ಸೆಂಟ್ ಮೇರಿಸ್ ಕಾಲೇಜಿನ ವಿದ್ಯಾರ್ಥಿಗಳ ಕ್ರೀಡಾ ಸಾಧನೆ
ಸಂಜೆವಾಣಿ ವಾರ್ತೆ
ಹನೂರು ಆ 13 :- ಪಟ್ಟಣದ ಶ್ರೀ ಮಹದೇಶ್ವರ ಕ್ರೀಡಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಹನೂರು ತಾಲೂಕಿನ ಮಾರ್ಟಳ್ಳಿಯ ಸೆಂಟ್ ಮೇರಿಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅನೇಕ ಸ್ಪರ್ಧೆಗಳಲ್ಲಿ ವಿಜೇತರಾಗಿ ಚಾಂಪಿಯನ್ ಆಗಿರುತ್ತಾರೆ.
ಬಾಲಕಿಯರ ವಿಭಾಗದಲ್ಲಿ ಆರೋಗ್ಯ ಅರ್ಚನ ಉದ್ದ ಜಿಗಿತ,1500 ಮೀ ಓಟ ಮತ್ತು3000 ಮೀ ಓಟದಲ್ಲಿ ಪ್ರಥಮ ಸ್ಥಾನ ಗುಡ್ಡಗಾಡು ಓಟ ತೃತೀಯ ಸ್ಥಾನ ಪಡೆದು ವೈಯಕ್ತಿಕ ಚಾಂಪಿಯನ್ ಆಗಿರುತ್ತಾರೆ.
ಸಾರೋನಿ ರೋಜ ಗುಂಡು ಎಸೆತ ಮತ್ತು ಜಾವಲಿನ್ ಎಸೆತ ಪ್ರಥಮ ಸ್ಥಾನ ಡಿಸ್ಕಸ್ ಎಸೆತದಲ್ಲಿ ತೃತೀಯ ಸ್ಥಾನ. ಪ್ರಮೀಳ ಡಿಸ್ಕಿಸ್ ಎಸೆತ ದ್ವಿತೀಯ ಸ್ಥಾನ. ಗೌರಿ ಸೆಲ್ವಿ ಜಾವಲಿನ್ ಎಸೆತ ಮತ್ತು ಹ್ಯಾಮರ್ ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಮಾದೇವಿ 100 ಮೀ ಓಟ ,200 ಮೀ ಓಟ ಪ್ರಥಮ ಸ್ಥಾನ ಗುಡ್ಡಗಾಡು ಓಟ ದ್ವಿತೀಯ. ಸಿಂಧು 3000 ಮೀ ಓಟ ದ್ವಿತೀಯ ಗುಡ್ಡಗಾಡು ಓಟ 4ನೇ ಸ್ಥಾನ. ಸಂಗೀತ ಗುಡ್ಡಗಾಡು ಓಟ 8 ನೇ ಸ್ಥಾನ. ಜಾಸ್ವವಿನ್ ತ್ರಿವಿಧ ಜಿಗಿತ ಮತ್ತು ಉದ್ದ ಜಿಗಿತ ತೃತೀಯ ಸ್ಥಾನ.ಮಹೇಶ್ವರಿ ಉದ್ದ ಜಿಗಿತ ದ್ವಿತೀಯ.ಶ್ವೇತ 800 ಮೀ ಓಟ ಮತ್ತು ಎತ್ತರ ಜಿಗಿತ ಪ್ರಥಮ 200 ಮೀ ಓಟ ದ್ವಿತಿಯ.ಅನೀಶ 400 ಮೀ ಓಟ ತೃತೀಯ.ಜನೀಶ ಹ್ಯಾಮರ್ ಎಸೆತ ಪ್ರಥಮ.ಬಾಲಕಿಯರ 4ಘಿ400 ಮೀ ರಿಲೆ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.
ಬಾಲಕರ ವಿಭಾಗದಲ್ಲಿ ಪೇರರಸು ಡಿಸ್ಕಸ್ ಎಸೆತ ಪ್ರಥಮ ಸ್ಥಾನ.ಎರಾನ್ ಮೆನ್ವಿನ್ ತ್ರಿವಿಧ ಜಿಗಿತ ಪ್ರಥಮ. ರಫಿನ್ ರೀಗನ್ 400 ಮೀ ಓಟ ಪ್ರಥಮ ಸ್ಥಾನ 1500 ಮೀ ಮತ್ತು ಗುಡ್ಡಗಾಡು ಓಟದಲ್ಲಿ ದ್ವಿತೀಯ. ಜಾನ್ಸನ್ ಗುಡ್ದಗಾಡು ಓಟ 6 ನೇ ಸ್ಥಾನ. ರೋಹಿತ್ ಗುಡ್ಡಗಾಡು ಓಟ 7 ನೇ ಸ್ಥಾನ. ಚಾಲ್ರ್ಸ್ ಉದ್ದ ಜಿಗಿತ ತೃತೀಯ. ಪತ್ತಿನಾಥನ್ ಎತ್ತರ ಜಿಗಿತ ಪ್ರಥಮ. ಮನೀಶ್ 3000 ಮೀ ಓಟ ದ್ವಿತೀಯ. ಕೆವಿನ್ ಹ್ಯಾಮರ್ ಎಸೆತ ತೃತೀಯ.ಶಿವ ಕುಮಾರ್ 800 ಮೀ ಓಟ ದ್ವಿತೀಯ.ಗುಂಪು ಆಟಗಳಲ್ಲಿ ಬಾಲಕರ ವಾಲಿಬಾಲ್ ಪ್ರಥಮ ಸ್ಥಾನ,ಬಾಲಕಿಯರ ಚೆಂಡು ಎಸೆತ ಪ್ರಥಮ ಬಾಲಕರ ಶಟಲ್ ಕಾಕ್ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬ್ಯಾಸ್ಕೆಟ್‍ಬಾಲ್ ಮತ್ತು ಹ್ಯಾಂಡ್‍ಬಾಲ್ ನೇರವಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆ ಹೀಗೆ ಅಧಿಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡು ಚಾಂಪಿಯನ್ ಆಗಿರುತ್ತಾರೆ. ಕಾಲೇಜಿಗೆ ಕೀರ್ತಿ ತಂದ ಕ್ರೀಡಾಪಟುಗಳನ್ನು ಶಾಲೆಯ ವ್ಯವಸ್ಥಾಪಕರಾದ ಪಾ.ಟೆನ್ನಿ ಕುರಿಯನ್,ಪ್ರಾಂಶುಪಾಲರಾದ ಫಾ ಕ್ರಿಸ್ಟೋಫರ್ ಕ್ಲಾರೆಟ್ ಹಾಗೂ ದೈಹಿಕ ಶಿಕ್ಷಕರಾದ ಆಗಸ್ಟಿನ್,ಸಹ ಶಿಕ್ಷಕ ಶಿಕ್ಷಕಿಯರು ಹಾಗೂ ಸಿಬ್ಬಂದಿಗಳು ತುಂಬು ಹೃದಯದಿಂದ ಅಭಿನಂದಿಸಿದರು.