ಶ್ರೀ ಕೃಷ್ಣದೇವರಾಯ ರಾಷ್ಟ್ರೀಯ ಸೇವಾ ರತ್ನ ಪ್ರಶಸ್ತಿಗೆ ಶ್ರೀನಿವಾಸ್ ಆಶಾಪೂರು ಭಾಜನ
ರಾಯಚೂರು, ಆ.೧೩: ಶ್ರೀ ಸುಜ್ಞಾನ ವಿದ್ಯಾಪೀಠ ಮತ್ತು ಸಾಂಸ್ಕೃತಿಕ ಕಲಾಮಂದಿರ ಸಾಧಕರ ಶ್ರೀ ಮಾತಾ ಪ್ರಕಾಶನ (ರಿ) ಕರ್ನಾಟಕ ಇವರ ಸಂಯುಕ್ತಾಶ್ರಯದಲ್ಲಿ ೨೦೨೪-೨೫ ನೇ ಸಾಲಿನ ನೀಡುವ ಶ್ರೀ ಕೃಷ್ಣದೇವರಾಯ ರಾಷ್ಟ್ರೀಯ ಸೇವಾ ರತ್ನ ಪ್ರಶಸ್ತಿಗೆ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಹೆಸರಾದಂತಹ ಮಧುರ ಕಂಠದ ಗಾಯಕ ಶ್ರೀನಿವಾಸ್ ಆಶಾಪೂರು ಅವರು ಭಾಜನರಾಗಿದ್ದಾರೆ. ಆ.೨೫ ರಂದು ವಿಜಯನಗರ ಸಾಮ್ರಾಜ್ಯದ ಕನ್ನಡ ವಿಶ್ವವಿದ್ಯಾಲಯ ಹಂಪಿಯ ಶ್ರೀ ಸದ್ಗುರು ಶಿವರಾಮ ಅವಧೂತರ ದಕ್ಷಿಣಕಾಶಿ ಹೇಮಕೂಟ ಹಂಪಿಯಲ್ಲಿ ಆಯೋಜಿಸಿರುವ ಕನ್ನಡ ನಾಡು ನುಡಿ ನೆಲ ಜಲ ಭಾಷೆ ಸಾಹಿತ್ಯ ಸಂಗೀತ ನಾಟಕ ಜಾನಪದ ಸಮಾಜದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.