ಗಾಂಧಿ ಜಯಂತಿ ಅರ್ಥಪೂರ್ಣವಾಗಿ ಆಚರಿಸಲು ಸಕ್ರಿಯವಾಗಿ ಪಾಲ್ಗೊಳ್ಳಿ: ಮಲ್ಲಿಕಾರ್ಜುನ ಲೋಣಿ
ಸಂಜೆವಾಣಿ ವಾರ್ತೆ,
ವಿಜಯಪುರ,ಅ.೧:ಅ.೨ರಂದು ನಡೆಯಲಿರುವ ಗಾಂಧಿ ಜಯಂತಿಯನ್ನು ಅವಿಸ್ಮರಣೀಯ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಕರ‍್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಅವರು ಕರೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಗಾಂಧಿ ಜಯಂತಿ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮಹಾತ್ಮಾ ಗಾಂಧಿಜಿ ಅವರು ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಏಕೈಕ ಅಧಿನಿವೇಶನ ನಮ್ಮ ಕರ್ನಾಟಕದ ಬೆಳಗಾವಿಯಲ್ಲಿ ೧೯೨೪ ರಲ್ಲಿ ನಡೆದು ಇಂದಿಗೆ ೧೦೦ ವರ್ಷಗಳಾಯಿತು. ಅದರ ನೆನಪಿಗಾಗಿ ಈ ವರ್ಷ ಪೂರ್ತಿ ಸಂಭ್ರಮಾಚರಣೆಯನ್ನು ನಡೆಸಬೇಕು. ಈ ನಿಮಿತ್ತ ಅಕ್ಟೋಬರ ೨ರಂದು ಗಾಂಧಿ ಜಯಂತಿ ಶುಭ ದಿನದಂದು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ. ಅಂದು ವಿಜಯಪುರ ನಗರದ ಜಿಲ್ಲಾ ಪಂಚಾಯತಿ ಗೇಟದಿಂದ, ವಜ್ರ ಹನುಮಾನ ರೇಲ್ವೆ ಗೇಟದಿಂದ, ಬಬಲೇಶ್ವರ ನಾಕಾ ಹತ್ತಿರ ಬಿದನೂರ ಪೆಟ್ರೋಲ್ ಪಂಪದಿAದ ಹಾಗೂ ಕಾಂಗ್ರೆಸ್ ಮುಖಂಡ ಹಮೀದ ಮುಶ್ರೀಫ ಅವರ ಕಛೇರಿಯಿಂದ ನಾಲ್ಕ ಕಡೆಗಳಿಂದ ಏಕ ಕಾಲಕ್ಕೆ ಬೆಳಿಗ್ಗೆ ೮ ಗಂಟೆಗೆ ಪಾದಯಾತ್ರೆ ಮೂಲಕ ಗಾಂಧಿ ಭಾರತ ಯಾತ್ರೆಯು ಹೊರಟು ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಛೇರಿಗೆ ಏಕಕಾಲದಲ್ಲಿ ಸೇರಲಿದ್ದು, ಆ ಕಾರಣ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಮಹಾತ್ಮಾ ಗಾಂಧಿಯವರ ಅಭಿಮಾನಿಗಳು ಈ ರ‍್ಯಾಲಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಗಾಂಧಿಜಯAತಿಯನ್ನು ಅವಿಸ್ಮರಣೀಯಗೊಳಿಸಬೇಕೆಂದು ಅವರು ಹೇಳಿದರು.
ಸಭೆಯಲ್ಲಿ ಹಿರಿಯರಾದ ಡಿ. ಎಲ್. ಚವ್ಹಾಣ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿದ್ಯಾರಾಣಿ ತುಂಗಳ, ಅಬ್ದುಲ್‌ರಜಾಕ ಹೊರ್ತಿ, ಉಪಮಹಾಪೌರÀ ದಿನೇಶ ಹಳ್ಳಿ, ಉಪಾಧ್ಯಕ್ಷರುಗಳಾದ ಚಾಂದಸಾಬ ಗಡಗಲಾವ, ಸುಭಾಸ ಕಾಲೇಬಾಗ, ಅಫ್ಜಲ ಜಾನವೇಕರ, ಆಜಾದ ಪಟೇಲ, ಗಂಗಾಧರ ಸಂಬಣ್ಣಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿÀ ಜಾಕೀರ ಮುಲ್ಲಾ, ಎಂ.ಎA. ಮುಲ್ಲಾ, ದೇಸು ಚವ್ಹಾಣ, ವಸಂತ ಹೊನಮೋಡೆ, ಅಂಗ ಘಟಕದ ಅಧ್ಯಕ್ಷರಾದ ರಮೇಶ ಗುಬ್ಬೇವಾಡ, ಫಯಾಜ್ ಕಲಾದಗಿ, ಲಾಲಸಾಬ ಕೊರಬು, ವಿಜಯಕುಮಾರ ಕಾಳೆ, ರಾಜೇಶ್ವರಿ ಚೊಳಕೆ, ಆನಂದ ಜಾಧವ, ಆರತಿ ಶಾಹಪೂರ, ಶಫೀಕ ಮನಗೂಳಿ, ಅಶ್ಪಾಕ ಮನಗೂಳಿ, ಅಪ್ಪು ಪೂಜಾರಿ, ಕೃಷ್ಣಾ ಕಾಮಟೆ, ಕಾಶಿಬಾಯಿ ಹಡಪದ, ರುಕ್ಮಿಣಿ ಲಮಾಣಿ, ಮಂಜುಳಾ ಜಾಧವ ಹಾಗೂ ಇತರ ಪದಾಧಿಕಾರಿಗಳು ಹಾಜರಿದ್ದರು.