ಸ್ವಾತಂತ್ರ್ಯ ದಿದಿನದಂದು ಕರಾಳ ದಿನ ಆಚರಣೆ
(ಸಂಜೆವಾಣಿ ಪ್ರತಿನಿಧಿಯಿಂದ)
ಮಾನವಿ, ಆ ೧೨,ಕಳೆದ ಐದು ವರ್ಷಗಳಿಂದ ಶಿಕ್ಷಣ ಇಲಾಖೆ ದಿನಕ್ಕೊಂದು ಆದೇಶ ಹೊರಡಸುತ್ತಿದೆ.
ತಮ್ಮ ಸರ್ಕಾರಿ ಶಾಲೆಯಲ್ಲಿ ಯಾವ ನಿಯಮಗಳನ್ನು ಪಾಲಿಸದೆ ಹಾಗೂ ಭಾರತದ ಸರ್ವೋಚ್ಛ ನ್ಯಾಯಾಲಯದ ತೀರ್ಪುಗಳನ್ನು ಕಡೆಗಣಿಸಿ ಸರ್ಕಾರ ತಮ್ಮ ಮನ ಬಂದಂತೆ ವರ್ತಿಸುತ್ತಿದೆ.
ಪಟ್ಟಣದ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿಯನ್ನು ನಡೆಸಿ ಮಾತನಾಡಿದ ಖಾಸಗಿ ಶಾಲೆ ಒಕ್ಕೂಟದ ಅಧ್ಯಕ್ಷರಾದ ಎಚ್ ಶರ್ಫದ್ದೀನ್ ಅವರು ರಾಜ್ಯ ಸರ್ಕಾರ ತಮ್ಮ ಇಲಾಖೆಗಳಾದ ಅಗ್ನಿ ಸುರಕ್ಷತಾ ಇಲಾಖೆ, ಪಿ.ಡಬ್ಲ್ಯೂ.ಡಿ ಇಲಾಖೆ, ಮಕ್ಕಳ ಹಕ್ಕು ಆಯೋಗ ಹಾಗೂ ಪೊಲೀಸ್ ಇಲಾಖೆಯಿಂದ ಭ್ರಷ್ಟಾಚಾರ ನಡೆಸುತ್ತಿದೆ.
ಹೊಸ ಶಿಕ್ಷಣ ಸಂಸ್ಥೆ ರಚಿಸಿದ ನಿಯಮಗಳನ್ನು ಯತಾವತ್ತಾಗಿ ಹಳೆ ಶಿಕ್ಷಣ ಸಂಸ್ಥೆಗಳಿಗೆ ಹೇರುವ ಮುಖಾಂತರ ದೊಡ್ಡಮಟ್ಟದ ಕಿರುಕುಳ ಹಾಗೂ ದೌರ್ಜನ್ಯ ನಮ್ಮ ಖಾಸಗಿ ಸಂಸ್ಥೆಗಳ ಮೇಲೆ ನಡೆಸುತ್ತಿದೆ. ಆದಕಾರಣದ ಆಗಸ್ಟ್ ೧೫ ರಂದು ನಮ್ಮ ಕೈ ಗಳಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟನೆ ಮಾಡುತ್ತೇವೆ.
ನಾವು ಶಿಕ್ಷಣ ಇಲಾಖೆ ವಿರುದ್ಧ ಪ್ರಧಾನ ಮಂತ್ರಿಗಳಿಂದ ಹಿಡಿದು ಮುಖ್ಯಮಂತ್ರಿಗಳ ತನಕ ದೂರು ನೀಡಿದರು ಯಾವುದೆ ಪ್ರಯೋಜನವಾಗಿಲ್ಲ ನಮಗೆ ಅನಿವಾರ್ಯವಾಗಿ ನ್ಯಾಯಾಲಯ ಮೊರೆ ಹೋಗಿದ್ದೇವೆ. ಕರ್ನಾಟಕ ಉಚ್ಚ ನ್ಯಾಯಾಲಯ ಐದು ಪ್ರಮುಖ ಪ್ರತ್ಯೇಕ ವಿಷಯಗಳಲ್ಲಿ ಸರಕಾರದ ಸುತ್ತೋಲೆಗಳನ್ನು ರದ್ದುಗೊಳಿಸಿ ಚೀಮಾರಿ ಹಾಕಿದರು ಕೂಡ ನ್ಯಾಯಲಯಕ್ಕೆ ಯಾವುದೇ ಒಂದು ಉದಾಹರಣೆ ನೀಡದೆ ೨೦ ತಿಂಗಳು ಕಳೆದ ನಂತರ ರದ್ದು ಮಾಡಿರುವಂತಹ ಆದೇಶದ ಮೇಲೆ ಶಿಕ್ಷಣ ಇಲಾಖೆ ಮೇಲ್ಮನವಿ ಹೋಗಿದೆ.
ಕಳೆದ ಮೂರು ವರ್ಷಗಳಿಂದ ಒಂದೆ ವರ್ಷಕ್ಕೆ ಮಾತ್ರ ಮಾನ್ಯತೆ ಹಾಗೂ ನವೀಕರಣ ಹಳೆಯ ಶಿಕ್ಷಣ ಸಂಸ್ಥೆಗಳಿಗೆ, ಸ್ವಾಭಾವಿಕ ಬೆಳವಣಿಗೆಯು ಶಿಕ್ಷಣ ಸಂಸ್ಥೆಗಳಿಗೆ ನೀಡುವ ಮುಖಾಂತರ ಪ್ರತಿ ವರ್ಷ ಸರಕಾರ ಭ್ರಷ್ಟಾಚಾರ ನಡೆಸುತ್ತಿದೆ.ನಮ್ಮ ಶಿಕ್ಷಣ ಸಂಸ್ಥೆ, ತೆಗೆದುಕೊಳ್ಳಬಹುದಾದ ಶುಲ್ಕ, ಹಾಕದೆ ಇರುವ ರೀತಿಯಲ್ಲಿ ತಂತ್ರಾಂಶ ಬಿಡುಗಡೆ ಮಾಡಿ, ರಾಜ್ಯದ ಹತ್ತಾರು ಸಾವಿರ ಶಿಕ್ಷಣ ಸಂಸ್ಥೆಗಳಿಗೆ ಕಿರುಕುಳ ನೀಡುತ್ತಿದೆ.
ಪ್ರತಿ ವರ್ಷ ಮಾನ್ಯತೆ ಹಾಗೂ ನವೀಕರಣದ ಹೆಸರಿನಲ್ಲಿ ಶಿಕ್ಷಣ ಸಂಸ್ಥೆಗಳಿಂದ ಹಣ ವಸೂಲಿ ಮಾಡಿ ನಂತರ ಒಂದು ವರ್ಷಕ್ಕೆ ಮಾತ್ರ ಮಾನ್ಯತೆ ಹಾಗೂ ನವೀಕರಣ ಮಾಡುತ್ತಿದೆ. ಒಂದು ವೇಳೆ ಖಾಸಗಿ ಸಂಸ್ಥೆಯವರು ಹಣ ನೀಡದಿದ್ದರೆ ದಾಖಲೆಗಳ ನೆಪವಡ್ಡಿ ಮಾನ್ಯತೆ ತಿರಸ್ಕರಿಸುವುದು ಮಾಡುತ್ತಾರೆ ನಮ್ಮ ಖಾಸಗಿ ಸಂಸ್ಥೆಯಲ್ಲಿ ೯೦% ಬಡವರ ಮಕ್ಕಳು ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ.
ನಮ್ಮ ಖಾಸಗಿ ಶಾಲೆಗಳನ್ನು ಮುಚ್ಚುವ ಹುನ್ನಾರ ಸರ್ಕಾರ ನಡೆಸುತ್ತಿದೆ ಆದ ಕಾರಣ ರಾಷ್ಟ್ರಧ್ವಜಕ್ಕೆ ಯಾವುದೇ ಆಗೌರವ ತೋರದೆ ಸಾಂಕೇತಿಕವಾಗಿ ಪ್ರತಿಭಟನೆ ಮಾಡುತ್ತೆವೆ ಎಂದರು.
ಈ ಸಂದರ್ಭದಲ್ಲಿ ಶೇಕ್ ಫರೀದ್ ಉಮ್ರಿ, ಭೀಮರಾಯ, ಪ್ರಭು ಟಕ್ಕಳಿಕಿ, ಗೀತಾ ಹಿರೇಮಠ, ಮೊಹಮ್ಮದ ಹಾರೂನ್, ಅಬ್ದುಲ್ ರಹೀಮ್, ಚಂದ್ರಶೇಖರ್ ಗೌಡ, ಹುಸೇನ್ ಭಾಷ ಉಪಸ್ಥಿತರಿದ್ದರು.