ಕ್ರಸ್ಟ್ ಗೇಟ್ ಅವಘಢ-ಆಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ
ರಾಯಚೂರು,ಆ.೧೩:ಕ್ರಸ್ಟ್ ಗೇಟ್‌ಗಳ ನಿರಂತರ ಪರಿಶೀಲನೆ ಮತ್ತು ಅಗತ್ಯ ಕ್ರಮವಹಿಸುವಲ್ಲಿ ವಿಫಲರಾದ ಅಧಿಕಾರಿಗಳ ಮೇಲೆ ಕಾನೂನಿನ ಕ್ರಮವಹಿಸಬೇಕೆಂದು ಕರ್ನಾಟಕ ರೈತ ಸಂಘ ಜಿಲ್ಲಾ ಸಮಿತಿ ಆಗ್ರಹಿಸುತ್ತದೆ.
ಈ ಹಿಂದೆ ಇದೇ ಆಣೆಕಟ್ಟೆಯ ಎಡದಂಡೆ ಮೇಲ್ಮಟ್ಟದ ಕಾಲುವೆಯ ಬಳಿ ಮುರಿದು ಸಣ್ಣ ಪ್ರಮಾಣದ ಅವಘಡ ಉಂಟಾಗಿ ಅಪಾರ ಪ್ರಮಾಣದ ನೀರು ಪೋಲಾದ ಅನುಭವ ಆಡಳಿತ ಮಂಡಳಿ ಅಧಿಕಾರಿಗಳಲ್ಲಿದ್ದರೂ ಸೂಕ್ತ ನಿರ್ವಹಣೆಯ ಲೋಪ ಮರಳಿ ಉಂಟಾಗಿರುವುದು ಅವರುಗಳ ಬೇಜವಾಬ್ದಾರಿ ನಡೆಯಾಗಿದೆ ಎಂದು ರೈತ ಸಂಘ ಆರೋಪಿಸಿದೆ.
ಈ ಅವಘಡವನ್ನು ಸರಿಪಡಿಸಲು ಆಣೆಕಟ್ಟೆಯಲ್ಲಿ ಸಂಗ್ರಹವಾ ೬೦ ಪ್ರಮಾಣದ ೬೫ ಟಿಎಂಸಿ ನೀರನ್ನು ನದಿಗೆ ಹರಿಬಿಡಲಾಗುತ್ತಿದೆ. ಇದರಿಂದಾಗಿ, ಈ ಆಣೆಕಟ್ಟೆಯ ಫಲಾನುಭವಿಗಳಾದ ಕರ್ನಾಟಕ, ಪ್ರದೇಶ ಮತ್ತು ತೆಲಂಗಾಣಾ ರಾಜ್ಯಗಳ ಸುಮಾರು ೩೦ ಲಕ್ಷ ಎಕರೆ ನೀರಾವರಿ ಪ್ರದೇಶದ ರೈತರ ಭವಿಷ್ಯಕ್ಕೆ ತೀವ್ರ ಆತಂಕ ಉಂಟು ಮ ತಕ್ಷಣವೇ ಅವಘಡವನ್ನು ಸರಿ ಪಡಿಸಲು ಮತ್ತು ನೀರನ್ನು ಉಳಿಸಿಕೊಳ್ಳಲು ತೀವ್ರ ಕ್ರಮಗಳಾಗದಿದ್ದಲ್ಲಿ ಈ ಮೂರು ರಾಜ್ಯಗಳ ರೈತರು ಎಕರೆಗೆ ಲಕ್ಷಾಂತರ ರೂ ಬೆಳೆ ನಷ್ಟ ಮಾಡಿಕೊಳ್ಳಬೇಕಾಗುತ್ತದೆ.
ಮುಂಬರುವ ದಿನಗಳಲ್ಲಿ ನೀರು ಸಂಗ್ರಹವಾಗುವ ಭರವಸೆಯೂ ಹೀಗಾಗಿ ಒಟ್ಟಾಗಿ ಗಮನಿಸುವಾಗ ನಷ್ಟದ ಪ್ರಮಾಣ ೩೦,೦೦೦ ಕೋಟಿ ರೂಗಳಷ್ಟಾಗಲಿದೆ.ಅದಾಗಲೆ ಕಳೆದ ವರ್ಷದ ಬರಗಾಲದಿ ಕರ್ನಾಟಕದ ಈ ಭಾಗದ ರೈತರು ನೀರಿನ ಕೊರತೆಯಿಂದ ಬೆಳೆ ನಷ್ಟ ಅನುಭವಿಸಿದ್ದಾರೆ. ಒಕ್ಕೂಟ ಹಾಗೂ ರಾಜ್ಯ ಸರಕಾರಗಳು ಪರಿಹಾರಗಳನ್ನು ನೀಡಿಲ್ಲ. ಮಾತ್ರವಲ್ಲಾ, ಬೆಳೆ ವಿಮೆಯನ್ನು ಸಮರ್ಪಕವಾಗಿ ಸಿಗುವಂತೆ ಕ್ರಮವಹಿಸಿಲ್ಲ ಎಂದು ತಿಳಿಸಿದ್ದಾರೆ.
ಭಾಗದಲ್ಲಿ ರೈತರ ಆತ್ಮಹತ್ಯೆಗಳನ್ನು ತೀವ್ರವಾಗಿ ಹೆಚ್ಚಿಸಲಿದೆ. ಆದ್ದರಿಂದ, ರಾಜ್ಯ ಸರಕಾರ ಸಾಲದ ಬಾಧೆಯನ್ನು ತಡೆಯಲು ಕ್ರಮವಹಿಸಬೇಕು. ಮತ್ತು ಪರಿಸ್ಥಿತಿಯನ್ನು ಸಮರ್ಪಕವಾಗಿ ಅವಲೋಕಿಸಿ, ನದಿಯ ಮೇಲು ಭಾಗದಲ್ಲಿ ನೀರನ್ನು ಸಂರಕ್ಷಿಸಲು ಕ್ರಮವಹಿಸಬೇಕು ಮತ್ತು ಸಮರೋಪಾದಿಯಲ್ಲಿ ಪರಣಿತರೊಂದಿಗೆ ಗೇಟ್ ನಿರ್ವಹಿಸಲು ಮುಂದಾಗುವಂತೆ ಕರ್ನಾಟಕ ಪ್ರಾಂತ ರೈತ (ಏPಖS) ಜಿಲ್ಲಾ ಸಮಿತಿ ಬಲವಾಗಿ ಒತ್ತಾಯಿಸುತ್ತದೆ.
ಈ ಸಂದರ್ಭದಲ್ಲಿ ರೈತ ಸಂಘದ ಪದಾಧಿಕಾರಿಗಳಾದ ವೀರನಗೌಡ ,ಕೆ.ಜಿ.ವಿರೇಶ,ನರಸಣ್ಣನಾಯಕ ಇತರರು ಇದ್ದರು.