ವಿಜಯಪುರ ಕೃಷಿ ಮಹಾವಿದ್ಯಾಲಯದಲ್ಲಿ ರ‍್ಯಾಗಿಂಗ್ ವಿರೋಧಿ ದಿನ ಆಚರಣೆ
ಸಂಜೆವಾಣಿ ವಾರ್ತೆ,
ವಿಜಯಪುರ,ಆ.೧೩:ನಗರÀ ಹೊರ ವಲಯದ ಹಿಟ್ನಳ್ಳಿಯ ಕೃಷಿ ಮಹಾವಿದ್ಯಾಲಯದಲ್ಲಿ ಇಂದು ರ‍್ಯಾಗಿಂಗ್ ವಿರೋಧಿ ದಿನ ಮತ್ತು ರ‍್ಯಾಗಿಂಗ್ ವಿರೋಧಿ ಸಪ್ತಾಹ ಆಚರಿಸಲಾಯಿತು.
ಈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ, ಗ್ರಾಮೀಣ ವಿಭಾಗದ ಪಿ.ಎಸ್.ಐ., ರವಿ ಯಡವಣ್ಣವರ ಮಾತನಾಡಿ, ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳನ್ನು ಸಹೋದರರಂತೆ ಕಾಣಬೇಕು. ಹೊಸ ವಾತಾವರಣಕ್ಕೆ ನೂತನ ವಿದ್ಯಾರ್ಥಿಗಳು ಆಗಮಿಸಿದಾಗ ಅವರಿಗೆ ಸ್ಥಳದ ಪರಿಚಯ ಮಾಡಿಕೊಡಬೇಕು ಎಂದರು.
ಒಂದು ವೇಳೆ ಕಿರಿಯ ವಿದ್ಯಾರ್ಥಿಗಳ ಜೊತೆ ಅಶಿಸ್ತಿನಿಂದ ವರ್ತಿಸಿದಲ್ಲಿ, ಅವರ ಮೇಲೆ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದರು.
ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಮತ್ತು ಸಹ ಸಂಶೋಧನಾ ನಿರ್ದೇಶಕ ಡಾ. ಅಶೋಕ ಸಜ್ಜನ ಮಾತನಾಡಿ, ವಿದ್ಯಾರ್ಥಿಗಳು ಕಲಿಯುವುದಗೋಸ್ಕರ ಕಾಲೇಜಿಗೆ ಆಗಮಿಸಿದ್ದು, ತಮ್ಮ ಅವಧಿಯಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗುವಂತೆ ಕಲಿಯಬೇಕು. ಓದಿನಲ್ಲಿ ಪೈಪೋಟಿ ಮಾಡಬೇಕು. ವಿನಾಕಾರಣ ಅನಗತ್ಯ ಚಟುವಟಿಕೆಗಳಲ್ಲಿ ಭಾಗವಹಿಸಬಾರದು ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ ವಿದ್ಯಾಧಿಕಾರಿ ಡಾ. ಎ. ಭೀಮಪ್ಪ ಮಾತನಾಡಿ, ಒಂದು ವಾರದವರೆಗೆ ರ‍್ಯಾಗಿಂಗ್ ತಡೆಗಟ್ಟಲು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿ ಸಂಘದ ಮುಖ್ಯ ಸಲಹೆಗಾರÀ ಡಾ. ಎನ್. ಡಿ. ಸುನಿತಾ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿಲಯ ಪಾಲಕರಾದ ಡಾ. ಎಸ್. ಹೆಚ್. ಗೋಟ್ಯಾಳ, ಡಾ. ಕಾಶೀಬಾಯಿ ಖ್ಯಾಡಗಿ ಮತ್ತು ಡಾ. ಸಾವಿತ್ರಿ ಪಾಟೀಲ ಭಾಗವಹಿಸಿದ್ದರು. ಡಾ. ಜಿ. ಶ್ರೀನಿವಾಸಲು, ಸೇರಿದಂತೆ ಕೃಷಿ ಕಾಲೇಜಿನ ಸಮಸ್ತ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗವಹಿಸಿದ್ದರು.