ನಗರಸಭೆ ಸದಸ್ಯರಲ್ಲಿ ಗರಿಗೆದರಿದ ಚಟುವಟಿಕೆ
ಕೋಲಾರ,ಆ,೧೩- ಕೋಲಾರ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಘೋಷಣೆ ಯಾಗುತ್ತಿದ್ದಂತೆ ತೊಗಡಿಸುತ್ತಿದ್ದ ನಗರಸಭೆ ಸದಸ್ಯರಲ್ಲಿ ರಾಜಕೀಯದ ಚಟುವಟಿಕೆಗಳು ಗರಿಗೆದರಿದಂತೆ ಕಂಡು ಬರುತ್ತಿದೆ.
ಕಳೆದ ಸುಮಾರು ಒಂದೂವರೆ ವರ್ಷಗಳಿಂದ ನಗರಸಭೆ, ಪುರಸಭೆಗಳ ಆಡಳಿತವನ್ನು ಜಿಲ್ಲಾಧಿಕಾರಿಗಳೆ ನಿರ್ವಹಿಸುತ್ತಿದ್ದು, ಸದಸ್ಯರುಗಳಾಗಿ ಆಯ್ಕೆಯಾಗಿದ್ದವರು ಆಡಳಿತ ಮಂಡಳಿಯಲ್ಲಿ ಅಧಿಕಾರ ಇಲ್ಲದಂತೆ ತೊಕಡಿಸುವಂತಾಗಿತ್ತು.ಮೀಸಲಾತಿಯು ಘೋಷಣೆಯಾಗಿದ ಕೊಡಲೇ ಎಚ್ಚೆತ್ತು ಕೊಂಡು ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಲಾಭಿಮಾಡಲು ಪ್ರಾರಂಭಿಸುತ್ತಿದ್ದಾರೆ.
ಕೋಲಾರ ನಗರಸಭೆಯಲ್ಲಿ ಒಟ್ಟು ೩೫ ವಾರ್ಡ್‌ಗಳಿದೆ. ಈ ಪೈಕಿ ಕಾಂಗ್ರೇಸ್,[ ಜೆ.ಡಿ.ಎಸ್. ಬಿಜೆಪಿ ಬೆಂಬಲಿತರು ಹಾಗೂ ಇತರೆ ಪಕ್ಷೇತರರ ಬಗ್ಗೆ ಲೆಕ್ಕಾಚಾರಗಳು ಪ್ರಾರಂಭಿಸ ಬೇಕು
ನಗರಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತರು ಬಹುಮತ ಪಡೆದಿದ್ದರೂ ಸಹ ಒಮ್ಮತದ ಸಂಘಟನೆಯು ವಿಫಲವಾಗಿತ್ತು ಹಾಗಾಗಿ ಹಿಂದೆ ಜೆ.ಡಿ.ಎಸ್. ಪಕ್ಷದ ಬೆಂಬಲಿತರು ಆಡಳಿತ ಚುಕ್ಕಾಣಿ ಹಿಡಿದಿದ್ದರು. ಅದರೆ ಈಗಾ ಸ್ಥಳೀಯ ಶಾಸಕರಾದ ಕೊತ್ತೂರು ಮಂಜುನಾಥ್ ಮತ್ತು ವಿಧಾನ ಪರಿಷತ್ ಸದಸ್ಯರಾದ ಎಂ.ಎಲ್.ಅನಿಲ್ ಕುಮಾರ್ ಅವರು ಶತಾಯ ಗತಾಯ ಕಾಂಗ್ರೇಸ್ ಬೆಂಬಲಿತರನ್ನೆ ನಗರಸಭೆ ಗದ್ದುಗೆ ಮೇಲೆ ಕೊರಿಸಲು ಕಾಂಗ್ರೇಸ್ ಮುಖಂಡರೊಂದಿಗೆ ಈಗಾಗಲೇ ಮೀಸಲಾತಿ ಘೋಷಣೆಯಾದ ಮೇಲೆ ಚರ್ಚೆಗಳನ್ನು ನಡೆಸಿದ್ದಾರೆ.
ಮತ್ತೊಂದು ಕಡೆ ಜೆ.ಡಿ.ಎಸ್. ಪಕ್ಷದ ವಿಧಾನ ಪರಿಷತ ಸದಸ್ಯ ಇಂಚರ ಗೋವಿಂದರಾಜು ಹಾಗೂ ಸಂಸದ ಮಲ್ಲೇಶ್ ಬಾಬು ಇವರುಗಳು ಈ ಹಿಂದೆ ಪಡೆದಿದ್ದ ಸ್ಥಾನ ಮಾನಗಳನ್ನು ಈ ಭಾರಿಯೂ ಉಳಿಸಿ ಕೊಳ್ಳಲು ಅಗತ್ಯವಾದ ರೂಪರೇಷೆಗಳ ಬಗ್ಗೆ ಚರ್ಚೆಗಳು ನಡೆಸಲು ಸಿದ್ಧತೆ ಮಾಡಿ ಕೊಳ್ಳುತ್ತಿದ್ದಾರೆ.
ಆ ೧೫ ರಂದು ಸ್ವಾತಂತ್ರ್ಯ ದಿನಾಚರಣೆಯ ಧ್ವಜಾ ರೋಹಣಕ್ಕೆ ಅಗಮಿಸಲಿರುವ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ನಗರಾಭಿವೃದ್ದಿ ಸಚಿವರಾಗಿರುವ ಬೈರತಿ ಸುರೇಶ್ ಅವರೊಂದಿಗೆ ಮಾತುಕತೆ ನಡೆಸಲು ನಿರ್ಧರಿಸಿದ್ದಾರೆ.
ಈ ಹಿಂದೆ ಇದ್ದ ಕಾಂಗ್ರೆಸ್ ಪಕ್ಷದಲ್ಲಿನ ಘಟಬಂಧನ್ ಬಣ ಮತ್ತು ಸಚಿವ ಕೆ.ಹೆಚ್.ಮುನಿಯಪ್ಪ ಬಣದಲ್ಲಿ ಪ್ರತಿಷ್ಠೆಗಳು ಉಪಶಮನಗೊಂಡಿದ್ದು ಎಲ್ಲಾ ಕಾರ್ಯಕರ್ತರು ಒಂದೇ ವೇದಿಕೆಯಲ್ಲಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿರುವುದು ಕಾಂಗ್ರೇಸ್ ಪಕ್ಷದಲ್ಲಿನ ಭಿನ್ನಮತ ಉಪಶಮನಗೊಂಡಿರುವುದಕ್ಕೆ ನಿದರ್ಶನವಾಗಿದೆ.
ಅದೇ ರೀತಿ ಜೆ.ಡಿ.ಎಸ್. ಮತ್ತು ಬಿಜೆಪಿ ಪಕ್ಷಗಳು ರಾಜ್ಯದಲ್ಲಿ ಮೈತ್ರಿಯಾಗಿದ್ದು ಬರಲಿರುವ ಎಲ್ಲಾ ಚುನಾವಣೆಗಳಲ್ಲೂ ಒಂದೇ ವೇದಿಕೆಯಲ್ಲಿ ಎದುರಿಸಲು ನಿರ್ಧರಿಸಿದ್ದಾರೆ. ಈಗಾಗಲೇ ಲೋಕಸಭಾ ಚುನಾವಣೆಯಲ್ಲಿ ಯಶಸ್ಸು ಸಾಧಿಸಿರುವುದು ಸಾಕ್ಷಿಯಾಗಿದೆ.
ಇದರ ಜೊತೆಗೆ ನಗರಸಭೆಯಲ್ಲಿ ಪಕ್ಷೇತರ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಅವರನ್ನು ತಮ್ಮತ್ತ ಸೆಳೆಯಲು ಕುದುರೆ ವ್ಯಾಪಾರದ ಲಾಭಿಗಳಿಗೆ ಸಿದ್ದತೆಗಳನ್ನು ಮಾಡಿ ಕೊಳ್ಳಲಾಗುತ್ತಿದೆ.
ಅಧ್ಯಕ್ಷ ಸ್ಥಾನವು ಹಿಂದುಳಿದ ವರ್ಗ, ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲು ನಿಗಧಿ ಪಡೆಸಿರುವುದು ಹಾಗಾಗಿ ಈ ವರ್ಗದ ಸದಸ್ಯರಲ್ಲಿ ಯಾರ್‍ಯಾರು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಆರ್ಹರಾಗಿದ್ದಾರೆ ಎಂಬ ಲೆಕ್ಕಾಚಾರಗಳು ಪ್ರಾರಂಭವಾಗಲಿದೆ