ಕಾರ್ಮಿಕ ಮುಖಂಡ ಶ್ಯಾಮಣ್ಣರೆಡ್ಡಿಗೆ ಸನ್ಮಾನ
ಕೋಲಾರ, ಆ.೧೩- ಕಟ್ಟಡ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಆ.೫ ರಂದು ಬೆಂಗಳೂರಿನ ಮುಖ್ಯಮಂತ್ರಿ ಮನೆ ಚಲೋ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಶ್ರಮಿಸಿದ ಕಟ್ಟಡ ಕಾರ್ಮಿಕರ ಸಂಘದ ರಾಜ್ಯ ಅಧ್ಯಕ್ಷ ಶ್ಯಾಮಣ್ಣರೆಡ್ಡಿ ಅವರನ್ನು ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ಪದಾಧಿಕಾರಿಗಳು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಹೊನ್ನೇನಹಳ್ಳಿ ಯಲ್ಲಪ್ಪ ಮಾತನಾಡಿ ಕಟ್ಟಡ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಬೆಂಗಳೂರಿನ ಸಿಎಂ ಸಿದ್ದರಾಮಯ್ಯ ಮನೆ ಚಲೋ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಲ್ಲಿ ಶ್ಯಾಮಣ್ಣರೆಡ್ಡಿ ಅವರ ಪಾತ್ರವು ಮುಖ್ಯವಾಗಿದೆ ಹೋರಾಟದಿಂದಲ್ಲೇ ಕಳೆದ ವಾರ ಕಾರ್ಮಿಕ ಸಚಿವ ಸಂತೋಷ್ ಲಾಡ್ ನೇತೃತ್ವದಲ್ಲಿ ಅಧಿಕಾರಿಗಳು ಸಂಘಟನೆಗಳ ಮುಖಂಡರ ಸಭೆಯನ್ನು ನಡೆಸಿ ಬೇಡಿಕೆಗಳನ್ನು ಈಡೇರಿಸಲು ಸರ್ಕಾರವು ಕೂಡಲೇ ಕ್ರಮವಹಿಸುವ ಭರವಸೆ ನೀಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಐಸಿಸಿಟಿಯು ಜಿಲ್ಲಾ ಅಧ್ಯಕ್ಷ ಪ್ರಭಾಕರ್, ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರಳೀಧರ್, ಮುಖಂಡರಾದ ಮಾಲಾ, ಚಲಪತಿ, ಗಂಗರೆಡ್ಡಿ, ನಾಗರಾಜ್, ಶಿವಣ್ಣ, ಸರಿತಮ್ಮ, ಲಕ್ಷ್ಮೀಕಾಂತಮ್ಮ, ಭಾಗ್ಯಮ್ಮ, ಅನಿಲ್, ವೆಂಕಟೇಶ್, ಶಿವಪ್ಪ, ಮುನಿರಾಜು ಸರವಣಕುಮಾರ್, ವಿಜಿ, ವಿನ್ಸೆಂಟ್, ಮುಂತಾದವರು ಇದ್ದರು.