ʼಸಮಾನತೆʼ ಶರಣಬಸವೇಶ್ವರ ಸಂಸ್ಥಾನದ ಮೂಲ ಧ್ಯೇಯ
ಕಲಬುರಗಿ:ಆ.12:ಶರಣಬಸವೇಶ್ವರ ಸಂಸ್ಥಾನ ಎಲ್ಲರನ್ನೂ ಸಮಾನತೆಯಿಂದ ಕಾಣುತ್ತ ಬರುತ್ತಿದೆ ಎಂದು ಶರಣಬಸವ ವಿಶ್ವವಿದ್ಯಾಲಯ ಕನ್ನಡ ವಿಭಾಗ ಪ್ರಾಧ್ಯಾಪಕರಾದ ಡಾ.ಸಾರಿಕಾದೇವಿ ಕಾಳಗಿ ಹೇಳಿದರು.
ಕಲಬುರಗಿಯ ಶರಣಬಸವೇಶ್ವರ ದೇವಸ್ಥಾನದಲ್ಲಿ 30 ದಿನಗಳ ಸಾಂಸ್ಕøತಿಕ ಶಿವಾನುಭವ ಉಪನ್ಯಾಸ ಮಾಲಿಕೆಯಲ್ಲಿ ಸೋಮವಾರ ʼಸಮಾನತೆʼ ವಿಷಯ ಕುರಿತು ಮಾತನಾಡಿದರು.
ಶರಣಬಸವರು ಎಲ್ಲಾ ಜಾತಿ ಜನಾಂಗದವರನ್ನು ಆತ್ಮೀಯವಾಗಿ ಕಂಡವರು. ಮೇಲು ಕೀಳು ಎಂಬ ಭಾವನೆ ಅವರಲ್ಲಿ ಇರಲಿಲ್ಲ. ಅವರಲ್ಲಿ ಬಂದವರು ಅವರು ಯಾವುದೇ ಜಾತಿಯವರು ಇರಲಿ ಅವರ ಸಮಸ್ಯೆಗಳನ್ನು ಆಲಿಸಿ ಪರಿಸುತ್ತಿದ್ದರು. ಹಾಗಾಗಿಯೇ ಎಲ್ಲ ವರ್ಗದವರು ಅವರನ್ನು ಆರಾಧಿಸುತ್ತಾರೆ, ಪೂಜಿಸುತ್ತಾರೆ.
ಶರಣಬಸವರು ಜಾತ್ಯಾತೀತ ಸಮಾಜಕ್ಕೆ ಅನೇಕ ವಿಧಾಯಕ ಕಾರ್ಯಗಳನ್ನು ಮಾಡಿದ್ದಾರೆ. ಅದರಲ್ಲಿ ಕೇಳವರ್ಗದ ಕಡಕೋಳ ಮಡಿವಾಳಪ್ಪನವರಿಗೆ ಲಿಂಗ ದೀಕ್ಷೆ ನೀಡಿದರು. ಮನುಷ್ಯರ ಜೊತೆಗೆ ಪ್ರಾಣಿ ಪಕ್ಷಿಗಳಲ್ಲಿ ಶರಣಬಸವರು ಸಮಾನತೆ ಕಂಡವರು.
ಶರಣಬಸವರು ಹಾಕಿದ ದಾರಿಯಂತೆ ಉಳಿದ ಎಲ್ಲ ಪೀಠಾಧಿಪತಿಗಳು ಸಮಾನತೆಗೆ ಹೆಚ್ಚು ಬೆಲೆ ಕೊಟ್ಟಿದ್ದರು. ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಅವರು ಮತ್ತು ಪೂಜ್ಯ ಡಾ.ದಾಕ್ಷಾಯಣಿ ಅಪ್ಪ ಸಹ ಬಂದಂತ ಭಕ್ತರಲ್ಲಿ ಸಮಾನವಾಗಿ ಕಂಡು ಅವರ ಕಾಳಜಿ ವಹಿಸುತ್ತಾರೆ. ಸಂಸ್ಥಾನದಲ್ಲಿ ಎಲ್ಲ ಜಾತಿಯವರಿಗೂ ಕೆಲಸ ಕೊಟ್ಟು ಸಮಾನತೆಯ ಹರಿಕಾರರಾಗಿದ್ದಾರೆ. ಎμÉ್ಟೂೀ ಜನರು ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಧಾರ್ಮಿಕ ಸಮನ್ವತೆ, ಶೈಕ್ಷಣಿಕ ಸಮನ್ವತೆ, ಸ್ತ್ರೀ ಸಮಾನತೆ ಸಂಸ್ಥಾನದಲ್ಲಿ ಎದ್ದು ಕಾಣುತ್ತದೆ. ಇಲ್ಲಿ ಯಾರೂ ದೊಡ್ಡವರಿಲ್ಲ, ಯಾರೂ ಸಣ್ಣವರಿಲ್ಲ ಎಲ್ಲರೂ ಒಂದೇ. ದಾಸೋಹ ಮಹಾಮನೆಯಲ್ಲಿ ಸಹ ಉಚ್ಛ ನೀಚ ಎಂಬ ಬೇಧ ಭಾವವಿಲ್ಲ. ಎಲ್ಲರಿಗೂ ಸಮಾನ ರೀತಿಯ ಪ್ರಸಾದ ಒದಗಿಸಲಾಗುತ್ತದೆ. ಪೂಜ್ಯ ಡಾ.ಅಪ್ಪಾಜಿ ಮತ್ತು ಡಾ.ಅವ್ವಾಜಿಯವರು ಎಲ್ಲ ಜಾತೀಯವರನ್ನು ಸಮಾನ ದೃಷ್ಟಿಯಿಂದ ಕಂಡು ಅವರಿಗೆ ಆಶೀರ್ವದಿಸುತ್ತಾರೆ. ಕರೋನಾ ಜಗತ್ತಿನಾದ್ಯಂತ ರುದ್ರ ತಾಂಡವಾಡುತ್ತಿದ್ದಾಗ ಸಾವಿರಾರು ಭಕ್ತರಿಗೆ ಪೂಜ್ಯ ಡಾ.ಅವ್ವಾಜಿ ಅವರು ಎಲ್ಲ ಜನಾಂಗದವರಿಗೆ ಅವರು ಇರುವ ಸ್ಥಳದಲಿಯೇ ಕಳುಹಿಸಿ ಕೊಟ್ಟಿದ್ದರು.
ಶರಣಬಸವರನ್ನು ಕಲ್ಯಾಣ ಕರ್ನಾಟಕದ ಆರಾಧ್ಯ ದೇವರೆಂದು ಪ್ರತಿಯೊಬ್ಬರು ಪೂಜಿಸುತ್ತಾರೆ. ಹಿಂದುಗಳ ಅಲ್ಲದೆ ಮುಸ್ಲಿಂಮರು ಶರಣಬಸವೇಶ್ವರ ದೇವಸ್ಥಾನಕ್ಕೆ ಬಂದು ಶರಣದ ದರ್ಶನ ಪಡೆಯುತ್ತಾರೆ. ಪ್ರತಿ ಶ್ರಾವಣ ಮಾಸದಲ್ಲಿ ಮತ್ತು ಜಾತ್ರಾ ಸಂದರ್ಭದಲ್ಲಿ ಅನೇಕ ರಾಜ್ಯಗಳಿಂದ ಎಲ್ಲ ವರ್ಗದವರು ಬರುತ್ತಾರೆ. ಸರ್ವಜನಾಂಗದವರೂ ಒಂದೇ ಭಾವದಿಂದ ತಮ್ಮ ಭಕ್ತಿ ಸಮರ್ಪಿಸುತ್ತಾರೆ ಎಂದು ಹೇಳಿದರು.