ಗೇಟ್ ವಿಕ್ಷಣೆ, ರೈತರು ಆತಂಕಪಡುವ ಅಗತ್ಯವಿಲ್ಲ-ಜಿ.ಹಂಪಯ್ಯನಾಯಕ
ಸಿರವಾರ.ಅ೧೨-
ಈ ಬಾರಿ ಅದಿಕ ಪ್ರಮಾಣದಲ್ಲಿ ಮಳೆಯಾಗಿ ತುಂಗಭದ್ರಾ ಜಲಾಶಯ ಭರ್ತಿಯಾಗಿತು, ಎರಡು ಬೆಳೆಗೆ ನೀರು ಬರುತ್ತವೆ ಎಂದು ರೈತರು ಸಂತಸ ವ್ಯಕ್ತಪಡಿಸಿದರು. ನೀರು ಹೆಚ್ಚಾಗಿ ತುಂಗಭದ್ರಾ ಅಣೆಕಟ್ಟಿನ ೧೯ನೇ ಗೇಟ್ ಚೈನ್ ಲಿಂಕ್ ಮುರಿದಿದ್ದು, ಅಪಾರ ಪ್ರಮಾಣದ ನೀರು ಹರಿದು ಹೋಗುತ್ತಿರುವುದನ್ನು ನಿಲ್ಲಿಸಲು ತಾತ್ಕಾಲಿಕ ಗೇಟು ಆಳವಡಿಸುವ ಕಾರ್ಯ ಸೋಮವಾರ ಅಥವಾ ಮಂಗಳವಾರದಿಂದ ಪ್ರಾರಂಭವಾಗುತ್ತದೆ. ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಮಾನ್ವಿ ಶಾಸಕರಾದ ಜಿ.ಹಂಪಯ್ಯನಾಯಕ ಹೇಳಿದರು.
ತುಂಗಭದ್ರಾ ಜಲಾಶಯದ ಪ್ರದೇಶಕ್ಕೆ ಭಾನುವಾರ ಡಿಸಿಎಂ ಹಾಗೂ ನೀರಾವರಿ ಸಚಿವ ಡಿಕೆ ಶಿವಕುಮಾರ, ಸಣ್ಣ ನೀರಾವರಿ, ವಿಜ್ಞಾನ ತಂತ್ರಜ್ಞಾನ ಸಚಿವ ಎನ್ ಎಸ್ ಬೋಸರಾಜು ಅವರೊಂದಿಗೆ ಭೇಟಿ ನೀಡಿ ಮಾಹಿತಿ ನೀಡಿದ ಅವರು, ಸ್ಥಳೀಯ ನುರಿತ ತಾಂತ್ರಿಕ ಎಂಜಿನಿಯರ್‌ಗಳು ಗೇಟು ಆಳವಡಿಸುವ ಕೆಲಸ ನಡೆಸಿದ್ದಾರೆ. ೪ ರಿಂದ ೫ ದಿನದೊಳಗೆ ಸರಿಪಡಿಸುತ್ತಾರೆ. ಮುಖ್ಯ ಎಂಜಿನಿಯರ್ ಮಾತನಾಡಿದ್ದು ಜೊತೆಗೆ ರೈತರು ಆತಂಕಪಡುವಂತಿಲ್ಲ, ನೀರು ಖಾಲಿ ಮಾಡಿ ಕೆಲಸ ಮಾಡಬೇಕಾಗಿದೆ, ಮುಂದಿನ ದಿನಗಳಲ್ಲಿ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆಯಾಗಿ ಜಲಾಶಯ ಭರ್ತಿಯಾಗುವ ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪಂಚಗ್ಯಾರೆಂಟಿ ಅನುಷ್ಠಾನ ಸಮಿತಿ ತಾಲೂಕ ಅದ್ಯಕ್ಷ ಬ್ರೀಜೇಶ ಪಾಟೀಲ್, ಎಂ.ಶ್ರೀನಿವಾಸ, ಶಿವಪ್ಪಗೌಡ ಹಳ್ಳಿಹೊಸೂರು ಸೇರಿದಂತೆ ಇನ್ನಿತರರು ಇದರು.