ಕಪ್ಪು ಪಟ್ಟಿ ಧರಿಸಿ ಕರಾಳ ಸ್ವಾತಂತ್ರ್ಯ ದಿನಾಚರಣೆ
ಕೋಲಾರ,ಆ,೧೩- ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ವತಂತ್ರ ಇಲ್ಲದೆ ಶಿಕ್ಷಣ ಸಂಸ್ಥೆಗಳು ಉಸಿರುಗಟ್ಟಿಸುವ ವಾತವರಣದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಮುಂದುವರೆಸುವುದು ಕಷ್ಟ ಸಾಧ್ಯವಾಗಿರುವ ಹಿನ್ನಲೆಯಲ್ಲಿ ಕೋಲಾರ ಅಸೋಸಿಯೇಟೆಡ್ ಮ್ಯಾನೇಜ್‌ಮೆಂಟ್ ಆಫ್ ಸ್ಕೊಲ್ಸ್ (ಕ್ಯಾಮ್ಸ್) ಶಿಕ್ಷಣ ಸಂಘಟನೆಯು ಆ,೧೫ರಂದು ಕಪ್ಪು ಪಟ್ಟಿಯನ್ನು ಧರಿಸಿ ಕರಾಳ ಸ್ವಾತಂತ್ರ್ಯ ದಿನಾಚರಣಿಯನ್ನು ಆಚರಿಸಲು ನಿರ್ಧರಿಸಲಾಗಿದೆ ಎಂದು ಕ್ಯಾಮ್ಸ್ ಅಧ್ಯಕ್ಷ ಎ.ಸದಾನಂದ ತಿಳಿಸಿದರು,
ನಗರದ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಕಳೆದ ೫ ವರ್ಷಗಳಿಂದ ಶಿಕ್ಷಣ ಇಲಾಖೆಯು ದಿನಕ್ಕೊಂದು ಆದೇಶಗಳನ್ನು ಜಾರಿ ಮಾಡುವ ಮೂಲಕ ನ್ಯಾಯಾಲಯದ ತೀರ್ಪುಗಳನ್ನು ಕಡೆಗಣಿಸಿ ಹೊಸ ಶಿಕ್ಷಣ ಸಂಸ್ಥೆಗಳಿಗೆ ಅಳವಡಿಸುವ ನಿಯಮಗಳನ್ನು ಹಳೆಯ ಶಿಕ್ಷಣ ಸಂಸ್ಥೆಗಳೆಗೆ ಹೇರುತ್ತಿದೆ. ಇದರ ಜೊತೆಗೆ ಅಗ್ನಿ ಸುರಕ್ಷತಾ ಇಲಾಖೆ, ಲೋಕೋಪಯೋಗಿ ಇಲಾಖೆ, ಕಂದಾಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆ, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಇದರ ಜೊತೆಗೊಡಿ ದಾಖಲೆಗಳನ್ನು ನೀಡ ಬೇಕೆಂದು ಕಿರುಕುಳ, ದೌರ್ಜನ್ಯವೇಸಗುವ ಮೂಲಕ ಭಾರಿ ಭ್ರಷ್ಟಚಾರಗಳಿಗೆ ಎಡೆಮಾಡಿ ಕೊಟ್ಟಿದೆ ಎಂದು ಆರೋಪಿಸಿದರು,
ಈ ಸಂಬಂಧವಾಗಿ ಶಿಕ್ಷಣ ಇಲಾಖೆ ಸಚಿವರಿಗೆ, ರಾಜ್ಯದ ಮುಖ್ಯ ಮಂತ್ರಿಗಳಿಗೆ, ರಾಷ್ಟ್ರಪತಿಗಳಿಗೆ, ಪ್ರಧಾನಿಗಳಿಗೆ ಮನವಿ ಮಾಡಿ ಕೊಂಡರೂ ಯಾವೂದೇ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ನ್ಯಾಯಾಲಯದ ಮೊರೆ ಹೋಗುವುದು ಅನಿವಾರ್ಯವಾಗಿತ್ತು. ನ್ಯಾಯಾಲಯಕ್ಕೆ ವಿಚಾರಣೆಯಲ್ಲಿ ಸರ್ಕಾರದ ಆದೇಶಗಳನ್ನು ಸುತ್ತೋಲೆ ಗಳ ದಾಖಲೆಗಳನ್ನು ಸಾಕ್ಷಿಕರಿಸಿ ಸರ್ಕಾರಿ ಶಾಲೆಗಳಿಗೆ ಇಲ್ಲದ ನಿಯಮಗಳು ಖಾಸಗಿ ಶಾಲೆಗಳಿಗೆ ಏಕೆ ? ಸರ್ಕಾರಿ ಶಾಲೆಗಳಿಗೆ ಒಂದು ನಿಯಮ, ಖಾಸಗಿ ಶಾಲೆಗಳಿಗೊಂದು ನಿಯಮದ ತಾರತಮ್ಯಗಳನ್ನು ನ್ಯಾಯಾಲಯಕ್ಕೆ ವಿವರಿಸಿದಾಗ ನ್ಯಾಯಾಲಯವು ಸರ್ಕಾರದ ಕೆಲವೊಂದು ಅದೇಶಗಳನ್ನು ರದ್ದುಗೊಳಿಸಿ, ಛೇ ಮಾರೆ ಹಾಕಿ ನಿಯಮಗಳನ್ನು ಪರಿಷ್ಕರಿಸಿ ಹೊಸದಾಗಿ ಆದೇಶವನ್ನು ಜಾರಿ ಮಾಡಿದೆ ಎಂದು ಹೇಳಿದರು.
ಅದರೆ ಸರ್ಕಾರವು ನ್ಯಾಯಾಲಯದ ಅದೇಶಗಳನ್ನು ಧಿಕ್ಕರಿಸುವ ಮೂಲಕ ಉಲ್ಲಂಘಿಸುತ್ತಿದೆ. ಖಾಸಗಿ ಶಾಲೆಗಳ ಮೇಲೆ ದೌರ್ಜನ್ಯವನ್ನು ಮುಂದುವರೆಸುತ್ತಿದೆ. ಇದನ್ನು ವಿರೋಧಿಸಿ ಸರ್ಕಾರದ ಗಮನ ಸೆಳೆಯಲು ಸ್ವಾತಂತ್ರ್ಯ ದಿನಾಚರಣೆಗೆ ಯಾವೂದೇ ಅಡಚಣೆಯಾಗದಂತೆ, ಸ್ವಾತಂತ್ರ್ಯ ದಿನಾಚರಣೆಗೆ ಧಕ್ಕೆಯಾಗದಂತೆ ಕಪ್ಪು ಪಟ್ಟಿ ಧರಿಸುವ ಮೂಲಕ ಪ್ರತಿಭಟನೆಯ ಸಂಕೇತವನ್ನು ಪ್ರದರ್ಶಿಸಿ ಸಚಿವರ ಹಾಗೂ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರವನ್ನು ನೀಡಲಾಗುವುದು ಎಂದು ತಿಳಿಸಿದರು,
ಪ್ರಶ್ನೆಯೊಂದಕ್ಕೆ ಶಿಕ್ಷಣ ಸಂಸ್ಥೆಗಳ ಪರವಾನಗಿಯನ್ನು ೫ ವರ್ಷಕ್ಕೊಮ್ಮೆ ಇರುವುದನ್ನು ೩ ವರ್ಷಕ್ಕೆ ಬದಲಾಯಿಸಿತ್ತು ಈಗಾ ಪ್ರತಿ ವರ್ಷವು ನವೀಕರಣ ಮಾಡ ಬೇಕೆಂದು ಅದೇಶಿಸುವ ಮೂಲಕ ಭ್ರಷ್ಟಚಾರಕ್ಕೆ ಎಡೆ ಮಾಡಿ ಕೊಟ್ಟಿದೆ. ಅಗ್ನಿ ಸಂರಕ್ಷಣೆಗಾಗಿ ಶಿಕ್ಷಣ ಸಂಸ್ಥೆಯ ಸುತ್ತಲು ವಾಹನಕ್ಕೆ ದಾರಿ ಇರಬೇಕೆಂಬ ಅದೇಶದಲ್ಲಿ ಲೊಟಿ ಮಾಡಲು ಮುಂದಾಗಿದೆ. ಲೋಕೋಪಯೋಗಿ ಇಲಾಖೆಯು ಕಟ್ಟಡಗಳ ಆಯುಸ್ಸು ಧೃಡಿಕರಣ ಪ್ರಮಾಣ ಪತ್ರ, ನಿರಾಕ್ಷಪಣೆ ಪ್ರಮಾಣ ಪತ್ರ ನೀಡಲು ಶಿಕ್ಷಣ ಸಂಸ್ಥೆಗಳಿಂದ ದೋಚುತ್ತಿವೆ. ಇದೇ ಮಹಿಳಾ ಮತ್ತು ಮಕ್ಕಳ ಇಲಾಖೆ ಹಾಗೂ ಪೊಲೀಸ್ ಇಲಾಖೆಗಳು ನಿಯಮಗಳನ್ನು ಮುಂದು ಮಾಡಿ ಶಿಕ್ಷಣ ಸಂಸ್ಥೆಯಿಂದ ದೋಚುವ ಮೂಲಕ ಕಿರುಕುಳ ನೀಡುತ್ತಿದೆ ಎಂದು ವಿವರಿಸಿದರು,
ನಮ್ಮ ಸಂಸ್ಥೆಗಳಲ್ಲಿ ಖರ್ಚು ವೆಚ್ಚಗಳಿಗೆ ಅನುಸಾರವಾಗಿ ೨೫ ರಿಂದ ೩೦ ಸಾವಿರ ರೂ ಬಜೆಟ್ ಹೊಂದಿದ್ದು ಅತಿ ಕಡಿಮೆ ಶುಲ್ಕದಲ್ಲಿ ಮೂಲ ಭೂತ ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ಕಲ್ಪಿಸಿ ಗುಣ ಮಟ್ಟದ ಶಿಕ್ಷಣವನ್ನು ನೀಡುತ್ತಿದೆ ಶುಲ್ಕವನ್ನು ಕಂತುಗಳ ರೂಪದಲ್ಲಿ ಪಡೆಯಲಾಗುತ್ತಿದೆ. ೨೦೧೭ಕ್ಕೆ ಪೂರ್ವದ ಶಾಲೆಗಳಿಗೆ ಹೊಸ ಕಾಯ್ದೆಗಳು ಅನ್ವಯವಾಗದಂತೆ ನ್ಯಾಯಾಲಯವು ರಿಯಾಯಿತಿ ನೀಡಲಾಗಿದ್ದರೂ ೨ ವರ್ಷ ತಟಸ್ಥವಾಗಿದ್ದು ಈಗಾ ಶಿಕ್ಷಣ ಇಲಾಖೆ ನ್ಯಾಯಾಲಯದ ಸೊಚನೆಗಳನ್ನು ಉಲ್ಲಂಘಿಸಿ ಹಳೆಯ ಶಾಲೆಗಳಿಗೂ ಹೊಸ ನಿಯಮಗಳ ಪಾಲನೆ ಮಾಡ ಬೇಕೆಂದು ಕಿರುಕುಳ ನೀಡುವ ಲೂಟಿ ಮಾಡಲು ಮುಂದಾಗಿದೆ ಎಂದು ದೂರಿದರು.
ಪ್ರಶ್ನೆಯೊಂದಕ್ಕೆ ಖಾಸಗಿ ಶಿಕ್ಷಣ ಸಂಸ್ಥೆಗಳು ಜಿಲ್ಲೆಯಲ್ಲಿ ಸುಮಾರು ೬೫೦ಕ್ಕೂ ಹೆಚ್ಚು ಇದೆ. ವಿವಿಧ ಸಂಘಟನೆಗಳನ್ನು ರಚಿಸಿ ಕೊಂಡಿದೆ. ಸರ್ಕಾರವು ನ್ಯಾಯಾಲಯದ ಆದೇಶ, ಸೂಚನೆಗಳನ್ನು ಉಲ್ಲಂಘಿಸಿ ಕಿರುಕುಳವನ್ನು ಮುಂದುವರೆಸಿದರೆ ಮುಂದಿನ ದಿನಗಳಲ್ಲಿ ಎಲ್ಲಾ ಸಂಘಟನೆಗಳು ಒಂದೆ ವೇದಿಕೆಯಲ್ಲಿ ಉಗ್ರಸ್ವರೂಪದ ಹೋರಾಟವನ್ನು ಹಮ್ಮಿ ಕೊಳ್ಳಲಾಗುವುದು ಎಂದು ಎಚ್ಚರಿಸಿದರು,
ಖಾಸಗಿ ಶಾಲೆಗಳಲ್ಲಿ ಕುಡಿಯುವ ನೀರು, ಶೌಚಾಲಯ, ಗ್ರಂಥಾಲಯ, ಪ್ರಯೋಗಾಲಯ,ಸಾರಿಗೆ ವಾಹನ, ಆಟದ ವೈದಾನ, ಕಂಪ್ಯೋಟರ್ ವ್ಯವಸ್ಥೆ, ಊಟದ ಡ್ಯಾಮೀಟರಿ ಹಾಲ್. ಸಭಾಂಗಣ ಮುಂತಾದವುಗಳನ್ನು ಹೊಂದಿದೆ ಅದರೆ ಸರ್ಕಾರಿ ಶಾಲೆಗಳಲ್ಲಿ ಕನಿಷ್ಠ ಸೌಲಭ್ಯಗಳು ಇಲ್ಲದಿದ್ದರೂ ಪ್ರಶ್ನಿಸುವುದಿಲ್ಲ ಕೇವಲ ಒಂದೆರಡು ಸೌಲಭ್ಯಗಳ ಕೊರತೆ ಇರುವುದನ್ನು ಮುಂದೆ ಮಾಡಿ ಕಿರುಕುಳ ನೀಡುತ್ತಾರೆ ಎಂದು ಅಸಮಾಧಾನ ಪಡೆಸಿದರು.