ಯೋಧರಿಗೆ ಭಾರತೀಯ ಪುರಸ್ಕಾರ
ಬೆಂಗಳೂರು: ಭಾರತೀಯ ಸೇನಾಪಡೆ, ವಾಯುಪಡೆ ಮತ್ತು ನೌಕಾಪಡೆ ಯೋಧರಿಗೆ ’ಭಾರತೀಯ ಪುರಸ್ಕಾರ’ ಪ್ರಶಸ್ತಿ ನೀಡಿ ಗೌರವಿಸಲಾಯಿತು
ನಗರದ ಸ್ವಾತಂತ್ರ್ಯ ಉದ್ಯಾನದದಲ್ಲಿ ತ್ರಿಶೂಲ ಟ್ರಸ್ಟ್ ವತಿಯಿಂದ ೭೮ನೇ ಸ್ವಾತಂತ್ರೋತ್ಸವದದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯೋಧರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತಲಾ ೫ ಸಾವಿರ ರೂ ಧನ ಸಹಾಯ ಮಾಡಲಾಯಿತು. ಜೊತೆಗೆ ಅತಿ ಹೆಚ್ಚು ಕಲಾವಿದರನ್ನು ಒಂದೆಡೆ ಸೇರಿಸುವ ಮೂಲಕ ‘ತ್ರಿಶೂಲ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ ಪತ್ರ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರವಿಶಂಕರ್ ಗುರೂಜಿ, ಮಮತಾ ದೇವರಾಜ್ ಮಾಜಿ ಸೈನಿಕ ಕುಮಾರ್ ಸ್ವಾಮಿ, ನಟ, ನಿರ್ಮಾಪಕ ಗಂಡಸಿ ಸದಾನಂದ ಸ್ವಾಮಿ ತ್ರಿಶೂಲ ಟ್ರಸ್ಟ್ ಅಧ್ಯಕ್ಷರು ಬಿ.ಸಿ.ರಾಜಶೇಖರ್, ಕಾರ್ಯದರ್ಶಿ ಶುಭ ರಾಜಶೇಖರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.