ಜಿಲ್ಲೆಯಲ್ಲಿ ಒಂದು ವರ್ಷದಲ್ಲಿ ಸರಕಾರಿ ಕೋಲ್ಡ್ ಸ್ಟೋರೇಜ್ ಸ್ಥಾಪನೆ: ಟಿ. ಸೋಮು
ಸಂಜೆವಾಣಿ ವಾರ್ತೆ,
ವಿಜಯಪುರ,ಆ.೧೩:ಜಿಲ್ಲೆಯಲ್ಲಿ ಒಂದು ವರ್ಷದಲ್ಲಿ ಸರಕಾರಿ ಕೋಲ್ಡ್ ಸ್ಟೋರೇಜ್ ಸೇರಿದಂತೆ ಪರಿಸರ ಸ್ನೇಹಿ ವೈನ್ ಪಾರ್ಕ್ ಸ್ಥಾಪಿಸಲು ಅಗತ್ಯದ ಎಲ್ಲ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ದ್ರಾಕ್ಷಾ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಟಿ. ಸೋಮು ಹೇಳಿದರು.
ಇಂದು ವಿಜಯಪುರದ ಹೊರವಲಯದಲ್ಲಿ ದ್ರಾಕ್ಷಿ ಮಂಡಳಿಗೆ ಮೀಸಲಿಟ್ಟ ಪ್ರದೇಶದಲ್ಲಿ ದ್ರಾಕ್ಷಾ ರಸ ಮಂಡಳಿಯ ಅದ್ಯಕ್ಷರು ಹಾಗೂ ಮಂಡಳಿಯ ವೆವಸ್ಥಾಪಕ ನಿರ್ದೆಶಕರನ್ನು ವಿಜಯಪುರಕ್ಕೆ ಆವ್ಹಾನಿಸಿ ಕಾರ್ಯಕ್ರಮ ನಡೆಸಲಾಯಿತು.
ಮಂಡಳಿಯ ಅದ್ಯಕ್ಷ ಯೋಗೇಶಬಾಬು ಹಾಗೂ ಮಂಡಳಿಯ ವೆವಸ್ಥಾಪಕ ನಿರ್ದೇಶಕ ಟಿ. ಸೋಮು ಅವರನ್ನು ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಶೀತಲ ಶೇಖರಣೆಯ ಹೋರಾಟ ಸಮಿತಿ ಹಾಗೂ ರೈತ ಜಾಗೃತ ಸಮಿತಿ ವತಿಯಿಂದ ಸನ್ಮಾನಿಸಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ದ್ರಾಕ್ಷಾ ಮಂಡಳಿ ವ್ಯವಸ್ಥಾಪಕ ನಿರ್ದೇಶಕÀ ಟಿ. ಸೋಮು ಅವರು ಮಾತನಾಡಿ,.
ದ್ರಾಕ್ಷಿ ಬೆಳೆಗಾರರಿಗೆ ಎಲ್ಲಾ ರೀತಿಯ ಮಾರ್ಗದರ್ಶನ, ಮಾರುಕಟ್ಟೆ ವ್ಯವಸ್ಥೆ ಹಾಗೂ ತಳಿ ಅಭಿವೃದ್ಧಿ ಮಾಡಿ ರೈತರ ಆದಾಯ ದ್ವಿಗುಣಗೊಳಿಸಲು ಬಹು ದಿನಗಳ ಬೇಡಿಕೆಯಾದ ದ್ರಾಕ್ಷಾರಸ ಅಭಿವೃದ್ಧಿ ಮಂಡಳಿ ಕರ್ನಾಟಕ ರಾಜ್ಯದಲ್ಲಿ ೨೦೦೭ರಲ್ಲಿ ಸ್ಥಾಪನೆಯಾಗಿದೆ. ಮಂಡಳಿ ಸ್ಥಾಪನೆಯಾದ ನಾಲ್ಕಾರು ವರ್ಷಗಳ ನಂತರ ೨೦೧೧ರಲ್ಲಿ ವಿಜಯಪುರ ನಗರದ ಹೊರವಲಯದಲ್ಲಿ ತೊರವಿ ಗ್ರಾಮದ ವ್ಯಾಪ್ತಿಯಲ್ಲಿ ನಿಗಮ ಮಂಡಳಿಗೆ ವಿಜಯಪುರ ಜಿಲ್ಲಾಧಿಕಾರಿಗಳು ೧೪೧ ಎಕರೆ ಜಮೀನನ್ನು ಮಂಜೂರು ಮಾಡಿ ಅದೇಶಿಸಿದ್ದಾರೆ. .ರೈತರಿಗೆ ತರಬೇತಿ, ತಳಿ ಅಭಿವೃದ್ಧಿ, ಮೌಲ್ಯವಧÀðನೆ ಕಲ್ಪಿಸಲಾಗುವುದು ಎಂದು ಹೇಳಿದರು.
ಮಂಡಳಿಯ ಅಧ್ಯಕ್ಷ ಯೋಗೇಶ ಬಾಬು ಅವರು ರೈತರ ಅಹವಾಲು ಸ್ವೀಕರಿಸಿ ಮಾತನಾಡಿ, ವಿಜಯಪುರದ ಈ ಪ್ರದೇಶದಲ್ಲಿ ದ್ರಾಕ್ಷಿ ಮಂಡಳಿಯ ಪ್ರಾದೇಶಿಕ ಕಚೇರಿ ತೆರೆಯಲಾಗುತ್ತಿದೆ. ರೈತರ ಮನವಿಯಲ್ಲಿ ಹೇಳಿರುವಂತೆ ಒಂದು ವರ್ಷದಲ್ಲಿ ಎಲ್ಲಾ ಕಾಮಗಾರಿ ಪೂರ್ಣಗೊಳಿಸುತ್ತೇವೆ. ವೈಜ್ಞಾನಿಕವಾದ ತಾಂತ್ರಿಕತೆ ಅಳವಡಿಸಿ ಮತ್ತು ಸುಸಜ್ಜಿತವಾದ ಘಟಕವನ್ನು ಸ್ಥಾಪನೆ ಮಾಡಲಾಗುತ್ತದೆ. ರೈತರಿಗೆ ತರಬೇತಿಗಾಗಿ ಬೇಕಾದ ಸುಸಜ್ಜಿತವಾದ ಸಭಾಂಗಣದ ವ್ಯವಸ್ಥೆಯನ್ನೂ ನಿರ್ಮಿಸುತ್ತೇವೆ. ರೈತರಿಗೆ ರೈತ ಭವನ ನಿರ್ಮಿಸಿ ಮತ್ತು ತಂಗುದಾಣದ ವ್ಯವಸ್ಥೆ ಮಾಡಲಗುವುದು.. ಈ ಕೈಗಾರಿಕಾ ಪ್ರದೇಶದ ನಿರ್ವಹಣೆಗೆ ಬೇಕಾದ ಸಿಬ್ಬಂದಿಗಳನ್ನು ಕೂಡಲೇ ನೇಮಕಾತಿ ಮಾಡಿಕೊಳ್ಳಲು ಸರಕಾರದ ಮಟ್ಟದಲ್ಲಿ ಚರ್ಚೆ ಮಾಡುತ್ತೇವೆ. ರೈತರ ಬೇಡಿಕೆಯಾದ ದ್ರಾಕ್ಷಿ ಬೆಳೆ ಹಾನಿಯಿಂದ ಆತ್ಮಹತ್ಯೆಗೀಡಾದ ರೈತನ ಕುಟುಂಬದ ಒಬ್ಬರಿಗೆ ಉದ್ಯೋಗ ಕಲ್ಪಿಸುವುದು ಸರಕಾರದ ಮಟ್ಟದಲ್ಲಿ ನಿರ್ಧಾರವಾಗಬೇಕಾಗುತ್ತದೆ ಎಂದರು.
ಅದೇ ರೀತಿ ಪರಿಸರ ಸ್ನೇಹಿ ಕಾಮಗಾರಿ ಆರಂಭಿಸುತ್ತೇವೆ. ಆವರಣದಲ್ಲಿರುವ ಕೆರೆಗೆ ನೀರು ತುಂಬುವ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದರು.
ಈ ವೇಳೆ ದ್ರಾಕ್ಷಿ ಬೆಳೆಗಾರರು ಹಾಗೂ ರೈತ ಮುಖಂಡರು ಮಾತನಾಡಿ, ರೈತರ ಜ್ವಲಂತ ಸಮಸ್ಯೆಗಳ ಬಗ್ಗೆ ವಿವರಿಸಿದರು.
ನಿವೃತ್ತ ಅಧಿಕಾರಿ ಹಾಗೂ ಆಹಾರ ತಜ್ಞ ಎಸ್.ವಾಯ್. ಹಳಿಂಗಳಿ ಅವರು ಮಾತನಾಡಿ, ದ್ರಾಕ್ಷಿಗೆ ಅತಿಯಾದ ರಾಸಾಯನಿಕ ಬಳಕೆಯಿಂದ ದ್ರಾಕ್ಷಿಯಲಿ ಇ್ಲರುವಂತಹ ಪೋಷಕಾಂಶಗಳ ಕುಸಿತ ಕಂಡು ದ್ರಾಕ್ಷಿ ತನ್ನ ಗುಣಮಟ್ಟ ಕಳೆದುಕೊಂಡಿದೆ. ಇದರಿಂದ ಸಾರ್ವಜನಿಕರ ಗ್ರಾಹಕರ ಆರೋಗ್ಯ ಹದಗೆಡುತ್ತದೆ. ಅದಕ್ಕಾಗಿ ಸಾವಯವದಲ್ಲಿ ದ್ರಾಕ್ಷಿ ಬೆಳೆಯಲು ತಾಂತ್ರಿಕತೆ ಆವಿಷ್ಕಾರಗೊಳ್ಳಬೇಕಾಗಿದೆ ಎಂದು ಸಲಹೆ ನೀಡಿದರು.
ಯಾಕೂಬ್ ಜತ್ತಿ, ಎಮ್..ಆರ್. ಪಾಟೀಲ, ಪ್ರಭಾವತಿ ನಾಟಿಕಾರ, ಕೆ.ಡಿ. ಕÀರ್ಜಗಿ, ಗುರುನಾಥ ಬಗಲಿ, ರಮೇಶ ಧÀರೆನ್ನವರ, ತೋಟಗಾರಿಕೆ ಅಧಿಕಾರಿಗಳು ಸೇರಿದಂತೆ ಇತರರು ಮಾತನಾಡಿದರು.
ಅಶೋಕ ಸೌದಾಗಾರ ಅಧ್ಯಕ್ಷತೆ ವಹಿಸಿದ್ದರು.