ಗೇಟ್ ನಿರ್ವಹಣೆ ನಿರ್ಲಕ್ಷ್ಯ:ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣಕ್ಕೆ ಒತ್ತಾಯ
ಸಂಜೆವಾಣಿ ವಾರ್ತೆ.
ಸಿಂಧನೂರು ಆ.೧೨-
ತುಂಗಭದ್ರಾ ಜಲಾಶಯದ ೧೯ ನೇ ಗೇಟ್ ಚೈನ್ ಕತ್ತರಿಸಿ ನೀರು ಪಾಲಾಗಿದ್ದು ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ನಿರ್ವಹಣೆ ಮಾಡದೆ ನಿರ್ಲಕ್ಷ್ಯ ಕಾರಣ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಜೈಲಿಗೆ ಹಾಕಬೇಕು ಎಂದು ಸಿಪಿಐ (ಎಂ.ಎಲ್) ಮಾಸ್ ಲೈನ್ ಪ್ರಮುಖರಾದ ಡಿ.ಎಚ್.ಪೂಜಾರ ಆಗ್ರಹಿಸಿದರು.
ಪತ್ರಿಕಾ ಭವನದಲ್ಲಿ ಸುದ್ದಿ ಗೋಷ್ಟಿ ನಡೆಸಿ ಮಾತನಾಡಿದರು. ಈ ಗೇಟ್ ಕತ್ತರಿಸಿ ಬಿದ್ದಿದ್ದು ಲಕ್ಷಾಂತರ ಜನರ ಬದುಕಿಗೆ ಬೆಂಕಿ ಇಟ್ಟಿದೆ.ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ ಇದರಲ್ಲಿ ಅಧಿಕಾರಿಗಳ ತಪ್ಪೇನು ಏನು ಇಲ್ಲ ಎಂದು ಅಧಿಕಾರಿಗಳನ್ನು ಬಚಾವ್ ಮಾಡುವ ಕೆಲಸ ಮಾಡುತ್ತಿದ್ದಾರೆ ಇದು ಎಷ್ಟು ಸರಿ ಎಂದು ಪ್ರಶ್ನಿಸಿದರು.ಇದರ ಹೊಣೆಯನ್ನು ಸರ್ಕಾರ ,ಕಾಡಾ ಅಧ್ಯಕ್ಷ ,ಪದಾಧಿಕಾರಿಗಳು ಹಾಗೂ ಅಧಿಕಾರಿಗಳು ಒತ್ತುಕೊಳ್ಳಬೇಕು ಮತ್ತು ಈ ನಿಗಮದ ಕೇಂದ್ರ ಕಛೇರಿಯನ್ನು ಹೈದರಾಬಾದ್ ದಿಂದ ಮುನಿರಬಾದ್ ವರ್ಗಾಯಿಸುವಂತೆ ಪಕ್ಷ ಬೇದ ಮರೆತು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು .ರೀತಿಯ ದುರ್ಘಟನೆ ಕಾವೇರಿ ಭಾಗದಲ್ಲಿ ಸಂಭವಿಸಿದ್ದರೆ ಕರ್ನಾಟಕ ಹೊತ್ತಿ ಉರಿಯುತಿತ್ತು ಇದು ನಮ್ಮ ಭಾಗದ ದುರ್ದೈವ ಎಂದು ಹತಾಶೆ ವ್ಯಕ್ತಪಡಿಸಿದರು .
ಇದೇ ಸಂದರ್ಭದಲ್ಲಿ ರಮೇಶ ಪಾಟೀಲ್ ಬೇರ್ಗಿ ,ಬಿ.ಎಮ್ ಯರದಿಹಾಳ ,ಚಿಟ್ಟಿಬಾಬು ,ರೇಣುಕಮ್ಮ ಬೂದಿಹಾಳ ಕ್ಯಾಂಪ್ ಉಪಸ್ಥಿತರಿದ್ದರು .