ಆಲಗೂಮೂಲೆ ಶ್ರೀ ಸಪ್ಪೇಮಲ್ಲೇಶ್ವರ ಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ ಮರುಕಳಸಾ ಸ್ಥಾಪನೆ
ಸಂಜೆವಾಣಿ ವಾರ್ತೆ
ಹನೂರು ಆ 13 :- ತಾಲೂಕಿನ ಮಣಗಳ್ಳಿ ಗ್ರಾಮ ಪಂ. ವ್ಯಾಪ್ತಿಯ ಆಲಗೂಮೂಲೆ ಗ್ರಾಮದಲ್ಲಿ ಶ್ರೀ ಸಪ್ಪೇಮಲ್ಲೇಶ್ವರ ಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ ಮರುಕಳಸ ಸ್ಥಾಪನೆ ಮತ್ತು ಸಂಪ್ರಕ್ಷಣೆ ಕಾರ್ಯಕ್ರಮವು ಧಾರ್ಮಿಕ ವಿಧಿ ವಿಧಾನಗಳು ವಿವಿಧ ಪೂಜಾ ಕೈಂಕಾರ್ಯಗಳು ನಡೆಯಿತು.
ಆಲಗೂಮೂಲೆ ಶ್ರೀ ಸಪ್ಪೇಮಲ್ಲೇಶ್ವರ ಸ್ವಾಮಿ ದೇವಸ್ಥಾನ ಜೀರ್ಣೋದ್ಧಾರವು ಬ್ರಾಹ್ಮಿ ಮುಹೂರ್ತದಲ್ಲಿ ದೇವತಾ ಪ್ರತಿಷ್ಠಾಪನೆ ಹೋಮ ಹವನ ವೇದ ಪಾರಾಯಣದೊಂದಿಗೆ ದೇವರ ಉತ್ತಿಷ್ಠ ಅಷ್ಟ ಬಂಧನ ಪೂಜೆಯೊಂದಿಗೆ ದೇವತಾ ಪ್ರತಿಷ್ಠಾಪನೆ ಹೋಮ ಹವನ ದೇವತಾ ಕಾರ್ಯಗಳು ನಡೆಯಿತು.
ಬಂಡಳ್ಳಿ ದೊಡ್ಡ ಮಠದ ಶ್ರೀ ಫಲಹಾರ ಪ್ರಭುದೇವ ಸ್ವಾಮಿಗಳು ಕಳಸ ಪ್ರತಿಷ್ಠಾಪನೆ ನೆರೆವೇರಿಸಿದರು. ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಆಲಗೂಮೂಲೆ ಗ್ರಾಮದಲ್ಲಿ ಪ್ರತಿ ತಿಂಗಳು ನಡೆಯುವ ಹುಣ್ಣಿಮೆಯ ದಿನದಂದು ಕೆಂಡಗಣ್ಣ ಸ್ವಾಮಿ ದೇವಸ್ಥಾನಕ್ಕೆ ಬರುವ ಎಲ್ಲಾ ಸಮುದಾಯದ ಭಕ್ತಾದಿಗಳಿಗೆ ಆಲಗೂಮೂಲೆ ಗ್ರಾಮದ ಪ್ರತಿಯೊಂದು ಮನೆಯಲ್ಲಿ ದಾಸೋಹ ನೀಡುತ್ತಿರುವುದು ತುಂಬಾ ಸಂತೋಷದ ವಿಷಯ.
ಈ ಗ್ರಾಮದಲ್ಲಿ ವಿದ್ಯಾವಂತರು ಯುವಕರು ಇದ್ದಾರೆ ಅವರಲ್ಲಿ ಮುಗ್ಧತೆ ಕಾಣಿಸುತ್ತದೆ ಹಿಂದೂ ಸಮಾಜದಲ್ಲಿ ಅನ್ನವನ್ನು ಹಾಕುವರು ನಮ್ಮ ವೀರಶೈವ ಸಮಾಜ ಭಕ್ತಿಯಲ್ಲಿ ನಮ್ಮ ಸಮಾಜ ಮುಂದೆ ಇದೆ. ಶ್ರೀ ಸಪ್ಪೇಮಲ್ಲೇಶ್ವರ ಸ್ವಾಮಿ ಕೆಂಡಗಣ್ಣ ಸ್ವಾಮಿಯ ಆಶೀರ್ವಾದದಿಂದ. ಉತ್ತಮ ಮಳೆ ಬೆಳೆ ಕರುಣಿಸಿ ಎಲ್ಲರೂ ಸಂತೋಷದಿಂದ ಇರಲಿ ಎಂದು ಆಶಿರ್ವಚನ ನೀಡಿದರು.
ಮುಡಿಗುಂಡ ಮಠದ ಶ್ರೀಕಂಠ ಸ್ವಾಮಿಗಳು ಮಾತನಾಡಿ ಮಲ್ಲೇಶ್ವರ ಸ್ವಾಮಿ ಹಾಗೂ ಕೆಂಡಗಂಡ ಸ್ವಾಮಿ 18ನೇ ಶತಮಾನದಲ್ಲಿ ಶ್ರೀ ಮಲೆ ಮಹದೇಶ್ವರ ಸ್ವಾಮಿಯ ಶಿಷ್ಯರಾಗಿ ಬಂದಂತವರು ಶ್ರೀ ಕೆಂಡಗಣ್ಣ ಸ್ವಾಮಿ ಹಾಗೂ ಶ್ರೀ ಸಪ್ಪೆ ಮಲ್ಲೇಶ್ವರ ಸ್ವಾಮಿ ಆಲಗೂಮೂಲೆ ಗ್ರಾಮದಲ್ಲಿ ನೆಲೆಸಿದ ಶರಣರು ನೆಲೆಸಿದರು.
ಆಲಗೂಮೂಲೆ ಗ್ರಾಮವು ಸುತ್ತ ಬೆಟ್ಟ ಗುಡ್ಡಗಳಿಂದ ಕುಡಿದು ಉತ್ತಮ ಪರಿಸರವಿದ್ದು ಈ ಗ್ರಾಮದಲ್ಲಿ ನೂತನವಾಗಿ ಶ್ರೀ ಸಪ್ಪೇಮಲ್ಲೇಶ್ವರ ಸ್ವಾಮಿ ದೇವಸ್ಥಾನ ಜೀರ್ಣೊದಾರ ಮರು ಕಳಸ ಸ್ಥಾಪನೆ ಮಾಡುತ್ತಿರುವುದು ನಮ್ಮೆಲ್ಲರ ಸೌಭಾಗ್ಯ . ನಮ್ಮ ಆಲಗೂಮೂಲೆ ಹಾಗೂ ಸುತ್ತಮುತ್ತಲ ಗ್ರಾಮದ ವೀರಶೈವ ಸಮಾಜದ ಮುಖಂಡರು ದಾನಿಗಳು ನಮ್ಮ ಎಲ್ಲಾ ವೀರಶೈವ ಮಹಾಸಭಾ ಅಧ್ಯಕ್ಷರು ಪದಾಧಿಕಾರಿಗಳು ಸದಸ್ಯರುಗಳಿಗೆ ಅಭಿನಂದನೆಗಳು ತಿಳಿಸುತ್ತೇನೆ ಎಂದರು.
ಕಾರ್ಯಕ್ರಮಕ್ಕೂ ಮೊದಲು ಆಲಗೂಮೂಲೆ ಗ್ರಾಮದ ವೀರಶೈವ ಹೆಣ್ಣು ಮಕ್ಕಳು ವಾದ್ಯ ಮೇಳಗಳ ಜೊತೆ ಬಂಡಳ್ಳಿ ದೊಡ್ಡಮಟ್ಟದ ಶ್ರೀ ಶ್ರೀ ಫಲಹಾರ ಪ್ರಭುದೇವಸ್ವಾಮಿಗಳು ಹಾಗೂ ವಿವಿಧ ಮಠಾಧಿಪತಿಗಳು ವೀರಶೈವದ ಎಲ್ಲಾ ಮುಖಂಡರುಗಳು ಕಳಸ ಪ್ರತಿಷ್ಠಾಪನೆಗೆ ಸಹಕರಿಸಿದರು. ಸಹಸ್ರಾರು ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಮಣಗಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸೋಮಶೇಖರ್. ಹನೂರು ತಾಲೂಕು ವೀರಶೈವ ಮಹಾಸಭಾಧ್ಯಕ್ಷರಾದ ಸೋಮಶೇಖರ್ , ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಅಧ್ಯಕ್ಷ ನಂದೀಶ್, ವಿವಿಧ ಗ್ರಾಮದ ಮಠಾಧಿಪತಿಗಳು ವಿವಿಧ ಗ್ರಾಮದ ವೀರಶೈವ ಮುಖಂಡರುಗಳು ಹಾಗೂ ಜನಪ್ರತಿನಿಧಿಗಳು ಸಂಘ ಸಂಸ್ಥೆಯವರು ಇನ್ನಿತರು ಹಾಜರಿದ್ದರು.