ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಪ್ರಮುಖ
ಕಲಬುರಗಿ:ಆ.12:ಯಾವುದೇಒಂದುರಾಷ್ಟ್ರದಅಭಿವೃದ್ಧಿಯಲ್ಲಿಯುವಕರ ಪಾತ್ರತುಂಬಾ ಪ್ರಮುಖವಾಗಿದ್ದು, ಆದರೆ, ಪ್ರಸ್ತುತವಾಗಿಯುವಕರು ಅನೇಕ ಚಟಗಳಿಗೆ ಬಲಿಯಾಗಿತಮ್ಮಅಮೂಲ್ಯವಾದ ಸಮಯ ಮತ್ತುಜೀವನವನ್ನುಹಾಳು ಮಾಡಿಕೊಳ್ಳುತ್ತಿದ್ದಾರೆ. ಅವರಿಗೆ ಸೂಕ್ತವಾದ ಮಾರ್ಗದರ್ಶನ, ಸಂಸ್ಕಾರ ನೀಡಿಅಮೂಲ್ಯವಾದ ಸಂಪತ್ತನ್ನಾಗಿಸಿ, ಅವರಲ್ಲಿರುವ ಶಕ್ತಿಯನ್ನು ಸಂಪೂರ್ಣವಾಗಿ ಸದ್ಬಳಕೆ ಮಾಡಿಕೊಂಡರೆ, ಸದೃಢರಾಷ್ಟ್ರನಿರ್ಮಾಣವಾಗಲು ಸಾಧ್ಯವಿದೆಯೆಂದುಉಪನ್ಯಾಸಕ, ಚಿಂತಕಎಚ್.ಬಿ.ಪಾಟೀಲ ಅಭಿಮತ ವ್ಯಕ್ತಪಡಿಸಿದರು.
ನಗರದ ಶಹಾಬಜಾರ ಮಹಾದೇವ ನಗರದಲ್ಲಿರುವ ‘ಸ್ವಾತಿ ಪ್ರೌಢಶಾಲೆ’ಯಲ್ಲಿ’ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದಜರುಗಿದ ‘ಅಂತಾರಾಷ್ಟ್ರೀಯಯುವ ದಿನಾಚರಣೆ’ಯಕಾರ್ಯಕ್ರಮವನ್ನು ಉದ್ಘಾಟಿಸಿ ಅವರುಮಾತನಾಡುತ್ತಿದ್ದರು.
ಸಂಸ್ಥೆಯಅಧ್ಯಕ್ಷಚನ್ನಬಸಪ್ಪ ಗಾರಂಪಳ್ಳಿ ಮಾತನಾಡಿ, ಯುವಕರುಕೆಟ್ಟ ಚಟಗಳಿಗೆ ದಾಸರಾಗುವುದು ಬೇಡ. ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಿ. ವಿಷಯದಜ್ಞಾನ ಪಡೆದರೆ ಸಾಲದು. ಬದಲಿಗೆ ಪಡೆದಜ್ಞಾನವನ್ನುಕಾರ್ಯರೂಪದಲ್ಲಿತರುವ ಕೌಶಲಗಳನ್ನು ಅಳವಡಿಸಿಕೊಂಡರೆ, ಸ್ವಾವಲಂಬನೆಯುತವಾದಜೀವನ ಸಾಗಿಸಲು ಸಾಧ್ಯವಾಗುತ್ತದೆಎಂದರು.
ಕಾರ್ಯಕ್ರಮದಲ್ಲಿ ಕ.ರಾ.ಪ್ರಾ.ಶಾ.ಶಿ.ಸಂಘದ ಆಳಂದ ತಾಲೂಕಾಧ್ಯಕ್ಷನರಸಪ್ಪ ಬಿರಾದಾರದೇಗಾಂವ, ಮುಖ್ಯ ಶಿಕ್ಷಕಿ ಸಂಗೀತಾ ಸಾಲಿ ಹಾಗೂ ಶಿಕ್ಷಕರು, ವಿದ್ಯಾರ್ಥಿಗಳಿದ್ದರು.