ಭಗವಧ್ಗೀತೆ ಎಲ್ಲರ ಬದುಕಿಗೆ ದಾರಿದೀಪ
ವಿಜಯಪುರ, ಅ.೧- ಮನಸ್ಸಿನ ತಾಕಲಾಟಗಳನ್ನು ಪರಿಹರಿಸುತ್ತಲೇ ಮನುಕುಲಕ್ಕೆ ಜ್ಞಾನದ ದೀಪವನ್ನು ಹಚ್ಚಿದ್ದ, ಜೀವನ ಮೌಲ್ಯವನ್ನು ಸಾರಿದ್ದ. ಶ್ರೀಕೃಷ್ಣನ ಭಗವಧ್ಗೀತೆ ಎಲ್ಲರ ಬದುಕಿಗೂ ದಾರಿ ದೀಪವಾಗಿದೆ ಎಂದು ಶ್ರೀ ಚನ್ನಕೇಶವಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ಎಸ್ ಮುರಳಿಧರ್ ಭಟ್ಟಾಚಾರ್ಯ ತಿಳಿಸಿದರು.
ಪಟ್ಟಣದ ಶ್ರೀ ಚನ್ನಕೇಶವಸ್ವಾಮಿ ದೇವಾಲಯದ ಆವರಣದಲ್ಲಿ ಶ್ರೀ ಕೃಷ್ಣ ಸತ್ಸಂಗ ಕಾರ್ಯಕ್ರಮದಲ್ಲಿ ಆಯೋಜಿಸಿದ್ದ ಶ್ರೀಮದ್ ಭಗವದ್ಗೀತಾ ನಾರಾಯಣ, ಶ್ರೀ ಕೈವಾರ ಯೋಗಿನಾರೇಯಣ ಯತೀಂದ್ರರ ಹಾಗೂ ಕನಕ ಪುರಂದರ ದಾಸರ ಗೀತಾ ತತ್ಥಾಮೃತ ರಸಧಾರೆಯ ೨೩೧ ನೇ ಕಾರ್ಯಕ್ರಮ ಹಾಗೂ ಶ್ರೀ ಕೃಷ್ಣ ಮಾಸಿಕ ದ್ವಾದಶಿ ವಿಚಾರಧಾರೆ ಗೋಷ್ಠಿಯ ೧೮೨ ನೇ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶ್ರೀ ಕೃಷ್ಣ ಸತ್ಸಂಗ ಟ್ರಸ್ಟ್ ಅಧ್ಯಕ್ಷ ಜೆ.ಎಸ್ ರಾಮಚಂದ್ರಪ್ಪ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಸಂಕೀರ್ತನೆಯನ್ನು ಘಂಟಸಾಲ ಖ್ಯಾತಿಯ ಮಹಾತ್ಮಾಂಜ ನೇಯ,ನರಸಿಂಹಪ್ಪ, ಶ್ರೀ ರೇಣುಕಾ ಎಲ್ಲಮ್ಮ ತಾಯಿ ಕಲಾ ಬಳಗ ದವರಾದ ಜೆ.ಎಸ್ ಮುನಿನಾರಾಯಣಪ್ಪ, ಜೆ.ಎಸ್.ನಾಗರಾಜ್, ಡಿ.ಎಂ ಮುನಿಯಪ, ಇದ್ದರು.