ಹೆಚ್‍ಐವಿ/ಏಡ್ಸ್ ಅರಿವಿನ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸಿ:ಹಿರಿಯ ಸಿವಿಲ್ ನ್ಯಾಯಾಧೀಶ ಶ್ರೀನಿವಾಸ್ ನವಲೆ
ಕಲಬುರಗಿ:ಆ.12:ಅಂತರಾಷ್ಟ್ರೀಯ ಯುವ ದಿನಾಚರಣೆ ಎಂದರೆ ನಮ್ಮ ಭಾರತದಲ್ಲಿ ಯುವಕ ದಿನಾಚರಣೆ ಯುವಕರು ಬೆಳೆಯುತಿರುವ ಈ ಹೆಚ್‍ಐವಿ ಮತ್ತು ಏಡ್ಸ್ ಅಂತ ಮಾರಣಾಂತಿಕ ಭಯಾನಕ ರೋಗಕ್ಕೆ ಮೆಡಿಕಲ್ ವಿದ್ಯಾರ್ಥಿಗಳು ಮತ್ತು ಇಂಜಿನಿಯರ ವಿದ್ಯಾರ್ಥಿಗಳು ಈ ರೋಗಕ್ಕೆ ತುತ್ತಾಗುತ್ತಿದಾರೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳಾದ ಶ್ರೀನಿವಾಸ್ ನವಲೆ ಅವರು ಹೇಳಿದ್ದರು.
ಸೋಮವಾರದಂದು ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನಷನ್ ಸೊಸೈಟಿ ಬೆಂಗಳೂರು ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ, ಭಾರತೀಯ ಕಲಬುರಗಿ ಎನ್.ಎಸ್.ಎಸ್. ಘಟಕ, ಕಲಬುರಗಿ ನೂತನ ವಿದ್ಯಾಲಯ ಪದವಿ ಮಹಾವಿದ್ಯಾಲಯ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ
“ಅಂತರಾಷ್ಟ್ರೀಯೊ ಯುವ ದಿನಾಚರಣೆ” ಹೆಚ್‍ಐವಿ/ಏಡ್ಸ್ ಅರಿವಿನ ಮಾಸಾಚರಣೆ 2024 ಉದ್ಫಾಟನೆ ಕಾರ್ಯಕ್ರಮದಲ್ಲಿ ಸಸಿಗೆ ನೀರೆರೆಯುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು, ಅವರು ಯುವಕರ ಬಗ್ಗೆ ಚಿಂತಿಸುವವರು ಬೆಳೆಯುತ್ತಿರುವ ರೀತಿ ಅವರು ಮುಂದೆ ಸಾಗುವ ಒಂದು ರೀತಿ ಅವರು ಯಾವುದೇ ತರಹ ಜಗತಿನ ಬಗ್ಗೆ ವಿಚಾರ ಬೇಡ ರಾಜ್ಯದ ಬಗ್ಗೆ ವಿಚಾರ ಬೇಡ ನಾವು ಕೇವಲ ಕಲಬುರಗಿ ಬಗ್ಗೆ ವಿಚಾರ ಮಾಡೋಣ ಎಂದರು. ಈ ಒಂದು ರೋಗ ಹರುಡಿದ ವ್ಯಕ್ತಿ ಬದುಕುಳಿಯುವುದು ತÀುಂಬಾನೆ ಕಡಿಮೆಯಾಗಿರುತ್ತದೆ ಕೆಲವರು ಔಷಧಿ ತೆಗೆದಿಕೊಂಡು ಸ್ವಲ್ಪ ದಿನಗಳಕಾಲ ಬದುಕುಳಿಯುತ್ತಾರೆ ಎಂದರು.
ಕಲಬುರಗಿ ನಗರಕ್ಕೆ ಮುಂಬರುವ ದಿನಗಳಲ್ಲಿ ಬರುತಕ್ಕಂತ ಸಂಕಷ್ಟಗಳ ಯಾವ ಯಾವ ಸಂಕಷ್ಟಗಳು ಕಲಬುರಗಿಗೆ ಬರುತ್ತಿದೆ ಅವುಗಳ ಬಗ್ಗೆ ಚಿಂತಿಸುವರು ಯಾರು ಅದಕ್ಕೆ ಪರಿಹಾರ ಕಂಡುಕೊಳ್ಳುವವರು ಯಾರು ಅದರಲ್ಲಿ ನಿಮ್ಮ ಭಾಗಿತ್ವ ಏನ್ನು ನಿಮ್ಮ ಕೊಡುಗ್ಗೆ ಎನ್ನು ಈ ಪ್ರಶ್ನೆಗಳಿಗೆ ನೀವೆ ವಿಚಾರ ಮಾಡಿ ಇದರ ಬಗ್ಗೆ ಮನನ ಮಾಡಿ ಇದರ ಬಗ್ಗೆ ಪರಿಹಾರ ಕಂಡಿದೆ ನಿಜವಾಗಿದರೆ ಅನೇಕ ಸಮಸ್ಯೆಗಳ ಬಗ್ಗೆ ವೈಜ್ಞಾನಿಕವಾಗಿ ಪರಿಹಾರ ಮಾಡುವಂತವರು ಇವತ್ತಿನ ಯುವಕರಿಗೆ ಇದು ಒಂದೆ ನಿಮ್ಮ ಜವಬ್ದಾರಿಯಾಗಿದೆ ಎಂದರು
ಈ ಸಮಾಜದಲ್ಲಿ ನಿಮ್ಮ ಕೂಡುಗೆ ಅಪಾರವಾಗಿದೆ ಯಾವುದೇ ಹಲವಾರು ಯುವಕರು ತಮ್ಮ ಬದುಕುವ ವಯಸಿನಲ್ಲಿ ಇಂತಹ ಒಂದು ರೋಗಕ್ಕೆ ತುತ್ತಾಗಿ ತಮ್ಮ ಪ್ರಾಣವನ್ನೆ ಕಳೆದುಕೊಂಡಿರುವಂತಹ ಸಂÀಗತಿಗಳು ಹಲವಾರು ರೀತಿಯಲ್ಲಿ ನಾವು ನೊಡಬಹುದು ಅದಕ್ಕೆ ಈ ಒಂದು ದುಶ್ಚಟಕ್ಕೆ ಬಲಿಯಾಗದೆ ಸರಿಯಾದ ಮಾರ್ಗದಲ್ಲಿ ನಡೆದರೆ ಇಂತಹ ಒಂದು ಘಟನೆಗಳು ತಪ್ಪಿಸಬಹುದು ಎಂದು ಯುವಕರಲ್ಲಿ ಜಾಗೃತಿ ಮೂಡಿಸಿದರು.
ನೂತನ ವಿದ್ಯಾಲಯ ಸಂಸ್ಥೆಯ ಅಧ್ಯಕ್ಷರಾದ ಹಣಮಂತರಾವ್ ಕಣಿಹಾಳ, ಅಧ್ಯಕ್ಷತೆ ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ವಿಭಾಗೀಯ ಜಂಟಿ ನಿರ್ದೇಶಕರು ಶರಣಬಸಪ್ಪಾ ಗಣಜಲಖೇಡ್, ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿ ಡಾ.ಚಂದ್ರಕಾಂತ ನರಬೋಳಿ,ಜಿಲ್ಲಾ ಪ್ರಭಾರಿ ಜಿಲ್ಲಾ ಏಡ್ಸ್ ನಿಯಂತ್ರಣ ಮೇಲ್ವಿಚಾರಕರು ಮಲ್ಲಿಕಾರ್ಜುನ ಬಿರಾದಾರ, ಇದ್ದರು ಅದೇ ರೀತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಎರಡು ಸಾವಿರ ಬಹುಮಾನ ವಿತರಣೆ ಮಾಡಿದರು