ನಶಾ ಮುಕ್ತ ಭಾರತಕ್ಕೆ ಎಲ್ಲರ ಪ್ರಯತ್ನ ಅಗತ್ಯ
ಕಲಬುರಗಿ:ಆ.12:ಇಂದಿನ ಯುವ ಶಕ್ತಿ ಕಾರಣಾಂತರದಿಂದಮಾದಕ ವಸ್ತುಗಳ ಸೇವನೆಯದುಶ್ಚಟಕ್ಕೆಬಲಿಯಾಗುತ್ತಿರುವುದುತುಂಬಾ ವಿಷಾದನೀಯವಾದ ಸಂಗತಿಯಾಗಿದೆ. ಇದುಜೀವಕ್ಕೆ ಹಾನಿ ಉಂಟು ಮಾಡುವುದರಜೊತೆಗೆ, ಸಮಾಜದ ಸ್ವಾಸ್ಥ್ಯ ಹಾಳುಮಾಡುತ್ತದೆ.ಇವುಗಳ ಸೇವನೆ, ಸಾಗಣೆ, ಮಾರಾಟ ಮಾಡುವುದುಅಪರಾಧವಾಗಿದ್ದು, ಅದರ ಸೇವನೆಯಿಂದಾಗುವದುಷ್ಪರಿಣಾಮಗಳ ಬಗ್ಗೆ ನಿರಂತರವಾಗಿಜಾಗೃತಿ ಮೂಡಿಸಬೇಕು. ನಿಷೇಧಕ್ಕೆಕೇವಲ ಕಾಯ್ದೆ-ಕಾನೂಗಳ ಮೂಲಕ ಮಾತ್ರ ಸಾಧ್ಯವಾಗದೆ, ಅದಕ್ಕೆಎಲ್ಲರ ಸಹಕಾರ, ಪ್ರಯತ್ನಅಗತ್ಯವಾಗಿದೆಎಂದುಪ್ರಾಚಾರ್ಯರವೀಂದ್ರಕುಮಾರಸಿ.ಬಟಗೇರಿ ಹೇಳಿದರು.
ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪವಿರುವ ಸರ್ಕಾರಿ ಪದವಿ ಪೂರ್ವಕಾಲೇಜಿನಲ್ಲಿಎನ್.ಎಸ್.ಎಸ್‍ಘಟಕದ ವತಿಯಿಂದ ಸೋಮವಾರಏರ್ಪಡಿಸಲಾಗಿದ್ದ ‘ನಶಾ ಮುಕ್ತ ಭಾರತಆಂದೋಲನ’ ಕಾರ್ಯಕ್ರಮದಲ್ಲಿಅವರು ಮಾತನಾಡುತ್ತಿದ್ದರು.
ಎನ್.ಎಸ್.ಎಸ್‍ಅಧಿಕಾರಿಎಚ್.ಬಿ.ಪಾಟೀಲ ಮಾತನಾಡಿ, ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡುಕೊಳ್ಳುವಲ್ಲಿ ಮನುಷ್ಯ ಸದಾಎಚ್ಚರಿಕೆ ಹೊಂದಿರಬೇಕು. ಇವೆರಡರ ಮೇಲೆ ಪರಿಣಾಮ ಬೀರುವ ಅನೇಕ ಸನ್ನಿವೇಶಗಳು ಮನುಷ್ಯಜೀವನದ ಮೇಲೆ ಸಹಜ, ವಿವೇಚನಾಶೀಲನಾಗಿ ವರ್ತಿಸಿ, ಮಾದಕ ವಸ್ತುಗಳಿಂದ ತನ್ನನ್ನುತಾನು ದೂರವಿರಿಸಿಕೊಳ್ಳುವುದು ಆತನ ಪ್ರಮುಖವಾದಕರ್ತವ್ಯವಾಗಿದೆ. ಯುವಕರುಡ್ರಗ್ಸ್, ಗಾಂಜಾ, ಭಂಗಿ, ಚರಸ ಮತ್ತು ಮದ್ಯಪಾನ ಸೇವನೆಯಂತಹ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿರುವುದುಶೂಚನೀಯವಾಗಿದೆ.ಮಾದಕ ವಸ್ತು ಸೇವನೆ ಜೀವಕ್ಕೆಅಪಾಯಕಾರಿಯೆಂದು ತಿಳಿದಿದ್ದರೂ ಕೂಡಾ ಆ ಚಟಕ್ಕೆದಾಸರಾಗುತ್ತಿರುವುದುಇಂದುಯುವಜನಾಂಗಅದೋಗತಿಯತ್ತ ಸಾಗುತ್ತಿರುವುದಕ್ಕೆ ಮೂಕಸಾಕ್ಷಿಯಾಗಿದೆಎಂದು ಬೇಸರ ವ್ಯಕ್ತಪಡಿಸಿದರು.
ಇತಿಹಾಸಉಪನ್ಯಾಸಕ ಮಲ್ಲಪ್ಪರಂಜಣಗಿ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿಉಪನ್ಯಾಸಕರಾದಆಸ್ಮಾಜಬೀನ್, ಮಲ್ಲಿಕಾರ್ಜುನದೊಡ್ಡಮನಿ, ಶರಣಮ್ಮ ಭಾವಿಕಟ್ಟಿ, ನಯಿಮಾ ನಾಹಿದ್, ರೇಣುಕಾಚಿಕ್ಕಮೇಟಿ, ದ್ವಿ.ದ.ಸ ರಾಮಚಂದ್ರಚವ್ಹಾಣ, ಅತಿಥಿಉಪನ್ಯಾಸಕರಾದಉಮಾದೇವಿ ಮಾಲಿಪಾಟೀಲ, ಸುನಂದಾ, ಮಹಮ್ಮದ್‍ಅಬ್ದುಲ್ ಸಮದ್, ಪರಶುರಾಮ ಬಾಕನ್, ಸೇವಕ ಭಾಗಣ್ಣ ಹರನೂರ ಹಾಗೂ ಎನ್.ಎಸ್.ಎಸ್ ಸ್ವಯಂ ಸೇವಕರು, ವಿದ್ಯಾರ್ಥಿಗಳಿದ್ದರು.