ವಿವಿಧ ಸ್ಪರ್ಧೆಗಳಲ್ಲಿ ವಿವೇಕಾನಂದ ವಿದ್ಯಾನಿಕೇತನ ಶಾಲೆಯ ಮಕ್ಕಳ ಉತ್ತಮ ಸಾಧನೆ
ಕಲಬುರಗಿ:ಆ.12:“ಪ್ರಕೃತಿಯಿಂದ ಸಂಸ್ಕೃತಿಯೆಡೆಗೆ” ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ ತಾಲೂಕ ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ವಿವೇಕಾನಂದ ವಿದ್ಯಾನಿಕೇತನ ಶಾಲೆಯ ಮಕ್ಕಳು ಉತ್ತಮ ಸಾಧನೆ ಮಾಡಿದ್ದಾರೆ.
ಭಾರತೀಯ ಸಂಸ್ಕೃತಿ ಉತ್ಸವ -7 ಹಾಗೂ ಕೊತ್ತಲ ಸ್ವರ್ಣ ಜಯಂತಿ ಅಂಗವಾಗಿ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸೇಡಂ ಹಾಗೂ ವಿಕಾಸ ಅಕಾಡೆಮಿ ಕಲಬುರ್ಗಿ ಇವರ ಸಹಯೋಗದಲ್ಲಿ, ನಗರದ ವಿ.ಜಿ ಮಹಿಳಾ ಪದವಿ ಕಾಲೇಜಿನಲ್ಲಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ನಗರದ ವಿವೇಕಾನಂದ ವಿದ್ಯಾ ನಿಕೇತನ ಶಾಲೆಯ ಮಕ್ಕಳು ಒಟ್ಟು 12 ಸ್ಪರ್ಧೆಗಳಲ್ಲಿ ಭಾಗವಹಿಸಿ 7 ಸ್ಪರ್ಧೆಗಳಲ್ಲಿ ಬಹುಮಾನ ಪಡೆದು ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ವಿಜೇತರಿಗೆ ನಗದು ಬಹುಮಾನ ಹಾಗೂ ಪಾರಿತೋಷಕ ನೀಡಿ ಸನ್ಮಾನಿಸಲಾಯಿತು. .
ಪ್ರಥಮ ಸ್ಥಾನ : ಸೂರ್ಯ ನಮಸ್ಕಾರ ಸ್ಪರ್ಧೆಯಲ್ಲಿ ಅಜಯ್ ದತ್ತಾತ್ರೇಯ, ಸಾಮಾನ್ಯ ಜ್ಞಾನ ರಸಪ್ರಶ್ನೆಯಲ್ಲಿ ಶ್ರೇಯಸ್ ಜಿ.ವಿ ಮತ್ತು ಅಭಿಷೇಕ್ ರಮೇಶ್.
ದ್ವಿತೀಯ ಸ್ಥಾನ : ಭಾಷಣ ಸ್ಪರ್ಧೆಯಲ್ಲಿ ಸಿಂಚನ ರಾಘವೇಂದ್ರ, ಚಿತ್ರಕಲಾ ಸ್ಪರ್ಧೆಯಲ್ಲಿ ಶ್ರೀಶೈಲ್ ಯಶವಂತರಾಯ,
ತೃತೀಯ ಸ್ಥಾನ : ಶಾಸ್ತ್ರೀಯ ನೃತ್ಯದಲ್ಲಿ ಶ್ರದ್ಧಾ ಶಶಿಕಾಂತ, ಸಮೂಹ ಗಾಯನ ಸ್ಪರ್ಧೆಯಲ್ಲಿ ಸುರಭಿ ಸುಧೀಂದ್ರ, ಪ್ರೇರಣಾ ರುದ್ರಪ್ಪ, ಕೀರ್ತಿ ಶಿವಪುತ್ರಪ್ಪ, ಯಶಸ್ವಿನಿ ರವೀಂದ್ರ, ಶಿವಾನಿ ಮಹೇಂದ್ರ ಹಾಗೂ ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯದ ಕುರಿತ ರಸಪ್ರಶ್ನೆಯಲ್ಲಿ ಮಲ್ಲಿಕಾರ್ಜುನ ಜಿ., ಶ್ರೇಯಸ್ ಎಸ್. ಎಮ್.
ಭಾಗವಹಿಸಿದ ವಿದ್ಯಾರ್ಥಿಗಳಿಗೆ ಶಿಕ್ಷಕರಾದ ಸುಖದೇವಿ ಕೊರಳ್ಳಿ, ಮಹಾಲಕ್ಷ್ಮೀ ದೀಕ್ಷಿತ್ , ಶೈಕ್ಷಣಿಕ ಸಂಯೋಜಕ ನಿಖಿಲ್ ಪಾಟೀಲ್, ಸುಮಾ ಭಗವತಿ ಹಾಗೂ ಸುಷ್ಮಾ ಭಗವತಿ ಮಾರ್ಗದರ್ಶನ ಮಾಡಿದ್ದರು.
ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷೆ ಸುವರ್ಣ ಭಗವತಿ, ಪ್ರಾಂಶುಪಾಲರು, ಶಿಕ್ಷಕರು ಹಾಗೂ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.