ಹಿಂದುಗಳ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ
ಕೋಲಾರ,ಆ,೧೩- ಬಾಂಗ್ಲಾ ದೇಶದಲ್ಲಿ ಹಿಂದುಗಳ ಮೇಲೆ ನಡೆಸುತ್ತಿರುವ ದೌರ್ಜನ್ಯ ಸಮಸ್ತ ಹಿಂದುಗಳ ಸಂಘಟನೆಗಳು ಖಂಡಿಸುತ್ತದೆ. ಇದರ ವಿರುದ್ದ ಶಾಂತಿಯುತವಾಗಿ ಭಾರತದಲ್ಲಿ ಪ್ರತಿಭಟಿಸುವ ಮೂಲಕ ವಿಶ್ವಸಂಸ್ಥೆಯು ಬಾಂಗ್ಲಾ ದೇಶಕ್ಕೆ ಕಿವಿ ಹಿಂಡುವ ಮೂಲಕ ಎಚ್ಚರಿಕೆ ನೀಡುವ ಕೆಲಸ ಮಾಡ ಬೇಕೆಂದು ಮಾಜಿ ಸಂಸದ ಎಸ್. ಮುನಿಸ್ವಾಮಿ ಆಗ್ರಹಿಸಿದರು.
ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಹಿಂದುಪರ ಸಂಘಟನೆಗಳು ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ನಡೆಸುತ್ತಿರುವ ಅಮಾನವೀಯ ಕೃತ್ಯಗಳನ್ನು ಖಂಡಿಸಿ ಆಯೋಜಿಸಿದ್ದ ಮಾನವ ಸರಪಳಿ ಮೂಲಕ ಭಿತ್ತಿಫಲಕಗಳನ್ನು ಹಿಡಿದು ಘೋಷಣೆಗಳು ಕೊಗುತ್ತಾ ರಸ್ತೆ ತಡೆಯ ಪ್ರತಿಭಟನೆಯಲ್ಲಿ ಭಾಗವಹಿಸಿದ ಅವರು ಮಾತನಾಡಿ ವಿಶ್ವಸಂಸ್ಥೆಯು ಬಾಂಗ್ಲದೇಶದ ಪ್ರಧಾನಿಗಳಿಗೆ ಹಿಂದುಗಳ ಮೇಲಿನ ದೌರ್ಜನ್ಯವನ್ನು ನಿಯಂತ್ರಿಸಲು ಎಚ್ಚರಿಕೆ ನೀಡ ಬೇಕು. ಹಿಂದುಗಳ ಮೇಲೆ ಹತ್ತಿಕ್ಕುವ ಕೆಲಸಗಳು ಎಲ್ಲೆ ನಡೆದರೂ ನಾವುಗಳು ಸಹಿಸುವುದಿಲ್ಲ ಎಂದರು.
ಹಿಂದುಗಳ ಮೇಲಿನ ದಬ್ಬಾಳಿಕೆಯನ್ನು ವಿರೋಧಿಸಿ ಪ್ರತಿಭಟಿಸುವ ಮೂಲಕ ಹಿಂದು ಸಂಘಟನೆಗಳು ವಿದೇಶಗಳಲ್ಲಿರುವ ಭಾರತೀಯರಿಗೆ ಹಾಗೂ ಬಾಂಗ್ಲ ದೇಸದ ಗಡಿಭಾಗದ ಹಿಂದುಗಳಿಗೆ ಧೆರ್ಯ ತುಂಭುವ ಕೆಲಸವನ್ನು ಮಾಡಲಾಗುತ್ತಿದೆ. ಹಿಂದುಗಳ ಪರವಾದ ದ್ವನಿ ಎತ್ತುವ ಕೆಲಸವನ್ನು ಭಾರತೀಯ ಹಿಂದು ಪರ ಸಂಘಟನೆಗಳು ಮಾಡುತ್ತಿದೆ. ಹಿಂದುಗಳು ಸಂಘಟಿತರಾಗಿ ಬಾಂಗ್ಲ ದೇಶವನ್ನು ನಮ್ಮದು ಎಂದು ಘೋಷಿಸುವಂತಾಗ ಬೇಕೆಂದು ತಿಳಿಸಿದರು.
ಕರ್ನಾಟಕ ರಾಜ್ಯ ಸರ್ಕಾರವು ಹಿಂದುಗಳಿಗೆ ಅಗುತ್ತಿರುವ ಅನ್ಯಾಯ ವಿರುದ್ದ ಧ್ವನಿ ಎತ್ತುವಂತಾಗ ಬೇಕು, ಹಿಂದುಗಳ ಪ್ರಾಣ,ಮಾನಗಳು ರಕ್ಷಿಸುವಂತ ಅವಶ್ಯಕತೆ ಇಲ್ಲದೆ ಏಜೆಂಟ್‌ಗಳಂತೆ ವರ್ತಿಸುವ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡಿರುವಂತ ಸಂಶಯ ಉಂಟಾಗುತ್ತಿದೆ. ಭಾರತವು ಜಾತ್ಯಾತೀತ ರಾಷ್ಟ್ರವಾಗಿದೆ. ಹಿಂದು ಮುಸ್ಲಿಂ ಕ್ರೈಸ್ತರು ಎಲ್ಲಾರೂ ಸಹ ಅಣ್ಣತಮ್ಮಂದಿರಂತೆ ಬಾಳ್ವೆ ನಡೆಸುತ್ತಿರುವ ಮೂಲಕ ಸೌಹಾರ್ದತೆ ಪ್ರತೀಕವಾಗಿರುವ ಸಂದರ್ಭದಲ್ಲಿ ಬಾಂಗ್ಲಾದೇಶದ ಹಿಂದುಗಳ ವಿರೋಧಿಗಳಿಗೆ ತಕ್ಕ ಉತ್ತರ ನೀಡುವಂತಾಗ ಬೇಕು ಎಂದರು.
ಸರ್ಕಾರವು ಶಾಂತಿಯುತ ಹೋರಾಟಗಳಿಗೆ ಅಧಿಕಾರಿಗಳು ಸಹಕಾರ ನೀಡುವ ಮೂಲಕ ಸರ್ಕಾರದ ನಿಯಮಗಳನ್ನು ಪಾಲನೆ ಮಾಡ ಬೇಕು ಅದರೆ ಸರ್ಕಾರಿ ಆಸ್ತಿಗಳನ್ನು ವಕ್ಫ ಬೋರ್ಡಗಳು ಕಬಳಿಸುವ ಮೂಲಕ ಆಸ್ತಿಗಳನ್ನು ಪರಭಾರೆ ಮಾಡಲು ಮುಂದಾಗಿರುವುದು ಹಿಂದುಗಳಿಗೆ ವಂಚಿಸಿದಂತಾಗಿದೆ. ನಾವುಗಳು ಮುಸ್ಲಿಂ ವಿರೋಧಿಗಳಲ್ಲ. ಮುಸ್ಲಿಂ ಸಮುದಾಯಕ್ಕೆ ನೀಡಿದಂತೆ ಎಲ್ಲಾ ಸಮುದಾಯಗಳಿಗೂ ಸರ್ಕಾರದ ಆಸ್ತಿಗಳನ್ನು ಸಮಾಂತರವಾಗಿ ಹಂಚಿಕೆ ಮಾಡಲಿ ಆಗಾ ನಾವು ಒಪ್ಪಿಕೊಳ್ಳುತ್ತೇವೆ ಅದರೆ ಓಟ್ ಬ್ಯಾಂಕ್‌ಗಾಗಿ ಒಂದು ಸಮುದಾಯವನ್ನು ಒಲೈಸಿ ಕೊಳ್ಳಲು ಸರ್ಕಾರಿ ಆಸ್ತಿಗಳನ್ನು ಹಂಚಿಕೆ ಮಾಡುವುದು ಸಮಂಜಸವಲ್ಲ ಎಂದು ಪ್ರತಿಪಾದಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ವೇಣಗೋಪಾಲ್, ಕುಡಾ ಮಾಜಿ ಅಧ್ಯಕ್ಷ ವಿಜಯಕುಮಾರ್, ನಗರಸಭೆ ಮಾಜಿ ಅಧ್ಯಕ್ಷ ವಿಜಯಕುಮಾರ್, ಕೆ.ಡಿ.ಪಿ. ಸದಸ್ಯ ಅಪ್ಪಿ ನಾರಾಯಣಸ್ವಾಮಿ, ಬಿಜೆಪಿ ಮುಖಂಡರಾದ ಕೆಂಬೋಡಿ ನಾರಾಯಣಸ್ವಾಮಿ ವಿ.ಹೆಚ್,ಪಿ ಮುಖಂಡರಾದ ಸತ್ಯನಾರಾಯಣ, ಭಜರಂಗದಳ ಬಾಬು, ಬಾಲಾಜಿ, ತಿಮ್ಮರಾಯಪ್ಪ, ಓಹಿಲೇಶ್, ಪುಟ್ಟಣ್ಣ, ಆನಂದ್ (ಅಪ್ಪಿ) ಜಯಂತಿ ಲಾಲ್, ಕೆ.ಎಸ್.ವೆಂಕಟಸ್ವಾಮಿ, ಹಾರೋಹಳ್ಳಿ ವೆಂಕಟೇಶ್, ಹಾಗೂ ಶ್ರೀರಾಮಸೇನೆ ಮತ್ತು ಆರ್.ಎಸ್.ಎಸ್. ಮುಖಂಡರುಗಳು ಭಾಗವಹಿಸಿದ್ದರು.