ಮನೆ-ಮನೆಗಳಲ್ಲಿ ರಾಷ್ಟçಧ್ವಜ ಹಾರಿಸಿ ಅಭಿಯಾನ ಯಶಸ್ವಿಗೊಳಿಸಲು ಡಿಸಿ ಕರೆ
ಸಂಜೆವಾಣಿ ವಾರ್ತೆ,
ವಿಜಯಪುರ,ಆ.೧೩: ಜಿಲ್ಲೆಯಲ್ಲಿ ಸ್ವಾತಂತ್ರö್ಯ ಅಮೃತ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ಹರ-ಘರ ತಿರಂಗಾ ಕಾರ್ಯಕ್ರಮವನ್ನು ಅಧಿಕಾರಿ-ಸಿಬ್ಬಂದಿಗಳು, ವಿದ್ಯಾರ್ಥಿಗಳು, ಸಂಘ-ಸAಸ್ಥೆಗಳು ಹಾಗೂ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಮನೆ-ಮನೆಗಳಲ್ಲಿ ರಾಷ್ಟçಧ್ವಜ ಹಾರಿಸಿ, ರಾಷ್ಟç ಪ್ರೇಮವನ್ನು ಅಭಿವ್ಯಕ್ತಗೊಳಿಸುವ ಮೂಲಕ ಅತ್ಯಂತ ಸಂಭ್ರಮದಿAದ ಹಮ್ಮಿಕೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರು ಕರೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಹರ-ಘರ ತಿರಂಗಾ ಅಭಿಯಾನ ಯಶಸ್ವಿಗೊಳಿಸಲು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಅನುಷ್ಠಾನಗೊಳಿಸಲು ವಿವಿಧ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಆ.೧೩ರಂದು ತಿರಂಗಾ ಕ್ಯಾನ್ವಾಸ್ : ಸ್ಥಳೀಯ ಭಾಷೆಗಳಲ್ಲಿ ಹರ್-ಘರ್ ತಿರಂಗಾ, ಜೈಹಿಂದ್, ಘೊಷವಾಕ್ಯಗಳನ್ನು ಬರೆಯುವುದರೊಂದಿಗೆ ಅಭಿಯಾನ ಕೈಗೊಳ್ಳುವುದು, ಅಭಿಯಾನದ ನಂತರ ಅಧಿಕೃತ ಕ್ಯಾನ್ವಾಸ್‌ನ ಹೈ ರೆಸಲ್ಯೂಶನ್ ಛಾಯಾಚಿತ್ರವನ್ನು ಸಂಸ್ಕೃತಿ ಸಚಿವಾಲಯ ವೆಬ್‌ಸೈಟ್‌ನಲ್ಲಿ ಹಂಚಿಕೊಳ್ಳುವುದು. ತಿರಂಗಾ ಯಾತ್ರೆ, ಮ್ಯಾರಾಥಾನ್ ಓಟ ಹಾಗೂ ಬೈಕ್, ಕಾರ್ ಸೈಕಲ್ ಮೂಲಕ ತಿರಂಗಾ ರ‍್ಯಾಲಿ ಆಯೋಜಿಸುವುದು. ಸೆಲ್ಪಿಯೊಂದಿಗೆ ತಿರಂಗಾ ಪ್ರತಿಜ್ಞೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ವಿವಿಧ ಅಧಿಕಾರಿ-ಸಿಬ್ಬಂದಿಗಳು, ಸ್ವಸಹಾಯ ಸಂಘ-ಸAಸ್ಥೆಗಳು, ಶಾಲಾ ಕಾಲೇಜ್ ಮಕ್ಕಳು, ಸಾರ್ವಜನಿಕರು, ಕುಟುಂಬ ವರ್ಗದವರು ಸ್ವಯಂ ಪ್ರೇರಣೆಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದರು.
ಆ.೧೪ರಂದು ಶಾಲಾ-ಕಾಲೇಜ್‌ಗಳು, ಸಾರ್ವಜನಿಕ ಸಂಘ-ಸAಸ್ಥೆಗಳು, ಸ್ಥಳೀಯ ಉದ್ಯಮ ಸಂಸ್ಥೆಗಳು, ಸ್ವಸಹಾಯ ಸಂಘಗಳು, ತಿರಂಗಾ ಗೀತೆಗಳನ್ನು ನುಡಿಸುವ ಮೂಲಕ ಅಭಿಯಾನ ಕೈಗೊಳ್ಳುವುದು ಹಾಗೂ ಸಾಮಾಜಿಕ ಮಾಧ್ಯಮಗಳಾದ ಸ್ಥಳೀಯ ಟಿವಿ ಚಾನೆಲ್, ಫೇಸ್‌ಬುಕ್, ವ್ಯಾಟ್ಸ್ಅಪ್, ಟ್ವಿಟರ್ ಮೂಲಕ ಹರ-ಘರ್ ತಿರಂಗಾ ಅಭಿಯಾನದ ಛಾಯಾಚಿತ್ರಗಳನ್ನು ಬಳಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿಕೊಂಡರು.
ಆ.೧೩ರಿಂದ ೧೫ರವರೆಗೆ ಪ್ರತಿ ಮನೆ-ಮನೆಗಳಲ್ಲಿ ಧ್ವಜಾರೋಹಣ, ತಿರಂಗಾ ಸೆಲ್ಪಿಗಳನ್ನು hಚಿಡಿghಚಿಡಿಣiಡಿಚಿಟಿgಚಿ.ಛಿom ನಲ್ಲಿ ಅಪ್ಲೋಡ್ ಮಾಡುವುದು ಹಾಗೂ ೭೫ನೇ ಸ್ವಾತಂತ್ರö್ಯದ ಅಮೃತ ಮಹೋತ್ಸವದ ಅಂಗವಾಗಿ ಸಾರವಾಡ, ಮಸಬಿನಾಳ, ಹಲಸಂಗಿ, ದೇವರನಾವದಗಿ ಗ್ರಾಮಗಳಲ್ಲಿ ಸ್ಥಾಪಿಸಲಾಗಿರುವ ಶಿಲಾ ಫಲಕಗಳನ್ನು ಸ್ವಚ್ಛಗೊಳಿಸಿ ಅಲಂಕಾರ, ಪುಷ್ಪಾರ್ಚಣೆ ಮಾಡಲು ಪಂಚಾಯತಿ ಅಭಿವೃದ್ದಿ ಅಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಲಾಗಿದ್ದು, ತಹಶೀಲ್ದಾರರು, ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಮೇಲ್ವಿಚಾರಣೆ ನಡೆಸುವಂತೆ ಅವರು ಸೂಚಿಸಿದ್ದಾರೆ.
ಅಭಿಯಾನವನ್ನು ಯಶಸ್ವಿಗೊಳಿಸಲು ಜಿಲ್ಲೆಯ ಎಲ್ಲಾ ಸರ್ಕಾರಿ, ಅರೆ ಸರ್ಕಾರಿ, ನಿಗಮ-ಮಂಡಳಿಗಳು, ಸಾರ್ವಜನಿಕ ಉದ್ಯಮಗಳು, ಸ್ವಸಹಾಯ ಗುಂಪುಗಳು, ನಾಗರಿಕ ಸಂಸ್ಥೆಗಳು, ಸಾರ್ವಜನಿಕರು, ಶಾಲಾ ಕಾಲೇಜ್ ಮಕ್ಕಳು ಇತರೆ ಎಲ್ಲ ಸಿಬ್ಬಂದಿಗಳು ಹಾಗೂ ಅವರ ಕುಟುಂಬ ವರ್ಗದವರು ಸೇರಿ ಕ್ರಿಯಾಶೀಲರಾಗಿ ಪ್ರೇರಣೆಯಿಂದ ಭಾಗವಹಿಸಿ ರಾಷ್ಟçಪ್ರೇಮವನ್ನು ಅಭಿವ್ಯಕ್ತಗೊಳಿಸಲು ಮನವಿ ಮಾಡಿಕೊಂಡಿದ್ದು, ಈ ಕಾರ್ಯಕ್ರಮದ ಕುರಿತ ಎಲ್ಲಾ ಸಮಗ್ರ ವರದಿಯನ್ನು hಚಿಡಿghಚಿಡಿಣiಡಿಚಿಟಿgಚಿ.ಛಿom ನಲ್ಲಿ ಅಪಲೋಡ್ ಮಾಡಲು ಅವರು ನಿಯೋಜಿತ ಅಧಿಕಾರಿಗಳಿಗೆ ಸೂಚಿಸಿದ್ದಾರೆ.