ಪಿಐ ಅಶೋಕ ಸದಲಿಗೆ ಅಮಾನತ್ತು
ರಾಯಚೂರು,ಆ.೧೨- ದೇವದುರ್ಗ ಪೊಲೀಸ್ ಠಾಣೆ ಹಿಂಭಾಗದಲ್ಲಿ ಸಂಗ್ರಹಿಸಿದ ಸಾವಿರಾರು ಮೆಟ್ರಿಕ್ ಟನ್ ಮರಳಿನ ವಿಲೇವಾರಿಗೆ ಕಾರಣವಾಗಿದ್ದ ದೇವದುರ್ಗ ಪೊಲೀಸ್ ಇನ್ಸ್ ಪೆಕ್ಟರ್ ಅಶೋಕ್ ಸದಲಿಗೆ ಅವರನ್ನು ಅಮಾನತ್ತು ಮಾಡಲಾಗಿದೆ.
ದೇವದುರ್ಗ ವಿವಿಧತೆ ಅಕ್ರಮವಾಗಿ ಸಂಗ್ರಹಿಸಿದ್ದ ಮರಳು ದಾಸ್ತಾನನ್ನು ದೇವದುರ್ಗ ಪೊಲೀಸ್ ಠಾಣೆ ಹಿಂಭಾಗದಲ್ಲಿ ಸಂಗ್ರಹಿಸಲಾಗಿತ್ತು. ಆದರೆ ಈ ಮರಳನ್ನು ಇನ್ಸ್ ಪೆಕ್ಟರ್ ಅಶೋಕ್ ಸದಲಿಗೆ ಅವರು ಜಿಲ್ಲಾ ಮರಳು ಸಮಿತಿಯ ಅನುಮತಿ ಇಲ್ಲದೆ ವಿಲೇವಾರಿ ಮಾಡಿದ್ದರು. ಇದನ್ನು ವಿರೋಧಿಸಿ ಸ್ಥಳೀಯ ಸಮಾಜ ಕಾರ್ಯಕರ್ತರು ಸದಲಿಗೆ ಅವರ ಅಮಾನತ್ತಿಗೆ ಆಗ್ರಹಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಬಳ್ಳಾರಿ ವಲಯ ಆರಕ್ಷಕ ಮಹಾನಿರೀಕ್ಷಕರು ಸದಲಿಗೆ ಅವರನ್ನು ಅಮಾನತ್ತು ಮಾಡಿದ್ದಾರೆ ಎಂದು ಬಲ್ಲಮೂಲಗಳಿಂದ ತಿಳಿದುಬಂದಿದೆ.