ರಾಷ್ಟ್ರಮಟ್ಟದ ಚಿಣ್ಣರ ಚಿತ್ತಾರ ಪ್ರಶಸ್ತಿ ಗೆದ್ದ ವಿದ್ಯಾರ್ಥಿನಿಯರು
ಸಂಜೆವಾಣಿ ವಾರ್ತೆ
ದಾವಣಗೆರೆ. ಆ.೧೩; 2023-24 ನೇ ಸಾಲಿನ  ಬಣ್ಣದ ಮನೆ ಸಾಂಸ್ಕೃತಿಕ ವೇದಿಕೆ(ರಿ) ಗದಗ ರವರ ವತಿಯಿಂದ ಸಂಘಟಿಸಿದ ರಾಷ್ಟ್ರಮಟ್ಟದ ಚಿಣ್ಣರ ಚಿತ್ತಾರ ಚಿತ್ರಕಲಾ ಸ್ಪರ್ಧೆಯಲ್ಲಿ  ಹರಿಹರ ಗ್ರಾಸಿಮ್ ಇಂಡಸ್ಟ್ರಿಯ ಕವಲೆತ್ತು ಗ್ರಾಮದ ಗ್ರಾಸಿಮ್ ಸಿರಿಗನ್ನಡ ವಿದ್ಯಾಲಯದ  ವಿದ್ಯಾರ್ಥಿನಿಯರುಗಳಾದ ಸಂಜನಾ ಎ.ಹೆಚ್  10ನೇ ತರಗತಿ ಮತ್ತು ದಕ್ಷತಾ ಎಸ್. ಹೆಚ್  ಎಲ್ ಕೆಜಿ ರವರಿಗೆ ರಾಷ್ಟ್ರ ಮಟ್ಟದ ಚಿಣ್ಣರ ಚಿತ್ತಾರ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ ಆ. 17 ಹಾಗೂ 18  ರಂದು ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯುವ ಬೃಹತ್ ಸಮಾರಂಭದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ ಈ ಪ್ರಶಸ್ತಿ ಗೆದ್ದ ವಿದ್ಯಾರ್ಥಿನಿಯರಿಗೆ ಶಾಲಾ ಆಡಳಿತ ಮಂಡಳಿ ಮತ್ತು ಶಾಲೆಯ ಪ್ರಾಚಾರ್ಯರು ಎಲ್ಲಾ ಶಿಕ್ಷಕರು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.