ಕರ್ನಾಟಕದ ಬೆಂಗಳೂರು ಬುಲ್ಸ್ ಕಬಡ್ಡಿ ತಂಡಕ್ಕೆ ಆಯ್ಕೆ
ಸಂಜೆವಾಣಿ ವಾರ್ತೆ
ದಾವಣಗೆರೆ.ಆ.೧೩; ದಾವಣಗೆರೆ ಜಿಲ್ಲೆಯ ರಾಷ್ಟ್ರೀಯ ಕಬಡ್ಡಿ  ಕ್ರೀಡಾಪಟು ಚಂದ್ರ ನಾಯಕ್.ಎಂ ಇವರು ಪ್ರೊ ಕಬಡ್ಡಿ ಲೀಗ್ (PKL) ಸೀಸನ್ 11 ಆವೃತ್ತಿಗೆ ನಮ್ಮ ಹೆಮ್ಮೆಯ ಕರ್ನಾಟಕದ ಬೆಂಗಳೂರು ಬುಲ್ಸ್ ತಂಡಕ್ಕೆನಮ್ಮ ದಾವಣಗೆರೆ ಜಿಲ್ಲೆಯಿಂದ  ಪ್ರಪ್ರಥಮವಾಗಿ ಆಯ್ಕೆಯಾಗಿರುತ್ತಾರೆ, ಮತ್ತು ನಮ್ಮ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.ಇವರಿಗೆ ದಾವಣಗೆರೆ ಜಿಲ್ಲಾ ಅಮೆಚೂರ್ ಕಬಡ್ಡಿ ಸಂಸ್ಥೆಯ ಅಧ್ಯಕ್ಷರು ಎಂ.ನಾಗರಾಜ್, ಹಾಗೂ ಕಾರ್ಯದರ್ಶಿ ಎಂ.ನಾರಾಯಣಸ್ವಾಮಿ,ಮತ್ತು ಎಲ್ಲಾ ಪದಾಧಿಕಾರಿಗಳು  ಜಿಲ್ಲೆಯ ಎಲ್ಲಾ ಕ್ರೀಡಾಪಟುಗಳು ಅಭಿನಂಧನೆ ವ್ಯಕ್ತಪಡಿಸಿದ್ದಾರೆ