ವೀರಶೈವ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ
ಸಂಜೆವಾಣಿ ವಾರ್ತೆ
ಬಳ್ಳಾರಿ, ಅ,13- ನಗರದ ವೀ.ವಿ.ಸಂಘದ ವೀರಶೈವ ಮಹಾವಿದ್ಯಾಲಯದ ಆ್ಯಂಟಿ ರ್ಯಾಗಿಂಗ್ ಸಮಿತಿ ವತಿಯಿಂದ ಇಂದು  ಕಾಲೇಜಿನ ವಿದ್ಯಾರ್ಥಿಗಳಿಗೆ ಅರಿವನ್ನು ಮೂಡಿಸಲು  ಪ್ರಬಂಧ ಸ್ಪರ್ಧೇಯನ್ನು  ಪ್ರತಿವರ್ಷದಂತೆ  ಏರ್ಪಡಿಸಲಾಗಿತ್ತು.
 ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಜಿ.ಮನೋಹರ, ಆ್ಯಂಟಿ ರ್ಯಾಗಿಂಗ್ ನೋಡಲ್ ಅಧಿಕಾರಿಯಾದ ಡಾ.ಕವಿತ ಸಂಗನಗೌಡ.ಎಂ ಮತ್ತು ಸದಸ್ಯರುಗಳಾದ ಶ್ರೀಮತಿ. ರಾಜಶ್ರೀ ಪಾಟೀಲ್, ಮಿಸ್.ದೀಪಾ.ಹೆದ್.ಎ.ಎಂ , ಮಿಸ್ ಪ್ರತ್ಯೂಷಾ.ಆರ್, ಮಿಸ್ ಅರ್ಚನಾ.ಕೆ.ಎಂ, ಶ್ರೀ ಸುರೇಶ್.ಎನ್ ಮತ್ತು ಶ್ರೀ ನಿಖಿಲ್ ಕುಮಾರ್.ವೈ.ಎಸ್. ಐ.ಕ್ಯೂ.ಎ.ಸಿ ಸಂಯೋಜನಾಧಿಕಾರಿಗಳಾದ ಡಾ.ವಿನೋದ್ ಕುಮಾರ್  ಈ ಪ್ರಬಂಧ ಸ್ಪರ್ಧೇಯನ್ನು ನಡೆಸಿಕೊಟ್ಟರು.