ದೇಶದಲ್ಲಿ ಸ್ವಚ್ಚತ ಕಾರ್ಯಕ್ಕೆ ಸ್ವಯಂ ಪ್ರೇರಿತ ಭಾಗವಹಿಸಿ
ವಿಜಯಪುರ,ಅ.೧-ನಾವು ಈ ದೇಶವನ್ನು ಅಚ್ಚುಕಟ್ಟಾಗಿ ಮತ್ತು ಸ್ವಚ್ಛವಾಗಿಡುವ ಮೂಲಕ ಸ್ವಚ್ಛತೆಯ ಕಾರ್ಯದಲ್ಲಿ ಸ್ವಯಂ ಪ್ರೇರಿತವಾಗಿ ಭಾಗವಹಿಸುವುದು ನಮ್ಮೆಲ್ಲರ ಮೊದಲ ಆದ್ಯ ಕರ್ತವ್ಯ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಶ್ರೀವಾಣಿ ಕೋನರೆಡ್ಡಿ ತಿಳಿಸಿದರು.
ಇವರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಗ್ರಂಥಾಲಯದ ಆವರಣದಲ್ಲಿ ಜಿಲ್ಲಾ ಮೈ ಭಾರತ್, ನೆಹರು ಯುವ ಕೇಂದ್ರ, ಸರ್ಕಾರಿ ಪದವಿ ಪೂರ್ವ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಘಟಕ ಮತ್ತು ನೈಸ್ ಯುವಜನ ಸೇವಾ ಸಂಘ ಇವರುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ಸ್ವಚ್ಛತಾ ಹಿ ಸೇವಾ ಸ್ವಚ್ಛತಾ ಅಭಿಯಾನವನ್ನಹ ಗ್ರಂಥಾಲಯದ ಆವರಣದಲ್ಲಿ ಉದ್ಘಾಟಿಸಿ ಮಾತನಾಡಿದರು.
ನಾವು ನಾವು ನಮ್ಮ ಸುತ್ತಮುತ್ತಲಿನ ಪರಿಸರವನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳಲು ಸ್ವಚ್ಛತಾ ಕಾರ್ಯದಲ್ಲಿ ವಾರಕ್ಕೆ ಎರಡು ಗಂಟೆಯಾದರೂ ಸ್ವಯಂ ಪ್ರೇರಿತವಾಗಿ ಭಾಗವಹಿಸಿ ನಮ್ಮ ಪರಿಸರವನ್ನು ಹಸಿರು ಪರಿಸರ ಮತ್ತು ಸ್ವಚ್ಛತಾ ಪರಿಸರವನ್ನಾಗಿ ಮಾಡಬೇಕೆಂದು ತಿಳಿಸಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ಚಂದ್ರಶೇಖರ್ ಸ್ವಯಂ ಸೇವಕರಿಗೆ ಸ್ವಚ್ಛತಾ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿ, ನಾವು ಸ್ವಚ್ಛತೆಗಾಗಿ ಸ್ವಯಂ ಪ್ರೇರಿತ ಸಿಪಾಯಿಗಳಂತೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಬೇಕು ಹಾಗೂ ನಮ್ಮ ಸುತ್ತಮುತ್ತಲಿನಲ್ಲಿ ನಾವು ಎಲ್ಲೂ ಕಸ ಹಾಕಬಾರದು ಮತ್ತು ಇತರರು ಸಹ ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕಲು ಬಿಡಬಾರದು ಅವರಿಗೆ ಸ್ವಚ್ಛತೆಯ ಹರಿವನ್ನು ಮೂಡಿಸಿ ನಿಗದಿತ ಸ್ಥಳಗಳಲ್ಲಿ ಕಸವನ್ನು ವಿಲೇವಾರಿ ಮಾಡಲು ಸೂಚಿಸಿ ನಮ್ಮ ಪರಿಸರವನ್ನ ಕಸಮುಕ್ತ ಪರಿಸರವನ್ನಾಗಿ ಮಾಡಬೇಕೆಂದರು.
ಈ ಸ್ವಚ್ಛತಾ ಅಭಿಯಾನದ ಅಂಗವಾಗಿ ಪಟ್ಟಣದ ಗ್ರಂಥಾಲಯ ಕ್ರೀಡಾಂಗಣದ ಆವರಣದಲ್ಲಿ ಪ್ಲಾಸ್ಟಿಕ್, ಪಾರ್ಥೇನಿಯಂ ಗಿಡಗಳ ನಿರ್ಮೂಲನೆ, ಗ್ರಂಥಾಲಯ, ಕ್ರೀಡಾಂಗಣ, ಶಾಲಾ ಕೊಠಡಿಗಳ ಮತ್ತು ಶೌಚಾಲಗಳ ಸ್ವಚ್ಛತಾ ಕಾರ್ಯಕ್ರಮವನ್ನು ಪಟ್ಟಣದ ಯುವ ಸಂಘಟನೆಯ ಸ್ವಯಂಸೇವಕರು ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರ ಸಹಕಾರದೊಂದಿಗೆ ನೆರವೇರಿತು.
ಈ ಕಾರ್ಯಕ್ರಮದ ಉಪಸ್ಥಿತಿಯಲ್ಲಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಟಿ. ಗೋಪಾಲಯ್ಯ, ರಾಷ್ಟ್ರೀಯ ಸೇವಾ ಯೋಜನೆಯ ಸಹ ಕಾರ್ಯಕ್ರಮಾಧಿಕಾರಿ ಕೆ.ಎಂ. ಭಾರತಿ, ರಾಜ್ಯ ರಾಷ್ಟ್ರೀಯ ಯುವ ಯೋಜನೆಯ ರಾಜ್ಯ ಸಂಯೋಜಕ ಡಾ.ವಿ. ಪ್ರಶಾಂತ, ಯುವ ಸ್ವಯಂಸೇವಕ ಎನ್. ದಿಲೀಪ್ ಕುಮಾರ್ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಎನ್. ಎಸ್.ಎಸ್ ಸ್ವಯಂಸೇವಕರು ಮತ್ತು ಯುವ ಸಂಘಟನೆಯ ಪದಾಧಿಕಾರಿಗಳು ಹಾಜರಿದ್ದರು.
