ಅನುಮಾನಾಸ್ಪದವಾಗಿ ಯುವಕ ಸಾವು
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಆ.13: ಪಟ್ಟಣದ ಮೈಸೂರು-ಚನ್ನರಾಯಪಟ್ಟಣ ರಸ್ತೆಯಲ್ಲಿರುವ ಎಚ್‍ಡಿಎಫ್‍ಸಿ ಬ್ಯಾಂಕ್ ಪಕ್ಕದಲ್ಲಿ ಭಾನುವಾರ ರಾತ್ರಿ ಅನುಮಾನಾಸ್ಪದವಾಗಿ ಯುವಕ ಸಾವಿಗೀಡಾಗಿದ್ದು ಕೊಲೆ ಶಂಕೆ ವ್ಯಕ್ತವಾಗಿದೆ.
ತಾಲೂಕಿನ ನಂದಿಪುರ ಗ್ರಾಮದ ಮಹದೇವು ಎಂಬುವವರ ಪುತ್ರ ಪವನಕುಮಾರ್(29) ಮೃತ ಯುವಕ. ಭಾನುವಾರ ಸಂಜೆ ಬ್ಯಾಂಕ್‍ಗೆ ಭದ್ರತಾ ನೌಕರ ಬಂದಾಗ ಯುವಕ ಬೈಕ್ ಬಳಿ ಬಿದ್ದಿರುವುದು ತಿಳಿದಿದೆ. ನಂತರ ಪೆÇಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪಟ್ಟಣದ ಪೆÇಲೀಸರು ಪರಿಶೀಲಿಸಿ ಮೃತದೇಹವನ್ನು ಆಸ್ಪತ್ರೆಗೆ ಸ್ಥಳಾಂತರಿಸಿ ದರು.
ಸೋಮವಾರ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಮೃತನ ಕುಟುಂಬದವರ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು ಪೆÇಲೀಸರು ತನಿಖೆ ಕೈಗೊಂಡಿದ್ದಾರೆ.
ಭಾನುವಾರ ಬೆಳಗ್ಗೆ ಬ್ಯಾಂಕ್ ಬಳಿಗೆ ಪವನಕುಮಾರ್ ಬೈಕ್‍ನಲ್ಲಿ ಬಂದು ನಿಲ್ಲಿಸಿ ನರಳಾಡುತ್ತಾ ಅತ್ತಿತ್ತ ಓಡಾಡಿ ಕೆಲವು ಸಮಯದ ನಂತರ ಬೈಕ್ ಬಳಿ ಬಿದ್ದವನು ಮೇಲೆ ದ್ದಿಲ್ಲ. ಇದು ಬ್ಯಾಂಕ್‍ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಕೊಲೆ ಶಂಕೆ:- ಯುವಕ ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ. ಈ ಹಿಂದೆ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಜತೆ ಬೆಳೆಸಿದ್ದ, ಸ್ನೇಹ ಪ್ರೀತಿಗೆ ತಿರುಗಿತ್ತು ಎನ್ನಲಾಗುತ್ತಿದೆ.
6 ತಿಂಗಳ ಹಿಂದೆ ಯುವತಿಯನ್ನು ಬೇರೆ ಹುಡುಗನಿಗೆ ವಿವಾಹ ಮಾಡಿಕೊಡಲಾಗಿತ್ತು. ನಂತರವೂ ಇವರು ಸಂಪರ್ಕದಲ್ಲಿದ್ದದ್ದು ಗಂಡನಿಗೆ ತಿಳಿದು ಗಲಾಟೆಯಾಗಿತ್ತು ಎಂದು ತಿಳಿದುಬಂದಿದೆ ಈ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗುತ್ತಿದೆ.