ಆ.೧೫ ರಂದು ಜಯನಗರ ಶಿವಮಂದಿದಲ್ಲಿ ಉಚಿತ ಸಾಮಾನ್ಯ ಆರೋಗ್ಯ ತಪಾಸಣಾ ಶಿಬಿರ
ಕಲಬುರಗಿ:ಆ.೧೩:ಕಲಬುರಗಿಯ ನಮಸ್ವಿ ಮಕ್ಕಳ ಕ್ಲೀನಿಕ್,ವಾಸ್ಕುಲರ್ ಕ್ಲೀನಿಕ್,ಮೋಲಾರ ಡೆಂಟಲ್ ಕ್ಲೀನಿಕ್,ಯುನಿಕೇರ್ ಡೈಗ್ನೋಸ್ಟಿಕ್ ಹಾಗೂ ಜಯನಗರ ಶಿವಮಂದಿರದ ಅಭಿವೃದ್ಧಿ ಟ್ರಸ್ಟ್ ಸಹಯೋಗದಲ್ಲಿ ಜಯನಗರ ಬಡಾವಣೆಯ ಶಿವಮಂದಿರದಲ್ಲಿ ೭೮ ನೆ ಸ್ವಾತಂತ್ರ‍್ಯ ದಿನಾಚರಣೆ ಅಂಗವಾಗಿ ಆಗಸ್ಟ್ ೧೫ ರಂದು ಬೆಳಿಗ್ಗೆ ೧೧ ಗಂಟೆಗೆ ಉಚಿತ ಸಾಮಾನ್ಯ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಲಿಂಗರಾಜ ಸಿರಗಾಪೂರ ಹಾಗೂ ವೀರಪ್ಪ ಹುಡಗಿ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಶಿಬಿರವನ್ನು ಖ್ಯಾತ ವೈದ್ಯರಾದ ಡಾ.ಎಸ್.ಎಸ್.ಗುಬ್ಬಿ ಉದ್ಘಾಟಿಸುವರು,ಮುಖ್ಯ ಅತಿಥಿಗಳಾಗಿ ನರರೋಗ ತಜ್ಞ ಡಾ.ಅನಿಲ್ ಪಾಟೀಲ ಭಾಗವಹಿಸುವರು.ಟ್ರಸ್ಟ್ ಅಧ್ಯಕ್ಷ ಲಿಂಗರಾಜ ಸಿರಗಾಪೂರ ಅಧ್ಯಕ್ಷತೆ ವಹಿಸುವರು.ವೀರಪ್ಪ ಹುಡಗಿ,ವಿರೇಶ ದಂಡೋತಿ ಉಪಸ್ಥಿತರಿರುವರು.ಈ ಶಿಬಿರದಲ್ಲಿಮಕ್ಕಳ ಆರೋಗ್ಯ ತಪಾಸಣೆ,ಹಲ್ಲಿನ ತಪಾಸಣೆ,ಸಕ್ಕರೆ ಕಾಯಿಲೆ,ರಕ್ತದೋತ್ತಡ ಸೇರಿದಂತೆ ಸಾಮಾನ್ಯ ಆರೋಗ್ಯ ತಪಾಸಣೆ ನಡೆಯಲಿದೆ.ಇದರ ಜೊತೆಗೆ ಆಯುರ್ವೇದ ಹಾಗೂ ಹೋಮಿಯೋಪತಿ ಚಿಕಿತ್ಸೆಯೂ ನಡೆಯಲಿದೆ.
ಈ ಶಿಬಿರದಲ್ಲಿ ಪರಿಣಿತ ವೈದ್ಯರಾದ ಡಾ.ಶ್ರೀವಿಶಾಲ ವಿ. ಹುಡಗಿ,ಡಾ.ಸಂಧ್ಯಾ ವಿ.ಹುಡಗಿ,ಡಾ.ಪ್ರಶಾಂತ ವಿ.ಹುಡಗಿ,ಡಾ.ಲಕ್ಷ್ಮೀಶ್ರೀ ಪಿ.ಹುಡಗಿ,ಡಾ.ವಿನೋದ ವಿ.ಹುಡಗಿ ಹಾಗೂ ಡಾ.ಪ್ರೀಯಾಂಕ ವಿ.ಹುಡಗಿ ಅವರುಗಳು ವಿವಿಧ ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ ನೀಡುವರು.ಆಹಾರ ಪದ್ಧತಿ, ನಿತ್ಯ ಜೀವನ ಶವನ ಶೈಲಿಯ ಬಗ್ಗೆಯೂ ತಿಳಿಸಿಕೊಡಲಿದ್ದಾರೆ.ಸಾರ್ವಜನಿಕರು, ಮಹಿಳೆಯರು ಶಿಬಿರದಲ್ಲಿ ಭಾಗವಹಿಸಿ ಇದರ ಲಾಭವನ್ನು ಪಡೆಯಬೇಕು ಎಂದು ಅವರು ತಿಳಿಸಿದ್ದಾರೆ.