ಸುಜ್ಞಾನನಿಧಿ ಶಿಷ್ಯವೇತನ ಮಂಜೂರಾತಿ ಪತ್ರ ವಿತರಣೆ
ಕೋಲಾರ,ಆ.೧೩- ವ್ಯಕ್ತಿಯ ಬದುಕಿನಲ್ಲಿ ಸಂಸ್ಕಾರ ಎನ್ನುವುದು ಡಾಕ್ಯುಮೆಂಟ್ ಮತ್ತು ನೈತಿಕತೆ ಎಂಬುದು ಶೂರಿಟಿ. ಇವೆರಡು ಡಾಕ್ಯುಮೆಂಟ್ ಮತ್ತು ಶ್ಯೂರಿಟಿಯನ್ನು ರೂಡಿಸಿಕೊಂಡಿದ್ದರೆ ಮಾತ್ರ ಬದುಕಿನಲ್ಲಿ ಸಾರ್ಥಕತೆ ಸಿಗುತ್ತದ ಎಂದು ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಹೇಳಿದರು.
ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ಹಮ್ಮಿಕೊಂಡಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ಕೋಲಾರ ಮತ್ತು ವೇಮಗಲ್ ಯೋಜನಾ ಕಚೇರಿ ವ್ಯಾಪ್ತಿಯ ಒಟ್ಟು ೧೩೫ ವೃತಿಪರ ಕೋರ್ಸ್ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ೨೦೨೩-೨೪ನೇ ಸಾಲಿನಲ್ಲಿ ಮಂಜೂರಾದ ಸುಜ್ಞಾನನಿಧಿ ಶಿಷ್ಯವೇತನ ಮಂಜೂರಾತಿ ಪತ್ರ ವಿತರಿಸಿ ಮಾತನಾಡಿದರು.
ವ್ಯಕ್ತಿಯು ಎಷ್ಟೇ ಉನ್ನತ ಸ್ಥಾನಕ್ಕೇರಿದ್ದರೂ ತನ್ನ ಸಾಧನೆಗೆ ಮೆಟ್ಟಿಲುಗಳಾಗಿದ್ದ ತಂದೆ ತಾಯಿಯ ಕಣ್ಣಲಿ ಕಣ್ಣೀರು ಬಾರದಂತೆ ಎಚ್ಚರಿಕೆ ವಹಿಸಿ ಸಂತಸದ ಆನಂದ ಬಾಷ್ಪ ಹುದುರುವಂತೆ ಮಾಡಿದರೆ ಮಾತ್ರ ಬದುಕಿಗೊಂದು ಸಾಧನೆ ಮತ್ತು ಅರ್ಥ ಬರುತ್ತದೆ ಇದನ್ನು ಕೊನೆಯ ಉಸಿರಿರುವ ತನಕ ನೆನಪಿನನಲ್ಲಿ ಇಟ್ಟುಕೊಂಡು ಮಕ್ಕಳು ಜೀವನ ಸಾಗಿಸಬೇಕು. ಎಂದು ಸಲಗೆ ಮಾಡಿದರು.
ಮೊಬೈಲ್ ಎಂಬುದೇ ಸಂಸ್ಕಾರ ಅದನ್ನು ಅನುಸರಿಸುವುದೇ ಬದುಕು ಎಂಬ ಭ್ರಮೆಯಿಂದ ವಿದ್ಯಾರ್ಥಿಗಳು ಹೊರಬಂದು ಶೈಕ್ಷಣಿಕ ಸಾಧನೆಯತ್ತ ತಮ್ಮನ್ನು ತಾವು ರೂಢಿಸಿಕೊಳ್ಳಬೇಕು ಎಂದು ಕಿವಿ ಮತು ಹೇಳಿದರು.
ಕೋಲಾರ ಜಿಲ್ಲಾ ನಿರ್ದೇಶಕ ಪದ್ಮಯ್ಯ ಸಿ.ಎಚ್ ಮಾತನಾಡಿ, ಧರ್ಮಸ್ಥಳ ಸಂಸ್ಥೆ ಪೂಜ್ಯರ ಮಾರ್ಗದರ್ಶನದಲ್ಲಿ ನೂರಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದು, ಬಹಳ ಮುಖ್ಯವಾಗಿ ಮನುಷ್ಯನಿಗೆ ಬೇಕಾಗಿದೆಎಂದರು.
ಕೋಲಾರ ಜಿಲ್ಲೆಯ ಅಂಜುಮನ್ ಇಸ್ಲಾಮಿಯಾ ಅಧ್ಯಕ್ಷ ಜಮೀರ್ ಅಹಮದ್, ಧರ್ಮಸ್ಥಳ ಸಂಸ್ಥೆ ಸದಸ್ಯರಿಗೆ ಕೇವಲ ಆರ್ಥಿಕ ಸಹಕಾರ ನೀಡುವುದು ಮಾತ್ರವಲ್ಲದೇ ವ್ಯವಹಾರ, ಶಿಸ್ತು, ಸಹಕಾರ, ನಿರ್ವಹಣೆಗೆ ಹಾಗೂ ಸಂಸ್ಕಾರಯುತ ಜೀವನ ಮೌಲ್ಯಗಳನ್ನು ಕಲಿಸಿಕೊಡುತ್ತಿದ್ದು, ಸಂಸ್ಥೆಯ ಹತ್ತು ಹಲವಾರು ಕಾರ್ಯಕ್ರಮಗಳು ಸಮಾಜದ ದುರ್ಬಲ ವರ್ಗದವರಿಗೆ ಆಶಾಕಿರಣವಾಗಿದೆ ಎಂದರು.
ಕೋಲಾರ ಶಾಂತಿ ಸೌಹಾರ್ಧ ಸಮಿತಿ ಅಧ್ಯಕ್ಷ ಪಂಡಿತ್ ಮುನಿವೆಂಕಟಪ್ಪ ಮಾತನಾಡುತ್ತಾ, ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾಗಿರದೆ ಎಲ್ಲಾ ಧರ್ಮದವರಿಗೂ ಕೂಡ ತನ್ನದೇ ಆದಂತ ಕಾರ್ಯಕ್ರಮಗಳನ್ನು ಸೌಲಭ್ಯಗಳನ್ನು ವಿಸ್ತರಿಸಿರುವುದು ಶ್ಲಾಘನೀಯ ಕೋಲಾರ ಜಿಲ್ಲೆಗೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ೧೦ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ತಳ ಮಟ್ಟದ ಎಲ್ಲಾ ವರ್ಗದ ಜನಗಳಿಗೆ ಸೌಲಭ್ಯ ವಂಚಿತರಿಗೆ ಅವರ ಏಳಿಗೆಗೆ ಶ್ರಮಿಸುತ್ತಿದ್ದು, ಕೋಲಾರ ಜಿಲ್ಲೆಗೆ ವರದಾನವಾಗಿ ಮೂಡಿ ಬಂದಿದೆ ಎಂದು ತಿಳಿಸಿದರು.
ಜನಜಾಗೃತಿ ವೇದಿಕೆ ಉಪಾಧ್ಯಕ್ಷ ವೆಂಕಟೇಶ್ ಟಮಕ, ಜನಜಾಗೃತಿ ವೇದಿಕೆ ಸದಸ್ಯ ನಂಜುಂಡಯ್ಯ ಶೆಟ್ಟಿ, ಕೋಲಾರ ತಾಲ್ಲೂಕು ಯೋಜನಾಧಿಕಾರಿ ಸಿದ್ದಗಂಗಯ್ಯ ಟಿ.ಎಸ್ ಮತ್ತು ವೇಮಗಲ್ ವ್ಯಾಪ್ತಿಯ ಯೋಜನಾಧಿಕಾರಿ ಸಂತೋಷ್ ತಾಲೂಕಿನ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸಿತರಿದ್ದರು.