ಸುಪ್ರೀತ್ ಪಿ. ಜಿಗೆ  ಪಿ ಎಚ್ ಡಿ ಪದವಿ
ಸಂಜೆವಾಣಿ ವಾರ್ತೆ
ದಾವಣಗೆರೆ. ಆ.೧೩; ನಗರದ  ಜಿಎಂ ವಿಶ್ವವಿದ್ಯಾಲಯದ  ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ  ಸಹಾಯಕ ಪ್ರಾಧ್ಯಾಪಕರಾದ   ಸುಪ್ರೀತ್ ಪಿ. ಜಿ  ಇವರಿಗೆ ಪ್ರೊಫೆಸರ್ ಆದ  ಡಾ. ಮೊಹಮ್ಮದ್ ರಿಯಾಜ್ ಅಹ್ಮದ್, ಸ್ಕೂಲ್ ಆಫ್ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್ ರೇವ ವಿಶ್ವವಿದ್ಯಾಲಯ, ಬೆಂಗಳೂರು. ಇವರ ಮಾರ್ಗದರ್ಶನದಲ್ಲಿ ಮಂಡಿಸಿದ ಪರ್ಫಾರ್ಮೆನ್ಸ್ ಆಫ್ ಇವಲೂಯೇಷನ್ ಆಫ್ ಮಿಲಿಮೀಟರ್ ವೇವ್ ನೋಮ ಇನ್ ಫ್ಯೂಚರ್ ಹೆಟ್ – ನೆಟ್ಸ್ ಮಹಾಪ್ರಬಂಧಕ್ಕೆ ರೇವ ವಿಶ್ವವಿದ್ಯಾಲಯ ಬೆಂಗಳೂರು, ಪಿ ಎಚ್ ಡಿ ಪದವಿಯನ್ನು ನೀಡಿ ಗೌರವಿಸಲಾಗಿದೆ. ಇವರಿಗೆ ಜಿಎಂ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ  ಜಿಎಂ ಲಿಂಗರಾಜು,  ಕುಲಪತಿಗಳಾದ ಡಾ ಎಸ್ ಆರ್ ಶಂಕಪಾಲ್, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ  ಡಾ. ಸೋಮಶೇಖರ್ ಜಿ. ಸಿ, ಮತ್ತು ಅಧ್ಯಾಪಕ ವರ್ಗದವರು ಅಭಿನಂದನೆಗಳನ್ನು ತಿಳಿಸಿದ್ದಾರೆ.