ಮ್ಯೂಟೇಶನ್‍ಗಾಗಿ ಲಂಚ: ಗ್ರಾಮ ಲೆಕ್ಕಿಗ ಲೋಕಾಯುಕ್ತ ಬಲೆಗೆ
ಕಲಬುರಗಿ:ಆ.12: ಮ್ಯೂಟೇಶನ್‍ಗಾಗಿ ಲಂಚ ಪಡೆಯುತ್ತಿದ್ದ ಗ್ರಾಮ ಲೆಕ್ಕಿಗ ಲೋಕಾಯುಕ್ತರ ಬಲೆಗೆ ಬಿದ್ದ ಘಟನೆ ಅಫಜಲಪುರ ತಹಸಿಲ್ದಾರ್ ಕಚೇರಿಯಲ್ಲಿ ಸೋಮವಾರ ವರದಿಯಾಗಿದೆ.
ನಂದರಿಗಿ ಗ್ರಾಮ ಲೆಕ್ಕಿಗ ಸಿದ್ಧರಾಮ್ ಪಡಶೆಟ್ಟಿ ಎಂಬಾತನೇ ಲೋಕಾಯುಕ್ತ ದಾಳಿಗೆ ಸಿಲುಕಿದ ಆರೋಪಿ. ಕರ್ನಾಟಕ ಲೋಕಾಯುಕ್ತ ಪೋಲಿಸ್ ಅಧೀಕ್ಷಕ ಜಾನ್ ಆಂಟೋನಿ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಯಿತು.
ಪಟ್ಟಣದ ನಿವಾಸಿ ಸೈಫನ್‍ಸಾಬ್ ಅಜೀಜ್ ನಾಕೇದಾರ್ ಎಂಬುವವರಿಂದ ಮುಟೇಶನ್‍ಗಾಗಿ ಗ್ರಾಮ ಲೆಕ್ಕಿಗ ಏಳು ಸಾವಿರ ರೂ.ಗಳ ಬೇಡಿಕೆ ಇಟ್ಟಿದ್ದ. ಆ ಲಂಚದ ಹಣ ಪಡೆಯುವಾಗ ಡಿವೈಎಸ್‍ಪಿ ಮಂಜುನಾಥ್, ಪಿಐ ಧ್ರುವತರ್ ಅವರು ಪಡೆಯುವಾಗ ಹಿಡಿದು ವಿಚಾರಣೆ ಮಾಡುತ್ತಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ದೂರುದಾರರು ದುದ್ದಣಗಿ ಗ್ರಾಮದ ರಮೇಶ್ ಜೇವರ್ಗಿಯವರಿಂದ 1.33 ಎಕರೆ ಜಮೀನು ಪಡೆದಿದ್ದರು. ಭೂಮಿ ಕೇಂದ್ರದಿಂದ ಜಮೀನಿನ ಫಾರಂ ಪರಿಶೀಲಿಸಿ ಪಹಣಿ ಮಾಡಲು ಲಂಚದ ಬೇಡಿಕೆ ಇಟ್ಟು ಗ್ರಾಮ ಲೆಕ್ಕಿಗ ಲೋಕಾಯುಕ್ತರ ಬಲೆಗೆ ಸಿಲುಕಿದ್ದಾನೆ.
ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಹಣಮಂಪ್ಪಾ, ಮಸೂದ್, ಶರಣು, ರಾಜೀವ್ ಎಸ್‍ಐ, ಕಣ್ಣಯ್ಯಲಾಲ್, ಮಂಜುನಾಥ್ ಮುಂತಾದವರು ಪಾಲ್ಗೊಂಡಿದ್ದರು. ಆರೋಪಿಯ ವಿಚಾರಣೆ ಮುಂದುವರೆದಿದೆ.