ಬಾಂಗ್ಲಾ: ಹಿಂದುಗಳ ಮೇಲೆ ದೌರ್ಜನ್ಯ ಖಂಡನೆ
ಕೋಲಾರ,ಆ,೧೩-ಬಾಂಗ್ಲ ದೇಶದಲ್ಲಿರುವ ಹಿಂದುಗಳ ಸುರಕ್ಷಣೆಗೆ ಕ್ರಮ ಕೈಗೊಳ್ಳಲು ಒತ್ತಾಯಿಸಿ ಹಿಂದು ಹಿತರಕ್ಷಣೆ ವೇದಿಕೆ ವತಿಯಿಂದ ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಘೋಷಣೆಗಳನ್ನು ಕೊಗುವ ಮೂಲಕ ಭಾರತ ಸರ್ಕಾರವು ವಿಶ್ವಸಂಸ್ಥೆ ಮೇಲೆ ಒತ್ತಡ ಹೇರ ಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿತು,
ನಗರದ ಪತ್ರಕರ್ತರ ಭವನದಲ್ಲಿ ಇದಕ್ಕೂ ಮುನ್ನ ಜಿಲ್ಲಾ ಹಿಂದು ಹಿತರಕ್ಷಣೆ ವೇದಿಕೆ ವತಿಯಿಂದ ಸುದ್ದಿಗೋಷ್ಠಿ ಆಯೋಜಿಸಿದ್ದು ವೇದಿಕೆ ಸಂಚಾಲಕ ಹಾಗೂ ನಿವೃತ್ತ ಗೃಹ ರಕ್ಷಕದಳದ ಕಮಾಂಡೆಂಟ್ ಮರಿಯಪ್ಪ ಅವರು ಮಾತನಾಡಿ ಬಾಂಗ್ಲದೇಶದಲ್ಲಿ ಹಿಂದುಗಳು ತೀವ್ರ ಹಿಂಸಾಚಾರದಿಂದ ಬಳಲುತ್ತಿದ್ದಾರೆ. ಬಾಂಗ್ಲದ ಚುನಾಯಿತ ಪ್ರಧಾನಿ ರಾಜೀನಾಮೆ ನೀಡಿ ದೇಶವನ್ನು ತೊರೆದ ನಂತರ ಕಾನೂನು ಸುವ್ಯವಸ್ಥೆಗಳು ಸಂಪೂರ್ಣವಾಗಿ ನಿಷ್ಕ್ರಿಯ ಗೊಂಡಿದೆ. ತೀವ್ರಗಾಮಿ ಜಿಹಾದಿ ಶಕ್ತಿಗಳು ಹಿಂದೂ ಸಮುದಾಯಗಳ ಮೇಲೆ ದೊಡ್ಡ ಪ್ರಮಾಣದ ದಾಳಿ ಮಾಡುವ ಮೂಲಕ ಮಾನವೀಯತೆ ಇಲ್ಲದೆ ಶೋಷಣೆ ಮಾಡುತ್ತಿದ್ದರೂ ಕೇಳುವವರೂ ಇಲ್ಲದಂತಾಗಿರುವುದು ಖಂಡನೀಯ ಎಂದರು.
ಕಳೆದ ೧೯೭೧ರಲ್ಲಿ ಬಾಂಗ್ಲದೇಶವನ್ನು ಪಾಕಿಸ್ತಾನದಿಂದ ವಿಮುಕ್ತಗೊಳಿಸಲು ಯುಧ್ದ ಮಾಡಿ ಸ್ವಾತಂತ್ರ್ಯ ತಂದು ಕೊಡಲು ತ್ಯಾಗ ಬಲಿದಾನ ಮಾಡಿದ ಭಾರತೀಯ ಹಿಂದುಗಳ ಮೇಲೆ ಕನಿಷ್ಟ ಋಣದ ಕಾಳಜಿಯು ಇಲ್ಲದೆ ಅಮಾನವೀಯತೆ ತೋರುತ್ತಿದ್ದು ಹಿಂದು ಸಮುದಾಯ, ಹಿಂದುಗಳ ಧಾರ್ಮಿಕ ಕೇಂದ್ರಗಳ ಮೇಲೆ ದಾಳಿ ಮಾಡಿ ಧ್ವಂಸ ಮಾಡುತ್ತಿದೆ. ಹಿಂದುಗಳ ವ್ಯಾಪಾರ ಸಂಸ್ಥೆಗಳನ್ನು ಹಿಂದುಗಳ ಮನೆಗಳನ್ನು ಗುರಿಯಾಗಿಸಿ ಕೊಂಡು ನಾಶ ಮಾಡುತ್ತಿದೆ. ಹಿಂದುಗಳನ್ನು ಕ್ರೋರವಾಗಿ ಹಿಂಸೆ ಮೂಲಕ ಅಲ್ಪಸಂಖ್ಯಾತ ಹಿಂದುಗಳ ಮೇಲೆ ಭಃಯೋತ್ಪಾದಕರ ಮಾದರಿಯಲ್ಲಿ ದೌರ್ಜನ್ಯವೇಸಗುತ್ತಿದೆ ಎಂದು ಕಿಡಿಕಾರಿದರು,
ಈ ಹಿಂದೆ ಪಾಕಿಸ್ತಾನಿಗಳು ಬಾಂಗ್ಲದೇಶದವರಿಗೆ ನೀಡುತ್ತಿದ್ದ ಹಿಂಸಾಚಾರವನ್ನು ಬಾಂಗ್ಲೆದೇಶದವರು ಭಾರತೀಯ ಹಿಂದುಗಳ ಮೇಲೆ ನಡೆಸುತ್ತಿರುವುದು ಖಂಡನೀಯ, ಅಂದು ಭಾರತದೇಶವು ಪಾಕಿಸ್ಥಾನದ ಮೇಲೆ ಯುದ್ದ ಮಾಡಿ ಸ್ವಾತಂತ್ರ ಕೊಡಿಸದಿದ್ದರೆ ಅವರು ದೌರ್ಜನ್ಯಗಳಿಗೆ ತುತ್ತಾಗುತ್ತಿದ್ದನ್ನು ನೆನಪಿಸಿ ಕೊಂಡು ಭಾರತೀಯ ಹಿಂದುಗಳಿಗೆ ಕೃತಜ್ಞಾನತೆಗಳನ್ನು ಸಲ್ಲಿಸಿ ಗೌರವದಿಂದ ಕಾಣದೆ ಹಿಂಸಚಾರ ನೀಡುತ್ತಿರುವ ವಿರುದ್ದ ಭಾರತ ಸರ್ಕಾರವು ಬಾಂಗ್ಲೆದೇಶಕ್ಕೆ ಎಚ್ಚರಿಕೆಯ ಸಂದೇಶವನ್ನು ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ವಿಶ್ವಸಂಸ್ಥೆಯು ಬಾಂಗ್ಲದೇಶವು ಭಾರತೀಯ ಹಿಂದುಗಳ ಮೇಲೆ ದಾಳಿ ಮಾಡಿ ದೌರ್ಜನ್ಯ ನಡೆಸುತ್ತಿರುವ ಮಧ್ಯೆ ಪ್ರವೇಶಿಸಿ ಎಚ್ಚರಿಕೆ ನೀಡ ಬೇಕು, ಮಾನವ ಹಕ್ಕುಗಳ ಸಂಸ್ಥೆಯು ಇದರ ಜೊತೆಗೊಡಿ ಬಾಂಗ್ಲಾ ದೇಶಕ್ಕೆ ಮಾನವಹಕ್ಕುಗಳ ಉಲ್ಲಂಘನೆ ವಿರುದ್ದ ಕ್ರಮ ಕೈಗೊಳ್ಳ ಬೇಕು ಎಂದು ಆಗ್ರಹಿ
ಸುದ್ದಿಗೋಷ್ಠಿಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಹೊವಳ್ಳಿ ಪ್ರಕಾಶ್, ವೆಂಕಟಚಲಪತಿ, ಹಾರೋಹಳ್ಳಿ ವೆಂಕಟೇಶ್, ನರಸಿಂಹಯ್ಯ, ಮಾಗೇರಿ ನಾರಾಯಣಸ್ವಾಮಿ, ತಿಮ್ಮರಾಯಪ್ಪ, ಬಾಲಾಜಿ, ಭಜರಂಗದಳ ಬಾಬು, ಸಾ.ಮ.ಅನಿಲ್ ಬಾಬು, ಶ್ರೀನಿವಾಸಪ್ಪ ಉಪಸ್ಥಿತರಿದ್ದರು.