ಸಿದ್ದರಾಮಯ್ಯ 77ನೇ ಹುಟ್ಟುಹಬ್ಬ, ವಿವಿಧ ಸಾಮಾಜಿಕ ಕಾರ್ಯ
ಸಂಜೆವಾಣಿ ನ್ಯೂಸ್
ಮೈಸೂರು: ಆ.13:- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 77ನೇ ಹುಟ್ಟು ಹಬ್ಬದ ಅಂಗವಾಗಿ ಸೋಮವಾರ ಮೈಸೂರು ನಗರ ಹಾಗೂ ಗ್ರಾಮಾಂತರ ಜಿ¯್ಲÁ ಕಾಂಗ್ರೆಸ್ ಸಮಿತಿ ವತಿಯಿಂದ ಕೆಆರ್ ಆಸ್ಪತ್ರೆ ಆವರಣ ಸ್ವಚ್ಛಗೊಳಿಸುವ ಕಾರ್ಯಕ್ರಮ ನಡೆಯಿತು.
ಸುಮಾರು 150ಕ್ಕೂ ಹೆಚ್ಚು ಮಂದಿ ಕಾಂಗ್ರೆಸ್ ಪದಾಧಿಕಾರಿಗಳು ಮುಂಜಾನೆಯೇ ಕೆ.ಆರ್.ಆಸ್ಪತ್ರೆ ಆವರಣದಲ್ಲಿ ಸೇರಿ ಸ್ವಚ್ಛತೆ ಕಾರ್ಯಕ್ರದಲ್ಲಿ ತೊಡಗಿಸಿಕೊಂಡರು. ಪಾಲಿಕೆ ಹಾಗೂ ಕೆಆರ್.ಅಸ್ಪತ್ರೆಯ 40ಕ್ಕೂ ಹೆಚ್ಚು ಸ್ವಚ್ಛತಾ ಸಿಬ್ಬಂದಿ ಸ್ಬಚ್ಛತಾ ಕಾರ್ಯಕ್ಕೆ ಕೈಜೋಡಿಸಿದರು. ಮೂರೂವರೆ ಗಂಟೆಗಳ ಕಾಲ ಶ್ರಮದಾನ ಮಾಡಿ ಅಂದಾಜು 3 ಎಕರೆಯಷ್ಟು ಖಾಲಿ ಜಾಗದಲ್ಲಿ ಬೆಳೆದಿದ್ದ ಪಾರ್ಥೇನಿಯಂ, ಗಿಡಗಂಟೆ ತೆರವುಗೊಳಿಸಿದರು. ಹೊರರೋಗಿಗಳ ವಿಭಾಗದಿಂದ ಆರಂಭವಾದ ಸ್ವಚ್ಛತೆ ಕಾರ್ಯ, ಹಳೆಯ ಜಯದೇವ ಕಟ್ಟಡ, ಕಲ್ಲು ಬಿಲ್ಡಿಂಗ್ ವಾರ್ಡ್, ಬ್ಲಡ್ ಬ್ಯಾಂಕ್ ಆವರಣ, ಕ್ಯಾಂಟೀನ್ ಆವರಣ, ಚೆಲುವಾಂಬ ಆಸ್ಪತ್ರೆ, ಮಕ್ಕಳ ಬಿಲ್ಡಿಂಗ್ ಬಳಿ ದೀರ್ಘಾವಧಿಯ ತ್ಯಾಜ್ಯ ವಸ್ತುಗಳು ಹಾಗೂ ಅನಗತ್ಯ ಕಸ ವಿಲೇವಾರಿ ಮಾಡಲಾಯಿತು. ಒಟ್ಟು ಸುಮಾರು 6 ಟಿಪ್ಪರ್ ಕಸ ಸಂಗ್ರಹವಾಯಿತು.
ಶಾಸಕ ಕೆ.ಹರೀಶ್‍ಗೌಡ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸಿದ್ದರಾಮಯ್ಯ ಅವರು ನಮ್ಮೆಲ್ಲರಿಗೂ ಆದರ್ಶ ರಾಜಕಾರಣಿಯಾಗಿದ್ದು ಮಾದರಿಯಾಗಿದ್ದಾರೆ. ಇವರ ಹುಟ್ಟುಹಬ್ಬದ ಅಂಗವಾಗಿ ಕಾಂಗ್ರೆಸ್ ವತಿಯಿಂದ ಕೆಆರ್ ಆಸ್ಪತ್ರೆಯ ಆವರಣವನ್ನು ಸ್ವಚ್ಛಗೊಳಿಸಿರುವುದು ಶ್ಲಾಘನೀಯ ಎಂದರು.
ಜನಪರ ಯೋಜನೆಗಳನ್ನು ನಾಡಿಗೆ ನೀಡಿದ ಸಿದ್ದರಾಮಯ್ಯ ಅವರ ನೇರ ನಡೆ-ನುಡಿ, ಆಡಳಿತ ವೈಖರಿ ನಮ್ಮಂತಹ ಯುವ ರಾಜಕಾರಣಿಗಳಿಗೆ ಗ್ರಂಥಾಲಯವಿದ್ದಂತೆ ಎಂದರು.
ಕಾಂಗ್ರೆಸ್ ಗ್ರಾಮಾಂತರ ಸಮಿತಿ ಅಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್ ಮಾತನಾಡಿ, ಸಮಾಜವಾದಿ ಮತ್ತು ಜಾತ್ಯಾತೀತ ಹಿನ್ನೆಲೆಯಿಂದ ಬೆಳೆದು ಬಂದ ಸಿದ್ದರಾಮಯ್ಯ ಅವರ ರಾಜಕೀಯ ಜೀವನ ಪ್ರಶ್ನಾತೀತವಾಗಿದೆ ಎಂದರು.
ಸಿದ್ದರಾಮಯ್ಯ ಅವರ 77ನೇ ಹುಟ್ಟುಹಬ್ಬವನ್ನು ಅರ್ಥ ಗರ್ಭಿತವಾಗಿ ಆಚರಣೆ ಮಾಡುವ ದೃಷ್ಟಿಯಿಂದ ಐತಿಹಾಸಿಕ ಹಿನ್ನೆಲೆ ಇರುವ ಮತ್ತು ಲಕ್ಷಾಂತರ ರೋಗಿಗಳಿಗೆ ಜೀವದಾನ ಮಾಡಿರುವ ಕೆಆರ್ ಆಸ್ಪತ್ರೆ ಆವರಣ ಸ್ವಚ್ಛಗೊಳಿಸಲಾಗಿದೆ. ಈ ಸೇವಾ ಕಾರ್ಯ ಮಾಡಿರುವುದು ನಮಗೆ ಹೆಮ್ಮೆಯ ವಿಚಾರವಾಗಿದೆ ಎಂದರು.
ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ಶೋಭಾ ಮಾತನಾಡಿ, ಆಸ್ಪತ್ರೆಯ ಆವರಣದಲ್ಲಿ ನಡೆದಿರುವ ಈ ಸೇವಾ ಕಾರ್ಯ ಹೊಸದೊಂದು ದಾಖಲೆಯಾಗಿದೆ. ಒಳ್ಳೆಯ ಉz್ದÉೀಶಕ್ಕಾಗಿ ಎಲ್ಲರೂ ಒಗ್ಗೂಡಿ ಶ್ರಮಿಸಿರುವುದು ಮಾದರಿಯಾಗಿದೆ ಎಂದರು.
ಎಂಎಲ್‍ಸಿ ಡಾ.ಡಿ.ತಿಮ್ಮಯ್ಯ, ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಮಾಜಿ ಸಂಸದ ಕಾಗಲವಾಡಿ ಶಿವಣ್ಣ, ಮಾಜಿ ಸಚಿವ ಕೋಟೆ ಎಂ.ಶಿವಣ್ಣ, ಮಾಜಿ ಶಾಸಕ ಮರಿತಿಬ್ಬೇಗೌಡ, ಕೆಪಿಸಿಸಿ ಪದಾಧಿಕಾರಿಗಳಾದ ಭಾಸ್ಕರ್, ಅಕ್ಬರ್ ಆಲಿ, ಜೇಸುದಾಸ್, ಕಾಂಗ್ರೆಸ್ ಪP್ಷÀದ ನಾನಾ ಹಂತದ ಪದಾಧಿಕಾರಿಗಳಾದ ಎಡತಲೆ ಮಂಜುನಾಥ್ ಹಾಗೂ ಇತರರು ಇದ್ದರು.