ಆ.೧೪ ಶಾಸಕರ ಕಛೇರಿಗಳಿಗೆ ಪಂಜಿನ ಮೆರವಣಿಗೆ
ರಾಯಚೂರು, ಆ.೧೨-
ಸರ್ಕಾರಿ ಭೂಮಿಗಳಲ್ಲಿ ೯೪ಸಿ, ೯೪ಸಿಸಿ ರಡಿಯಲ್ಲಿ ವಸತಿ ನಿವೇಶನಗಳ ಸಕ್ರಮಗೊಳಿಸಲು ಭೂಮಿ ಮಂಜೂರಾತಿ ನೀಡಲು ಆಗ್ರಹಿಸಿ ಆಗಸ್ಟ್ ೧೪ ರಂದು ಶಾಸಕರ ಕಛೇರಿಗಳಿಗೆ ಪಂಜಿನ ಮೆರವಣಿಗೆ ನಡೆಸಲಾಗುತ್ತದೆ ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಸಂಚಾಲಕ ಸದಸ್ಯ ಮಾರೆಪ್ಪ ಹರವಿ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ವಸತಿ ರಹಿತರನ್ನು ನಿಲ್ಲಕ್ಷ್ಯಮಾಡುತ್ತಿರುವ ಸರಕಾರದ ಧೋರಣೆಯನ್ನು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದ ಸಂಚಾಲಕ ಮಾರೆಪ್ಪ ಹರವಿ ಕೂಡಲೇ ಬಗರ್ ಹುಕುಂ ಮತ್ತು ನಿವೇಶನ, ವಸತಿ ಕಲ್ಪಿಸಬೇಕು. ಶಾಸಕರ ಅಧ್ಯಕ್ಷತೆಯಲ್ಲಿ ಈಗಾಗಲೇ ಬಗರ್ ಹುಕುಂ ಸಕ್ರಮ ಸಮಿತಿಯು ರಚನೆಯಾಗಿ ಒಂದು ವರ್ಷ ಕಳೆದಿದ. ಆದರೆ ಸಭೆಗಳು ನಡೆಯುತ್ತಿಲ್ಲ, ಭೂಮಿ ಮಂಜೂರಾತಿಯೂ ಆಗುತ್ತಿಲ್ಲ. ಅರ್ಜಿ ಹಾಕಿದ ಲಕ್ಷಾಂತರ ಭೂಹೀನರು ಭೂಮಿಗಾಗಿ ಶಾಸಕರು ಹಾಗೂ ತಾಲ್ಲೂಕು ಕಛೇರಿಗಳಿಗೆ ಅಲೆದಲೆದು ರೋಸಿ ಹೋಗಿದ್ದಾರೆ. ಫಾರಂ.೫೦, ೫೩, ೫೭ ಹಾಗೂ ಅರಣ್ಯ ಹಕ್ಕಿನಡಿ ಅರಿಸಲ್ಲಿಸಿದ ಭೂರಹಿತರೆಲ್ಲರಿಗೂ, ಹಾಗೂ
ದೇಶಕ್ಕೆ ಬಂದ ಸ್ವಾತಂತ್ರ್ಯ ನಮ್ಮ ಬದುಕಿಗೂ ಬೇಕಲ್ಲವೇ? “ನಮಗೆಂದು ಭೂಮಿ – ನಮಗೆಂದು ವಸತಿ ನಮಗೆಂದು ಸ್ವಾತಂತ್ರ್ಯ” ಎಂಬ ಆಗ್ರಹವನ್ನು ಶಾಸಕರ ಮೂಲಕ ಸರ್ಕಾರಕ್ಕೆ ಮುಂದಿಡುತ್ತಿದ್ದೇವೆ. ಶಾಸಕರು ಹಾಗೂ ಸರಕಾರದಿಂದ ಸಕರಾತ್ಮಕ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತೇವೆ. ಶಾಸಕರು ನಮ್ಮ ಮನವಿಗೆ ಪೂರಕವಾಗಿ ಸ್ಪಂದಿಸಿದರೆ ಸರಿ. ಇಲ್ಲದಿದ್ದರೆ ಸ್ವಾತಂತ್ರ್ಯ ದಿನಾಚರಣೆಯ ದಿನ ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಭಾವುಟ ಪ್ರದರ್ಶಿಸಲಾಗುವುದೆಂದು ಅವರು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಗೋವಿಂದದಾಸ್, ಅಂಜಿನಯ್ಯ, ಅಶೋಕ ನಿಲಗಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.