ನದಿ ನೀರು ಜಮೀನಿಗೆ ನುಗ್ಗಿ ಬೆಳೆ ಹಾನಿ ರೈತರಿಗೆ ಪರಿಹಾರ ನೀಡಿ
ದೇವದುರ್ಗ:ಅ೧೩: ಮಹಾರಾಷ್ಟ್ರ ಹಾಗೂ ರಾಜ್ಯದಲ್ಲಿ ಕೆಲವು ದಿನಗಳಿಂದ ಧಾರಾಕಾರ ಮಳೆ ಸುರಿದ ಹಿನ್ನೆಲೆಯಲ್ಲಿ ಆಲ್ಮಟ್ಟಿ ಹಾಗೂ ನಾರಾಯಣಪುರ ಜಲಾಶಯಗಳು ಭರ್ತಿಯಾಗಿ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿ ಬಿಡಲಾಗಿತ್ತು. ಕೃಷ್ಣಾ ನದಿ ನೀರು ನದಿ ಪಾತ್ರದ ಜಮೀನುಗಳಿಗೆ ನುಗ್ಗಿ ಹಿನ್ನಲೆಯಲ್ಲಿ ಅಪಾರ ಪ್ರಮಾಣದ ಬೆಳೆ ನಷ್ಟ ಉಂಟು ಮಾಡಿದ್ದು, ಕೂಡಲೇ ತಾಲೂಕು ಆಡಳಿತ ಸರ್ವೆ ನಡೆಸಿ ಬೆಳೆ ನಷ್ಟಕ್ಕೊಳಗಾದ ರೈತರಿಗೆ ಸೂಕ್ತವಾದ ಪರಿಹಾರ ನೀಡಬೇಕು ಎಂದು ರಾಜ್ಯ ರೈತ ಸಂಘದ ತಾಲೂಕ ಸಮಿತಿ ಅಧ್ಯಕ್ಷ ಹಾಜಿ ಮಸ್ತಾನ ಬಿ.ಗಣೇಕಲ್ ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಂಗಳವಾರ ಮಾತನಾಡಿದರು .
ನದಿ ಪಾತ್ರದ ಗ್ರಾಮಗಳಾದ ವೀರಗೂಟ, ಚಿಂಚೋಡಿ, ಲಿಂಗದಳ್ಳಿ ನೀಲವಂಜಿ, ಅಂಜಳ, ಅಂಚೆ ಸೂಗೂರು, ವಗಡಂಬಳಿ, ಹೂವಿನ ಹಡಗಿ, ಜೋಳದ ಹಡಗಿ, ಮ್ಯಾದರ ಗೋಳು, ಅಪ್ಪಾರಳ, ಸೇರಿದಂತೆ ವಿವಿಧ ಗ್ರಾಮದ ರೈತರ ಜಮೀನುಗಳಿಗೆ ನದಿ ನೀರು ನುಗ್ಗಿ. ಅಪಾರ ಪ್ರಮಾಣದ ಬೆಳೆ ನಷ್ಟ ಉಂಟು ಮಾಡಿದ್ದು ಕೂಡಲೇ ತಹಸಿಲ್ದಾರ ನೀರು ನುಗಿದ ಜಮೀನುಗಳು ಸರ್ವೆ ನಡೆಸಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸುವ ಮೂಲಕ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸದರು. ಅಲ್ಲದೆ ಬಹು ಗ್ರಾಮ ಕುಡಿಯುವ ನೀರು ಹಾಗೂ ಕಿರು ನೀರು ಮತ್ತು ಜಲ್ ಜೀವನ್ ಯೋಜನೆ ಅಡಿಯಲ್ಲಿ ಗ್ರಾಮಗಳಿಗೆ ಕುಡಿಯುವ ನೀರಿನ ಸರಬರಾಜ ಮಾಡಲಾಗಿದೆ. ಆದರೆ ಮಳೆ ಹಾಗೂ ಪ್ರವಾಹದಿಂದ ಕೃಷ್ಣಾ ನದಿಗೆಯ ನೀರು ತುಂಬಾ ಕಲಿಷಿತವಾಗಿದೆ. ಅದೇ ನೀರನ್ನು ನಲ್ಲಿಗಳಿಗೆ ಪೂರೈಸಲಾಗುತ್ತಿದ್ದು, ಇಂಥ ನೀರು ಕುಡಿಯುವುದರಿಂದ ಸಾರ್ವಜನಿಕರು ಮತ್ತು ಮಕ್ಕಳು ವೃದ್ಧರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು ಹಾಗಾಗಿ ಕೂಡಲೇ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಶುದ್ಧ ಕುಡಿಯುವ ನೀರು ಪೂರೈಸುವ ಮೂಲಕ ಜನರ ಮೇಲೆ ಆಗುತ್ತಿರುವ ಸಮಸ್ಯೆ ಕೂಡಲೇ ಪರಿಹರಿಸಬೇಕು. ಅಲ್ಲದೆ ರೈತರಿಗೆ ದನದ ಶೆಡ್ಡು ಸೇರಿ ವಿವಿಧ ಯೋಜನೆಗಳಲ್ಲಿ ಸರ್ಕಾರದಿಂದ ಬರುವ ಯೋಜನೆಗಳು ಪ್ರಭಾವಿಗಳು ಹಾಗೂ ಉಳ್ಳವರು ಪಾಲಾಗುತ್ತಿದ್ದು, ಜಿಲ್ಲಾಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ಸರ್ಕಾರದ ಯೋಜನೆ ರೈತರು ಹಾಗೂ ಸಾರ್ವಜನಿಕರಿಗೆ ನಿಜವಾದ ಫಲಾನುಭವಿಗಳಿಗೆ ಮುಡಿಸುವಂತ ಕೆಲಸ ಮಾಡಬೇಕು ಎಂದು ಆಗ್ರಹಿಸದರು. ಇಲ್ಲದೆ ನಿರ್ಲಕ್ಷ ವಹಿಸಿದರೆ . ಮುಂದಿನ ದಿನಗಳಲ್ಲಿ ರೈತರ ಜೊತೆ ಸೇರಿ ಸಂಘಟನೆ ವತಿಯಿಂದ ವಿಧಾನಸೌಧದ ಮುಂದೆ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಹನುಮಗೌಡ ಜಾಲಹಳ್ಳಿ, ತಿಮ್ಮಣ್ಣ ನಾಯಕ ಸೋಮನಮರಡಿ, ಹುಸೇನ್ ಬಾಷಾ ಸೋಮನಮರಡಿ, ರಾಮನಗೌಡ ಬಿ ಗಣೇಕಲ್, ಸೇರಿದಂತೆ ಇತರರಿದ್ದರು.