ರಾಷ್ಟ್ರದ ವಿಜ್ಞಾನ ಕ್ಷೇತ್ರಕ್ಕೆ ಡಾ.ವಿಕ್ರಮ ಸಾರಾಭಾಯಿ ಕೊಡುಗೆ ಅನನ್ಯ
ಕಲಬುರಗಿ:ಆ.12:ಡಾ.ವಿಕ್ರಮ ಸಾರಾಭಾಯಿಅವರು ಭೌತಶಾಸ್ತ್ರಜ್ಞ, ಖಗೋಳಶಾಸ್ತ್ರಜ್ಞ, ಕೈಗಾರಿಕೋದ್ಯಮಿ. ಇಸ್ರೋ ಸಂಸ್ಥೆಯ ಸ್ಥಾಪಕರು. ಪರಮಾಣು ಶಕ್ತಿಯ ಬಗ್ಗೆ ಸಂಶೋಧನೆ ಮಾಡಿದವರು. ಉಪಗ್ರಹಗಳ ತಯಾರಿಕೆ ಮತ್ತುಉಡಾವಣೆ ಸೇರಿದಂತೆ ಅನೇಕ ಕಾರ್ಯಗಳನ್ನು ಮಾಡುವ ಮೂಲಕ ರಾಷ್ಟ್ರ ನಿರ್ಮಾಣಕಾರ್ಯಕ್ಕೆತಮ್ಮದೇಆದಅನನ್ಯವಾದಕೊಡುಗೆಯನ್ನು ನೀಡಿದ್ದಾರೆಉಪನ್ಯಾಸಕಎಚ್.ಬಿ.ಪಾಟೀಲ ಅಭಿಮತ ವ್ಯಕ್ತಪಡಿಸಿದರು.
ನಗರದಖಾದ್ರಿಚೌಕ್‍ನಲ್ಲಿರುವ ‘ಸಕ್ಸಸ್‍ಕಂಪ್ಯೂಟರತರಬೇತಿಕೇಂದ್ರ’ದಲ್ಲಿ’ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದಜರುಗಿದಡಾ.ವಿಕ್ರಮ ಸಾರಾಬಾಯಿಅವರ105ನೇ ಜನ್ಮದಿನಾಚರಣೆಯಲ್ಲಿಅವರುಮಾತನಾಡುತ್ತಿದ್ದರು.
ಸಂಸ್ಥೆಯಅಧ್ಯಕ್ಷಅಸ್ಲಾಂ ಶೇಖ್‍ಮಾತನಾಡಿ, ಇಂದು ಈ ಮಟ್ಟಕ್ಕೆ ವಿಜ್ಞಾಕ್ಷೇತ್ರ ಬೆಳೆದಿದೆ ಎಂದರೆ, ಅದಕ್ಕೆ ಅನೇಕ ವಿಜ್ಞಾನಗಳ ಶ್ರಮ ಸಾಕಷ್ಟಿದೆ. ವಿದ್ಯಾರ್ಥಿಗಳು ಕುತೋಹಲಕಾರಿಗಳಾಗಿರಬೇಕು. ಹೊಸ ವಿಷಯಗಳನ್ನು ತಿಳಿದುಕೊಂಡು, ನಾವಿನ್ಯತೆ ಸೃಜನಶೀಲತೆ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಕೌಶಲಗಳನ್ನು ಅಳವಡಿಸಿಕೊಂಡು ಸ್ವಾವಲಂಬನೆಯುತವಾದಜೀವನ ಸಾಗಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಸೈಯದ್ ಹಮೀದ್‍ಪ್ರಿಯಾಂಕಾ ಉಜಳಂಬಿ, ನಿಲೊಫರ್ ಶೇಖ್, ಪೂಜಾಜಮಾದಾರ, ಪೂಜಾ ಹೂಗಾರ ಹಾಗೂ ವಿದ್ಯಾರ್ಥಿಗಳಿದ್ದರು.