ಸೀತಾಳಗೇರಾ ಗ್ರಾಮಕ್ಕೆ ಶಾಸಕ ಭೇಟಿ
ಸಂಜೆವಾಣಿ ವಾರ್ತೆ
ಹುಮನಾಬಾದ :ಆ.೧೩: ತಾಲ್ಲೂಕಿನ ಸೀತಾಳಗೇರಾ ಗ್ರಾಮದಲ್ಲಿ ಭೂಮಿ ಕಂಪಿಸಿದ ಹಿನ್ನಲೆ ಶಾಸಕ ಡಾ. ಸಿದ್ದು ಪಾಟೀಲ್ ಭೇಟಿ ಮಾಡಿ ಆತಂಕದಲ್ಲಿದ್ದ ಗ್ರಾಮಸ್ಥರೊಂದಿಗೆ ಸುದೀರ್ಘಕಾಲ ಸಮಾಲೋಚನೆ ನಡೆಸಿದರು.
ಭೂ ಕಂಪನದಿAದ ಹಾನಿಯಾಗಿರುವ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಪಡೆದು ಸಂಬAಧಪಟ್ಟ ಅಧಿಕಾರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಸಂಭವಿಸಿರುವ ಭೂ ಕಂಪನದ ಮಾಹಿತಿ ತಿಳಿಸಿ ಸೂಕ್ತ ಕ್ರಮ ಕೈಗೊಳ್ಳಲು ಆದೇಶಿಸಿದರು.
ಗ್ರಾಮದ ಜನರು ಯಾವುದೇ ರೀತಿಯ ಆತಂಕ ಪಡದೆ ಧೈರ್ಯವಾಗಿರಲು ವಿನಂತಿಸಿ, ಗ್ರಾಮಸ್ಥರ ಕುಂದುಕೊರತೆಗಳನ್ನು ಆಲಿಸಿದರು.
ಉಪ ತಹಶೀಲ್ದಾರ ಹಾವಗೇರಾದ ಮುಧಾಳೆ, ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಗೋವಿಂದರಾವ, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ, ಕಂದಾಯ ನೀರಿಕ್ಷಕ ರಾಹುಲ ದೇವ್, ಗ್ರಾಮ ಪಂಚಾಯಿತಿ ಗ್ರಾ.ಪಂ ಅಧ್ಯಕ್ಷೆ ಗೋದಾವರಿ ಮಲ್ಲಪ್ಪಾ, ಉಪಾಧ್ಯಕ್ಷ ವಿಶ್ವನಾಥ ಕುಂಬಾರ, ಅಭಿವೃದ್ಧಿ ಅಧಿಕಾರಿ ರಮೇಶ, ಪಕ್ಷದ ಮುಖಂಡರಾದ ವಿಶ್ವನಾಥ ಪಾಟೀಲ್, ಮಲ್ಲಿಕಾರ್ಜುನ ಪಾಟೀಲ್, ಓಂಪ್ರಕಾಶ ಪ್ರಭಾ, ವಿನಾಯಕ ಮಂಡಾ, ಅಭಿಮನ್ಯು ನಿರಗುಡಿ, ಯುವ ಉದ್ಯಮಿ ಸಂತೋಷ ಪಾಟೀಲ್, ನಾಗಭೂಷಣ ಸಂಗಮ್, ಗಿರೀಶ ತುಂಬಾ ಇದ್ದರು.