ಬಿಟ್ ಕಾಯಿನ್ ಹೆಸರಲ್ಲಿ ವಂಚನೆ ಕ್ರಮಕ್ಕೆ ಆಗ್ರಹ
ಸಿರವಾರ, ಆ.೧೨-
ಇಎಸ್ಪಿಎನ್ ಗ್ಲೋಬಲ್ ಬಿಟ್ ಕಾಯಿನ್ ಕಂಪನಿಯ ಹೆಸರಿನಲ್ಲಿ ದುಪ್ಪಟ್ಟು ಹಣ ಮಾಡಿಕೊತ್ತೇನೆ ಎಂದು ಅಮಾಯಕ ಜನರನ್ನು ನಂಬಿಸಿ ಮೋಸ ಮಾಡಿ ನಾಪತ್ತೆಯಾಗಿರುವ ಸಿರವಾರ ಪಟ್ಟಣದ ೪೨೦ ಸಿರಾಜುದ್ದೀನ್ ಬಂಗಾರ ಈತನಿಗೆ ವಂಚನೆಗೊಳಗಾದ ಜನರು ಹೂಡಿಕೆ ಮಾಡಿದ ಹಣವನ್ನು ಹಿಂದಿರುಗಿಸಲು ಒಂದು ತಿಂಗಳು ಗಡುವು ನೀಡಲಾಗಿದ್ದು ಅವರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಹೂಡಿಕೆದಾರರಾದ ಮಾರ್ಟಿನ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ
ಸಿರವಾರ ಪಟ್ಟಣದ ಕ್ಲಾಸಿಕ್ ಕಂಪ್ಯೂಟರ್ ಇನ್ಸ್ಟಿಟ್ಯೂಟ್ ಮಾಲೀಕ ಸಿರಾಜುದ್ದೀನ್ ಬಂಗಾರ ಅವರು ಕಳೆದ ಎರಡು ವರ್ಷಗಳ ಹಿಂದೆ ನಮಗೆ ಆನ್ಲೈನ್ ನಲ್ಲಿ ಇಎಸ್ಪಿಎನ್ ಗ್ಲೋಬಲ್ ಎಂಬ ಕಂಪನಿಯು ಕಡಿಮೆ ಅವಧಿಯಲ್ಲಿ ಹಣ ಹೂಡಿಕೆ ಮಾಡಿದರೆ ಅಧಿಕ ದುಪ್ಪಟ್ಟು ಹಣ ಮಾಡಿಕೊಡುತ್ತೇನೆ ಎಂದು ಪಟ್ಟಣದ ಯುವಕರು, ಸರ್ಕಾರಿ ಮತ್ತು ಖಾಸಗಿ ನೌಕರರು ಸೇರಿ ೫೦ಕ್ಕೂ ಹೆಚ್ಚು ಜನರನ್ನು ಸೇರಿಸಿ ತಾಲೂಕಿನ ವಿವಿಧ ಹಳ್ಳಿಗಳಿಂದ ಸುಮಾರು ೪ಕೋಟಿ
ರೂ.ಅಧಿಕ ಹಣವನ್ನು ಹೂಡಿಕೆ ಮಾಡಲಾಗಿತ್ತು. ಆ ಹಣವನ್ನು ನಮಗೆ ನೇರವಾಗಿ ಸಿರಾಜುದ್ದೀನ್ ಬಂಗಾರ ಈತನಿಗೆ ನೇರ ನಗದು ರೂಪದಲ್ಲಿ ಮತ್ತು ಅಕೌಂಟ್ ಗೆ ಜಮಾ ಮಾಡುವ ಮೂಲಕ ಹೂಡಿಕೆ ಮಾಡಿದ್ದೇವೆ. ಆದರೆ, ಇದೀಗ ಸಿರಾಜುದ್ದೀನ್ ಬಂಗಾರ್ ಎರಡು ವರ್ಷಗಳಿಂದ ತಲೆಮರೆಸಿಕೊಂಡು ತಿರುಗಾಡುತ್ತಿದ್ದಾನೆ. ಒಬ್ಬರು ಕನಿಷ್ಠ ೧೦ ರಿಂದ ೨೦ಲಕ್ಷ ರೂಪಾಯಿ ಹಣ ಹೂಡಿಕೆ ಮಾಡಿದ್ದಾರೆ. ಎರಡು ವರ್ಷಗಳಿಂದ ನಮಗೆ ಹೂಡಿಕೆ ಮಾಡಿದ ಹಣವೂ ಇಲ್ಲ ಮತ್ತು ಯಾವುದೇ ಲಾಭಾಂಶದ ಹಣವನ್ನು ನೀಡುತ್ತಿಲ್ಲ. ಆದ್ದರಿಂದ ಪಟ್ಟಣದ ನಯ ವಂಚಕ ಸಿರಾಜುದ್ದೀನ್ ಬಂಗಾರ ಈತನಿಗೆ ಹೂಡಿಕೆದಾರರು ಹೂಡಿಕೆ ಮಾಡಿದ ಪ್ರತಿಯೊಬ್ಬರ ಹಣವನ್ನು ಹಿಂದಿರುಗಿಸಲು ಒಂದು ತಿಂಗಳು ಗಡುವ ನೀಡಿದೆ. ಒಂದು ವೇಳೆ ನೀಡದಿದ್ದರೆ ಮುಂದಿನ ದಿನಗಳಲ್ಲಿ ಈತನ ಮೇಲೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗುತ್ತದೆ ಎಂದು ತಿಳಿಸಿದರು.
ಈ ಹಿಂದೆ ಸಿರಾಜ್ ನಿಂದ ನಕಲಿ ಛಾಪಕಾಗದವನ್ನು ಮಾಡಿ ಅವರ ಸಹೋದರರಿಂದ ಚಲಾವಣೆ ಮಾಡಿ, ಪ್ರಕರಣ ದಾಖಲಾಗಿತು ಎಂಬುದು ಸ್ಮರಿಸಿದರು.
ಈ ಸಂದರ್ಭದಲ್ಲಿ ಅಮರನಾಥ, ವಿಜಯಕುಮಾರ ನಾಯಕ, ಗಂಗಧರ ನಾಯಕ, ಸುನಿಲ್ ಕುಮಾರ್, ಖಾಸೀಂಅಲಿ, ಕೃಷ್ಣ, ಉಮರ್ ಅಲಿ, ಗುರುರಾಜ್ ಕಲ್ಲೂರ, ವಿನೋದ ಕುಮಾರ, ಚನ್ನಪ್ಪ, ಹೆಚ್.ಆರ್. ಕನ್ಯಾಕುಮಾರ, ರವಿಕುಮಾರ್, ಮುಸ್ತಾಫ್ ಸೇರಿದಂತೆ ಅನೇಕರು ಇದ್ದರು.