ಸಾಧಕ ವಿದ್ಯಾರ್ಥಿಗಳು ತಾವು ಕಲಿತ ವಿವಿ ರಾಯಭಾರಿಗಳು: ಡಾ. ಅರುಣ ಇನಾಮದಾರ
ಸಂಜೆವಾಣಿ ವಾರ್ತೆ,
ವಿಜಯಪುರ,ಆ.೧೩: ವಿದ್ಯಾರ್ಥಿಗಳು ಶಿಕ್ಷಕರಿಗಿಂತ ಹೆಚ್ಚಿನ ಸಾಧನೆ ಮಾಡಿದರೆ ಕಲಿಸಿದ ಗುರುಗಳು ಬಹಳ ಸಂತೋಷ ಪಡುತ್ತಾರೆ. ಅಲ್ಲದೇ, ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು ಅವರು ಕಲಿತ ವಿಶ್ವವಿದ್ಯಾಲಯಗಳ ರಾಯಭಾರಿಗಳಾಗುತ್ತಾರೆ ಎಂದು ಬಿ.ಎಲ್.ಡಿ.ಇಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಪತಿ ಡಾ. ಅರುಣ ಇನಾಮದಾರ ಹೇಳೀದ್ದಾರೆ.
ಶನಿವಾರ ನಗರದ ಬಿ.ಎಲ್.ಡಿ.ಇಡೀಮ್ಡ್ ವಿಶ್ವವಿದ್ಯಾಲಯದಲ್ಲಿ ನಡೆದ ೧೯೯೪ರ ಬ್ಯಾಚಿನ ವೈದ್ಯಕೀಯ ವಿದ್ಯಾರ್ಥಿಗಳ ಪುನರ್ ಮಿಲನ ಕಾರ್ಯಕ್ರಮ ಉದ್ಘಾಟಿಸಿದ ಅವರು ಮಾತನಾಡಿದರು.
ಹಳೆಯ ವಿದ್ಯಾರ್ಥಿಗಳು ತಾವುಕಲಿತಕಾಲೇಜು ಮತ್ತು ವಿಶ್ವವಿದ್ಯಾಲಯಗಳಿಗೆ ನಿಯಮಿತವಾಗಿ ಭೇಟಿ ನೀಡಬೇಕು. ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗುವ ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಳ್ಳಬೇಕು. ಈ ಮೂಲಕ ವಿಶ್ವವಿದ್ಯಾಲಯದಅಭಿವೃದ್ಧಿಗೆಕೊಡುಗೆ ನೀಡಬೇಕು. ಅಲ್ಲದೇ, ವಿದ್ಯಾರ್ಥಿಗಳು ಕಲಿಸಿದ ಗುರುಗಳಿಗಿಂತ ಉತ್ತಮ ಸಾಧನೆ ಮಾಡಿದರೆಅದಕ್ಕಿಂತದೊಡ್ಡಗುರುವAದನೆ ಬೇರೊಂದಿಲ್ಲ ಎಂದುಅವರು ಹೇಳಿದರು.
ಇದೇ ವೇಳೆ ಕುಲಪತಿಡಾ. ಆರ್. ಎಸ್. ಮುಧೋಳ ಮತ್ತುಕಾಲೇಜು ಪ್ರಾಚಾರ್ಯಡಾ. ಅರವಿಂದ ಪಾಟೀಲ ದೂರವಾಣಿ ಮೂಲಕ ಕಾರ್ಯಕ್ರಮಕ್ಕೆ ಶುಭಕೋರಿದರು.
ಈ ಸಂದರ್ಭದಲ್ಲಿ ವೈದ್ಯಕೀಯ ವಿಭಾಗದಡೀನ್‌ಡಾ. ತೇಜಸ್ವಿನಿ ವಲ್ಲಭ, ವೈದ್ಯಕೀಯಅಧೀಕ್ಷಕಡಾ. ರಾಜೇಶ ಹೊನ್ನುಟಗಿ, ಅಲೈಡ್ ಹೆಲ್ತ್ ಸೈನ್ಸಸ್‌ಡೀನ್‌ಡಾ. ಎಸ್. ವಿ. ಪಾಟೀಲ, ಉಪಪ್ರಾಚಾರ್ಯೆಡಾ. ಸುಮಂಗಲಾ ಪಾಟೀಲ ಸೇರಿದಂತೆ ೩೦ ಕ್ಕೂ ಹೆಚ್ಚು ಗುರುಗಳನ್ನು ೧೯೯೪ ರ ಬ್ಯಾಚಿನ ವಿದ್ಯಾರ್ಥಿಗಳು ಗೌರವಿಸಿ, ಸನ್ಮಾನಿಸಿದರು.
ಈ ಮಧ್ಯೆ ಕಾರ್ಯಕ್ರಮದ ಅಂಗವಾಗಿ ಮುಂದುವರೆದ ವೈದ್ಯಕೀಯ ಶಿಕ್ಷಣ(ಸಿಎಂಇ) ಅಧಿವೇಶನಕ್ಕೆ ಡಾ. ರಾಜೇಶ ಹೊನ್ನುಟಗಿ ಚಾಲನೆ ನೀಡಿದರು. ಯುನೈಟೆಡ್‌ಕಿಂಗಡಮ್ ನ ಡಾ. ವಿಷ್ಣುಕುಮಾರಅವರು ‘ವೈದ್ಯರಲ್ಲಿ ಮಾನಸಿಕ ಆರೋಗ್ಯ’, ಬೆಂಗಳೂರಿನ ಡಾ. ಸತೀಶ ಜೀವಣ್ಣನವರ ಅವರು ‘ಆರೋಗ್ಯ ರಕ್ಷಣೆಯಲ್ಲಿ ಎಐ ಪಾತ್ರ’, ನ್ಯೂಜಿಲೆಂಡಿನ ಡಾ. ಮನೀಶ್‌ಚೆಬ್ಬಿ ಅವರು ‘ಡಿಮಿನ್ಶಿಯಾ,’ ಮತ್ತು ಡಾ. ರಾಹುಲ್ ಸಿಂಗ್ ಅವರು ‘ಬಿಜಾಪುರ ಮತ್ತು ಬಿಯಾಂಡ್ – ಡ್ರೀಮ್, ಡೇರ್, ಫ್ಲೈ’ ವಿಷಯಗಳ ಕುರಿತು ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ೨೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಡಾ. ಗಿಲ್, ಡಾ. ಕಾಶಿನಕುಂಟಿ, ಡಾ. ಮಾಲಿನಿ ಗೋವಿಂದನ್, ಡಾ. ಜಾನಕಿ, ಡಾ. ಚೈತನ್ಯರೆಡ್ಡಿ, ಡಾ. ಸುರೇಂದ್ರರಾವ, ಡಾ. ಹಾಲಸ್ವಾಮಿ ಮಲ್ಲನಗೌಡ, ಡಾ. ಕೃಷ್ಣವೇಣಿ, ಡಾ. ಬಸವರಾಜ ಬಿಳೂರ ವೈದ್ಯಕೀಯ ಶಿಕ್ಷಣದ ದಿನಗಳನ್ನು ಸ್ಮರಿಸಿದರು.
ಹಾವೇರಿಯ ಡಾ. ಕನ್ಯಾಕುಮಾರಿ ಮತ್ತು ಡಾ. ವಾಣಿಶ್ರೀ ಹಾಗೂ ಅಮೆರಿಕದ ಕೊಲೊರಾಡೋದ ಡಾ. ಆಶಾ ಕಾಮತ ಅವರ ಭರತನಾಟ್ಯ ಶೈಲಿಯ ಗುರುವಂದನೆ ನೃತ್ಯ ಗಮನ ಸೆಳೆಯಿತು.
ಡಾ. ಗಿರೀಶ್ ಕುಲ್ಲೋಳಿ, ಡಾ. ಸಂಜೀವ ಸಜ್ಜನರ, ಡಾ. ಶಂಕರ ತಿಮ್ಮಾಪುರ, ಡಾ. ಸಿದ್ದು ಹಾವಿನಾಳ, ಡಾ. ಶಾಂತವೀರ ಮನಗೂಳಿ, ಡಾ. ವೆಂಕಟೇಶ ಪಾಟೀಲ, ಡಾ. ಗಿರಿಜಾ ಹಂಜಗಿ, ಡಾ. ಜಯಶ್ರೀ, ಡಾ. ಶಿವಾನಂದ ಪಾಟೀಲ, ಡಾ. ಕೊಕಟನೂರ, ಡಾ. ಪ್ರವೀಣ ಬಿರಾದಾರ, ಡಾ. ಸುಭಾಷನಾಡಗೌಡ, ಡಾ. ಆನಂದ ಜಾಬಶೆಟ್ಟಿ, ಡಾ. ಹೇಮಂತ ಬಾಸ್ಮೆ, ಡಾ. ಗಿರೀಶ ನರಗೊಂಡ, ಡಾ. ಮಹೇಶ ಬರಗುಂಡಿ, ಡಾ. ಬಿ. ಸಿ. ಉಪ್ಪಿನ, ಡಾ. ಗುಗ್ಗರಿಗೌಡರ, ಡಾ. ಪಿ. ವಿ. ಜಾಜು ಮುಂತಾದವರು ಉಪಸ್ಥಿತರಿದ್ದರು.
ಬಿ.ಎಲ್.ಡಿ.ಇ ಆಸ್ಪತ್ರೆಯ ರೇಡಿಯಾಲಾಜಿ ವಿಭಾಗದ ಮುಖ್ಯಸ್ಥ ಡಾ. ರಾಜಶೇಖರ್ ಮುಚ್ಚಂಡಿ ಸ್ವಾಗತಿಸಿದರು. ವಾರಂಗಲ್‌ನ ಡಾ. ಲಕ್ಷ್ಮಿರೆಡ್ಡಿ ಪ್ರಾರ್ಥಿಸಿದರು. ಡಾ. ಮಮತಾ ಕುಲ್ಲೋಳಿ ವಂದಿಸಿದರು. ಡಾ. ಸಂತೋಷಕುಮಾರ ಮತ್ತು ಡಾ. ಅಂಜಲಿ ಕಿರಣ ನಿರೂಪಿಸಿದರು.