ಗ್ರಂಥ ಚಳುವಳಿಯ ರೂವಾರಿ ಡಾ.ಎಸ್.ಆರ್ ರಂಗನಾಥನ್‌ರ ಕೊಡುಗೆ ಅಪಾರ
ಕಲಬುರಗಿ: ಆ.೧೩:ಯಾರಿಂದಲೂ ಕಳ್ಳತನವಾಗದ, ಬಳಸಿದ ಹಾಗೇ ಕಡಿಮೆಯಾಗದೇ ಹೆಚ್ಚಾಗುವ, ಎಂದಿಗೂ ನಸಿಸಿ ಹೋಗದ ಸಂಪತ್ತೆAದರೆ ಜ್ಞಾನವಾಗಿದೆ. ಇಂತಹ ಸಂಪತ್ತಿನ ನಿಧಿಯಾದ ಗ್ರಂಥಗಳ ಬಗ್ಗೆ ಎಲ್ಲೆಡೆ ವ್ಯಾಪಕವಾದ ಚಳುವಳಿಯನ್ನು ಮಾಡುವ ಮೂಲಕ, ಇಡೀ ತಮ್ಮ ಜೀವನದುದ್ದಕ್ಕೂ ಗ್ರಂಥಗಳನ್ನೇ ತಮ್ಮ ಉಸಿರಾಗಿಸಿಕೊಂಡ ಡಾ.ಎಸ್.ಆರ್.ರಂಗನಾಥನ್ ಅವರು ಗ್ರಂಥ ಚಳುವಳಿಯ ರೂವಾರಿಯಾಗಿ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ ಅಭಿಮತಪಟ್ಟರು.
ನಗರದ ಆಳಂದ ರಸ್ತೆಯ ಜೆ.ಆರ್.ನಗರದಲ್ಲಿರುವ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಏರ್ಪಡಿಸಿದ್ದ ‘ಗ್ರಂಥಾಲಯ ಪಿತಾಮಹ’ ಪದ್ಮಶ್ರಿ ಡಾ.ಎಸ್.ಆರ್.ರಂಗÀನಾಥನ್ ಅವರ ೧೩೨ನೇ ಜನ್ಮದಿನ-ರಾಷ್ಟಿçÃಯ ಗ್ರಂಥಪಾಲಕರ ದಿನಾಚರಣೆಯಲ್ಲಿ ಅವರು ಮಾತನಾಡುತಿದ್ದರು.
ವಿದ್ಯಾರ್ಥಿ ದೇಸೆಯಿಂದಲೇ ಓದುವ ಹವ್ಯಾಸ ಮೂಡಿಸುವಲ್ಲಿ ಗ್ರಂಥಾಲಯಗಳು ಪ್ರಮುಖವಾದ ಪಾತ್ರವನ್ನು ವಹಿಸುತ್ತವೆ. ವಿಶ್ವದ ಮಹಾನ ವ್ಯಕ್ತಿಗಳ ಜೀವನವನ್ನು ನಾವು ಗಮನಿಸಿದಾಗ, ಅವರೆಲ್ಲರೂ ಬಾಲ್ಯದಿಂದಲೇ ಶ್ರೇಷ್ಠ ಗ್ರಂಥಗಳನ್ನು ಅಧ್ಯಾಯನಗೈದದ್ದು ಕಂಡು ಬರುತ್ತದೆ. ಎಲ್ಲರೂ ಉತ್ತಮವಾದ ಜ್ಞಾನವನ್ನು ಸಂಪಾದಿಸಿ, ಶ್ರೇಷ್ಠ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ಮೂಲಕ ದೇಶಕ್ಕೆ ಸೇವೆಯನ್ನು ಸಲ್ಲಿಸಬೇಕು. ಆಗ ಇಂಥಹ ಮಹನೀಯರು ಪಟ್ಟ ಶ್ರಮಕ್ಕೆ ಇನ್ನೂ ಹೆಚ್ಚಿನ ಬೆಲೆ ಬರುತ್ತದೆ ಎಂದು ಅಭಿಪ್ರಾಯಪಟ್ಟರು.
ಸಂಸ್ಥೆಯ ಮುಖ್ಯಸ್ಥ ಅಸ್ಲಾಂ ಶೇಖ್ ಮಾತನಾಡಿ, ಜನರ ನಿರ್ಲ್ಯಕ್ಷಕ್ಕೆ ಒಳಗಾಗಿದ್ದ ಈ ಕ್ಷೇತ್ರವನ್ನು ಸಮಾಜದ ಮುಖ್ಯವಾಹಿನಿಗೆ ತರಲು ಅವರು ಅನುಭವಿಸಿದ ಕಷ್ಟ ಬಹಳಷ್ಟಿದೆ. ಇಡೀ ವಿಶ್ವವೇ ಭಾರತದ ಗ್ರಂಥಾಲಯ ಕ್ಷೇತ್ರದ ಕಡೆಗೆ ತಿರುಗಿ ನೋಡುವಂತೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇಂದು ನಮಗೆ ಬೇಕಾದ ಪುಸ್ತಕಗಳು ಸರಳವಾಗಿ ದೊರೆಯುತ್ತಿವೆಯೆಂದರೆ, ಅದಕ್ಕೆ ರಂಗನಾಥ ಅವರ ಅಂದಿನ ಹೋರಾಟದ ಫಲವಾಗಿದ್ದು, ಅವರನ್ನು ನಾವೆಂದಿಗೂ ಮರೆಯಬಾರದು ಎಂದರು.
ಕಾರ್ಯಕ್ರಮದಲ್ಲಿ ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗೆಪ್ಪಾ ಎಸ್. ಬಿರಾದಾರ, ಶಿಕ್ಷಕರಾದ ಪ್ರಿಯಾಂಕಾ ಉಜಳಂಬಿ, ನಿಲೊಫರ್ ಶೇಖ್, ಪ್ರಮುಖರಾದ ಮಲ್ಲಿಕಾರ್ಜುನ ಎಂ. ಅಭಿಷೇಕ ಎನ್.ವೈ. ಸೇರಿದಂತೆ ಸಂಸ್ಥೆಯ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.