಲು ಹೋದಾಗ ಕಾಗೆಗಳು ಕೂಗಿ ತೊಡಗಿದ್ದನ್ನು ನೋಡಿದಾಗ ಬಾನು ಚಂದ್ರನ ಶವ ಕಂಡು ಪೊಲೀಸರಿಗೆ ಮಾಹಿತಿ ನೀಡಿದ ಮೇಲೆ ಶವನ್ನು ಪೊಲೀಸರು ಮರಣೋತ್ತರ ಪರೀಕ್ಷೆ ಮಾಡಲು ಆಸ್ಪತ್ರೆಗೆ ತಂದಿದ್ದಾರೆ ಮೃತ ಬಾಲ ಚಂದ್ರನಿಗೆ ಎರಡು ಮಕ್ಕಳು ಇವೆ.
ತಾಲ್ಲೂಕಿನ ಅಮರಾಪುರ ಗ್ರಾಮದ ಸಣ್ಣ ಶರಣಪ್ಪ ಗುತ್ತಿಗೆ ಮಾಡಿದ ಜಮೀನಿಗೆ ನಿನ್ನೆ ರಾತ್ರಿ ನೀರು ಕಟ್ಟಲು ಹೋದಾಗ ಹಾವು ಕಚ್ಚಿದ್ದು ಮನೆಗೆ ಹೋಗಿ ಕುಟುಂಬಸ್ಥರಿಗೆ ಹೇಳಿದ್ದು ಕುಟುಂಬಸ್ಥರು ನಗರದ ಸರ್ಕಾರಿಗೆ ತಂದು ಚಿಕಿತ್ಸೆ ನೀಡಿದರು ಸಹ ಚಿಕಿತ್ಸೆ ಪಲಿಸದೆ ರೈತ ಸಣ್ಣ ಶರಣಪ್ಪ ಮರಣ ಹೊಂದಿದ್ದಾನೆ ಮೃತ ರೈತನಿಗೆ ಎರಡು ಮಕ್ಕಳಿಗೆ ಜಿಲ್ಲಾ ಪಂಚಾಯತ ಮಾಜಿ ಸದಸ್ಯರಾದ ಬಾಬುಗೌಡ ಬಾದರ್ಲಿ ಆಸ್ಪತ್ರೆಗೆ ಬೇಟಿ ನೀಡಿ ಮೃತ ಕುಟುಂಬಸ್ಥರಿಗೆ ಸಮದಾನ ಹೇಳಿ ಸರ್ಕಾರದಿಂದ ಬರುವ ಸೌಲಭ್ಯ ಕೊಡಿಸುವುದಾಗಿ ಹೇಳಿದರು ಹೋಸಳ್ಳಿ ಇಜೆ ಗ್ರಾಮ ಪಂಚಾಯ್ತಿ ಸದಸ್ಯರಾದ ಶ್ರೀಧರ ಗೌಡ ಹಾವು ಕಡಿದ ಅಮರಾಪುರ ಗ್ರಾಮದ ರೈತನ ಕುಟುಂಬಕ್ಕೆ ಸ್ವಾಂತನ ಹೇಳಿದರು.
ಕೊಪ್ಪಳ ರೈಲ್ವೆ ಪೋಲೀಸ ಠಾಣೆ ಆರ್ ಪಿ ಎಪ್ ಮುಖ್ಯ ಪೇದೆ ಎಸ್ ಕಾಳಪ್ಪ ಶವವನ್ನು ಆಸ್ಪತ್ರೆಗೆ ದಾಖಲು ಮಾಡಿ ಗ್ರಾಮೀಣ ಪೋಲೀಸ ಠಾಣೆಗೆ ಮಾಹಿತಿ ನೀಡಿದ ಮೇಲೆ ಗ್ರಾಮೀಣ ಪೋಲೀಸ ಠಾಣೆಯ ಪಿಎಸ್‌ಐ ಚಂದ್ರಶೇಖರ ಹಿರೇಮಠ ಆಸ್ಪತ್ರೆಗೆ ಬೇಟಿ ಮಾಹಿತಿ ಪಡೆದುಕೊಂಡು ಪ್ರಕರಣ ದಾಖಲ ಮಾಡಿಕೊಂಡಿದ್ದಾರೆ.