ಮಹಾಸಭಾ ಮತದಾರರ ಪಟ್ಟಿಯಲ್ಲಿ ಹೆಸರು ನಾಪತ್ತೆ: ನರಿಬೋಳ
ಕಲಬುರಗಿ,ಆ ೧೩: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾ ರಾಜ್ಯ ಘಟಕದ ಚುನಾವಣಾ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆ ಮಾಡಿ,ಜಿಲ್ಲಾ ಮಟ್ಟದಲ್ಲಿ ಕೈಬಿಟ್ಟಿರುವ ಉದ್ದೇಶ ಎನು? ಎಂದು ಎಂ.ಎಸ್ ಪಾಟೀಲ ನರಿಬೋಳ ಪ್ರಶ್ನಿಸಿದ್ದಾರೆ.ನನ್ನ ಹೆಸರು ಕೈ ಬಿಟ್ಟಿದ್ದು ಉದ್ದೇಶಪೂರ್ವಕ. ಏಕೆಂದರೆ ನಾನು ಚುನಾವಣೆಗೆ ಸ್ಪರ್ಧಿಸಿದರೆ ಯಾರ ಒತ್ತಡಕ್ಕೂ ಬಗ್ಗುವುದಿಲ್ಲ ಎಂದು ತಿಳಿದು ಮಾಡಿದ ಕೆಲಸ. ಇದರಲ್ಲಿ ಎರಡು ಮಾತಿಲ್ಲ. ವೈಯಕ್ತಿಕವಾಗಿ ನಾನು ಯಾರನ್ನು ಟೀಕಿಸುವುದಿಲ್ಲ.ಸಮಾಜ ವಿರುದ್ಧ ಹೋದರೆ ಕೈಕಟ್ಟಿ ಕುಳಿತುಕೊಳ್ಳಲ್ಲ.ಆದದ್ದು ಆಯಿತು. ವೈಯಕ್ತಿಕ ಸ್ವಾರ್ಥ ಬದಿಗೊತ್ತಿ ಎಲ್ಲರು ಕೂಡಿ ಸಮಾಜ ಸಂಘಟನೆ ಮಾಡೋಣ ಎಂದಿದ್ದಾರೆ.ರಾಜ್ಯ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿ ಜಿಲ್ಲಾ ಮಟ್ಟದಲ್ಲಿ ಕೈಬಿಟ್ಟಿರುವ ಉದ್ದೇಶ ಎನು? ನೇರ ಮಾತನಾಡುವವರು ಪ್ರಶ್ನೆ ಮಾಡುವವರು ಜಿಲ್ಲಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಬಾರದು ಎಂದು ತಡೆವ ಉದ್ದೇಶದಿಂದ ಇಂಥ ಕೆಲಸ ಮಾಡಿದ್ದರು ಇನ್ನು ಮುಂದೆ ಇಂಥ ಘಟನೆ ನಡೆದರೆ ಸದಸ್ಯರು ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ ಎಂದು ಮೃತ್ಯುಂಜಯ ಪಲ್ಲಾಪೂರಮಠ, ದಿವ್ಯಾ ಹಾಗರಗಿ ಎಚ್ಚರಿಸಿದ್ದಾರೆ