ಆ. 13 ರಂದು ಜಿಲ್ಲೆಯಲ್ಲಿ ಪ್ರವಾಹ ಪೂರ್ವ ಕುರಿತು ಸರಡಗಿ ಬ್ಯಾರೇಜ್‍ನಲ್ಲಿ ಅಣುಕು ಪ್ರದರ್ಶನ
ಕಲಬುರಗಿ:ಆ.12: ಭಾರತೀಯ ಹವಮಾನ ಇಲಾಖೆಯ ಮುನ್ಸೂಚನೆಯಂತೆ 2024-25ನೇ ಸಾಲಿನ ಮುಂಗಾರು ಹಂಗಾಮಿನ ಆಗಸ್ಟ್ ಮತ್ತು ಸೆಪ್ಟೆಂಬರ್ ಮಾಹೆಯಲ್ಲಿ ವಾಡಿಕೆ ಮಳೆಗಿಂತ ಅಧಿಕ ಪ್ರಮಾಣದಲ್ಲಿ ಮಳೆಯಾಗುವ ಮುನ್ಸೂಚನೆಯಿಂದ ಈಗಿನಿಂದಲೇ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಾಗಬೇಕೆಂದು ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ತಿಳಿಸಿದರು.
ಅವರು ಸೋಮವಾರದಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರವಾಹ ಕುರಿತು ಪೂರ್ವಸಿದ್ಧತೆ ಅಣುಕು ಪ್ರದರ್ಶನವನ್ನು ಆಗಸ್ಟ್ 13 ರಂದು ಬೆಳಿಗ್ಗೆ 10 ಗಂಟೆಗೆ ಫರತ್ತಾಬಾದ ಪಕ್ಕದಲ್ಲಿರುವ ಸರಡಗಿ ಬ್ರಿಡ್ಜ್‍ಕಂ ಬ್ಯಾರೇಜ್‍ನಲ್ಲಿ ನಡೆಸಲಾಗುವುದು. ಈ ಕಾರ್ಯಕ್ರಮಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಗ್ ಖರ್ಗೆ ಅವರು ಆಗಮಿಸಲಿದ್ದಾರೆ ಎಂದರು.
ನಾಳೆಯು ನಡೆಯುವ ಅಣುಕು ಪ್ರದರ್ಶನಕ್ಕೆ ಸಕ್ಕಲ ಸಿದ್ಧತೆಗಳನ್ನು ತಮ್ಮ ತಂಡದೊಂದಿಗೆ ಮಾಡಲು ಸೂಚಿಸಿದರು. ಆರೋಗ್ಯ ಇಲಾಖೆ,ಆರ್.ಟಿ.ಓ, ಕಂದಾಯ, ಅಗ್ನಿ ಶಾಮಕ ದಳ, ಪೊಲೀಸ್ ಹಾಗೂ ಆರೋಗ್ಯ ಇಲಾಖೆಗಳು ಬಹುಮುಖ್ಯವಾದ ಪಾತ್ರವನ್ನು ವಹಿಸುತ್ತದೆ ಎಂದರು.
ಜಿಲ್ಲೆಯ ಸನ್ನದ್ದತೆ ಹಾಗೂ ವಿವಿಧ ಇಲಾಖೆಗಳ ಕಾರ್ಯರೂಪ/ಸಮನ್ವಯ ಮೌಲ್ವೀಖರಿಸಲು ಒoಛಿಞ ಇxeಡಿಛಿise oಟಿ ಈಟooಜ ಆisಚಿsಣeಡಿ iಟಿ ಞಚಿಟಚಿbuಡಿgi ಈ ಕುರಿತು ಅಣುಕು ಪ್ರದರ್ಶನ ಮಾಡಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಿನ್ನೆ ನಡೆದ ಸಭೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಚರ್ಚಿಸಲಾಗಿರುತ್ತದೆ. ಎಂದರು.
ಜಿಲ್ಲಾಡಳಿತದಿಂದ ಆಯೋಜಿಸಲಾಗಿರುವ ಪ್ರವಾಹ ಅಣುಕು ಕಾರ್ಯಾಚರಣೆಯಲ್ಲಿ ರಕ್ಷಣಾ ಕಾರ್ಯವನ್ನು ಎಸ್‍ಡಿಆರ್‍ಎಫ್ ಡೆಪ್ಯೂಟಿ ಕಮಾಂಡಂಟ್ ಗುರುನಾಥ ಎಸ್.ಇವರ ನೇತೃತ್ವದಲ್ಲಿ ನಡೆಸಲಾಗುವುದು ಎಂದರು.
ಎಲ್ಲ ಇಲಾಖೆಗಳು ತಮಗೆ ನಿರ್ವಹಿಸಿ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಯಾವುದೇ ಲೋಪಗಳು ಆಗಲಾರದ ಹಾಗೆ ಮುನ್ನೆಚ್ಚರಿಕೆ ವಹಿಸಲು ಸೂಚಿಸಿದರು. ಇಲಾಖೆಗಳ ಪಾತ್ರ ಬಹುಮಖ್ಯವಾಗಿದೆ ಎಂದು ಹೇಳಿದ್ದರು.
ರೆಸ್ಕ್ಯೂ ಮಾಡುವಾಗ ಡೆಮೋ ತೋರಿಸುವುದು ಪ್ರೋಸಿಡಿಂಗ್ಸ್ ಮಾಡುವುದು ಕ್ಯಾಟಲ್ ಬೇಡ ಮತ್ತು ಕ್ಯಾಟಲ್ ಝಡ್ ಸೈನ್ ಬೋರ್ಡ ಅಂಬುಲೆನ್ಸ ಮತ್ತು ರಿಲೀಫ ಕ್ಯಾಂಪ್ ಹಾಗೂ 24ಘಿ7, ಕೆ. ಎಸ್.ಆರ್.ಟಿ.ಸಿ,ಬಸ್ ಮತ್ತು ಮಾಧ್ಯಮ ಮಿತ್ರರು ಅವರÀವರÀ ಸ್ಥಾನಗಳಲ್ಲಿ ಅವರು ಉಪಸ್ಥಿತರಿರಲು ಹೇಳಿದರು.
ಎಲ್ಲಿ ರೆಸ್ಕ್ಯೋ ನಡೆಯುತ್ತಿದೆ ಅಲ್ಲಿ ಎಲ್ಲ ತರಹದ ಸ್ಥಳ ವಿಕ್ಷಣೆ ಮಾಡಿ ಮಧ್ಯಾಹ್ನ ಮೂರು ಗಂಟೆಗೆ ಸಂಬಂಧ ಪಟ್ಟ ನೋಡಲ್ ಅಧಿಕಾರಿಗಳು ಹಾಜರಾಗಿ ಅವರಿಗೆ ವಹಿಸಿದ ಕೆಲಸ ಸುಸೂತ್ರವಾಗಿ ಆಯೋಜಿಸಬೇಕೆಂದು ಮತ್ತು ಕುಡಿಯುವ ನೀರಿನ ವ್ಯವಸ್ಥೆ ಊಟದ ವ್ಯವಸ್ಥೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎನ್.ಶ್ರೀನಿಧಿ, ಡಿ.ಯು.ಡಿ.ಸಿ. ಮುನಾವರ್ ದೌಲಾ, ಡಿ.ಹೆಚ್.ಓ. ಡಾ. ರತಿಕಾಂತ ಸ್ವಾಮಿ, ಪದವಿ ಪೂರ್ವ ಕಾಲೇಜು ಉಪನಿರ್ದೇಶಕ ಶಿವಶರಣಪ್ಪ ಮೂಳೆಗಾಂವ, ಅಗ್ನಿ ಶಾಮಕ ದಳದ ಪೊಲೀಸ್ ಇಲಾಖೆಯ ಅಧಿಕಾರಿಗಳು ಜೆಸಾಂ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.