ವೇತನ ಹೆಚ್ಚಳಕ್ಕೆ ಆಗ್ರಹಿಸಿ ಕಿರಿಯ ವೈದ್ಯರಿಂದ ಪ್ರತಿಭಟನೆ
ಸಂಜೆವಾಣಿ ವಾರ್ತೆ
ಚಾಮರಾಜನಗರ ಆ.13- ವೇತನ ಹೆಚ್ಚಳಕ್ಕೆ ಆಗ್ರಹಿಸಿ ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಕಿರಿಯ ವೈದ್ಯರ ಸಂಘದಿಂದ ನಗರದ ಯಡಪುರ ಸಮೀಪದಲ್ಲಿ ಇರುವ ಸಿಮ್ಸ್ ಆಸ್ಪತ್ರೆಯ ಮುಂಭಾಗದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಹಲವು ವರ್ಷಗಳಿಂದ ಸಿಮ್ಸ್‍ನಲ್ಲಿ ಪ್ರಾಮಾಣಿಕವಾಗಿ ಸೇವಾ ಮನೋಭಾವದೊಂದಿಗೆ ಕಿರಿಯ ವೈದ್ಯರಾಗಿ ಹಾಗೂ ನಿವಾಸಿ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿರುವ ನಮಗೆ ಸಕಾಲಕ್ಕೆ ಸರಿಯಾಗಿ ವೇತನವನ್ನು ನೀಡುತ್ತಿಲ್ಲ ಹಾಗೂ ವೇತನವನ್ನು ಹೆಚ್ಚಳ ಮಾಡುತ್ತಿಲ್ಲ ಇದರಿಂದಾಗಿ ತುಂಬಾ ತೊಂದರೆಯಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಡಾ. ಪವನ್ ತಿಳಿಸಿದರು.
ಕರ್ನಾಟಕ ನಿವಾಸಿ ವೈದ್ಯರ ಸಂಘದ ಪರವಾಗಿ ವೈದ್ಯರÀ ಸಮುದಾಯದ ಪರವಾಗಿ ಈಗಾಗಲೇ ರಾಜ್ಯ ಸರ್ಕಾರಕ್ಕೆ ಲಿಕಿತ ರೂಪದಲ್ಲಿ ಮನವಿ ಸಲ್ಲಿಸಲಾಗಿದೆ.
ಇದೀಗ ನಮ್ಮ ಆರ್ಥಿಕ ಬಿಕ್ಕಟ್ಟು ಹಾಗೂ ಹಲವು ಸಮಸ್ಯೆಗಳು ಸರ್ಕಾರÀಕ್ಕೆ ಮನವರಿಕೆ ಮಾಡಲು ಶಾಂತಿಯುತ ಪ್ರತಿಭಟನೆಯ ಮೂಲಕ ಸರ್ಕಾರದ ಗಮನ ಸೆಳೆಯುತ್ತಿದ್ದೇವೆ ಎಂದು ಹೇಳಿದರು.
ಸಿಮ್ಸ್ ನಿರ್ದೇಶಕರಿಗೆ ಈ ಮೂಲಕ ಮನವಿ ಮಾಡುತ್ತಿರುವುದು ಏನೆಂದರೇ, ನಾವು ಪ್ರತಿಭಟಿಸುತ್ತಿರುವ ಈ ಅವಧಿಯಲ್ಲಿ ತಮ್ಮ ಸಂಪೂರ್ಣ ಬೆಂಬಲವನ್ನು ನೀಡಬೇಕೆಂದು ತಿಳಿಸುತ್ತೇವೆ, ಯಾವುದೇ ಸಂದರ್ಭದಲ್ಲಿ ತೀರ ಅಗತ್ಯ ಸಂದರ್ಭದಲ್ಲಿ ವೈದ್ಯಕೀಯ ಸೇವೆಯನ್ನು ನೀಡುತ್ತೇನೆ ಎಂದು ಈ ಮೂಲಕ ಪ್ರತಿಭಟನಾಕಾರರು ತಿಳಿಸಿದ್ದಾರೆ
ಈ ಸಂದರ್ಭದಲ್ಲಿ ಡಾ.ಸ್ನೇಹ, ಡಾ. ನಂದಕಿಶೋರ್, ಡಾ. ತರುಣ್, ಡಾ. ದೀಪಾಮಿಶ್ರ. ಡಾ.ಚೇತನ್, ಡಾ.ಗೌತಮ್, ಡಾ.ಸಂಜು ಹಾಗೂ ಇನ್ನು ಮುಂತಾದವರು ಇದ್ದರು